ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಜನ ಉತ್ತರ ನೀಡಲಿದ್ದಾರೆ: ಹಿಂದೂ ಧರ್ಮ ಹುಟ್ಟಿನ ಹೇಳಿಕೆ ವಿಚಾರದಲ್ಲಿ ಗೃಹ ಸಚಿವ ಪರಮೇಶ್ವರ ಪ್ರತಿಕ್ರಿಯೆ
ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಬಿಜೆಪಿಯವರಿಗೆ ಏನು ಬೇರೆ ಕಾನೂನು ಇದೆಯಾ? ಬಿಜೆಪಿಯವರು ಹೋರಾಟ ಮಾಡಲಿ ನಾವು ಉತ್ತರ ಕೊಡ್ತೀವಿ ಎಂದ ಪರಮೇಶ್ವರ ಅವರು ಈಗಾಗಲೇ ಜನ ಉತ್ತರ ಕೊಟ್ಟಿದ್ದಾರೆ, ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿಗೆ ಜನ ಉತ್ತರ ಕೊಡ್ತಾರೆ ಎಂದು ಪರಮೇಶ್ವರ್ ಇದೇ ಸಂದರ್ಭದಲ್ಲಿ ಮಾರ್ಮಿಕವಾಗಿ ಹೇಳಿದರು.
ಹುಬ್ಬಳ್ಳಿ, ಸೆಪ್ಟೆಂಬರ್ 8: ಗೃಹ ಸಚಿವ ಡಾ ಜಿ ಪರಮೇಶ್ವರ (Dr G Parameshwara) ಅವರು ಗದಗಕ್ಕೆ ತೆರಳುವ ಮಾರ್ಗದಲ್ಲಿ ಹುಬ್ಬಳ್ಳಿಗೆ (Hubballi) ಭೇಟಿ ನೀಡಿದ್ದಾರೆ. ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಸನಾತನ ಧರ್ಮದ ಬಗ್ಗೆ ಮಾತಾಡಿಲ್ಲ. ಬೇರೆಯವರು ಏನು ವಿಶ್ಲೇಷಣೆ ಮಾಡ್ತಾರೋ ಅದಕ್ಕೆಲ್ಲ ನಾನು ಉತ್ತರ ಕೊಡಲ್ಲ. ನಾನು ಸಮಯ ಸಂದರ್ಭದಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಹಿಂದೂ ಧರ್ಮ (Hindu dharma) ಯಾರಿಗೆ ಹುಟ್ಟಿದ್ದು, ಯಾವಾಗ ಹುಟ್ಟಿದ್ದು ಎಂಬು ನನ್ನ ಹೇಳಿಕೆ. ನಮ್ಮ ಅಭಿಪ್ರಾಯ ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಪರಮೇಶ್ವರ್ ಸ್ಪಷ್ಟನೆಯ ರೂಪದಲ್ಲಿ ಸನಾತನ ಧರ್ಮ ಕುರಿತಾದ ತಮ್ಮ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸನಾತನ ಧರ್ಮ ಕುರಿತಾದ ತಮ್ಮ ಹೇಳಿಕೆಯ ಬಗ್ಗೆ ಯಾರು ಏನು ಬೇಕಾದರೂ ವಿಶ್ಲೇಷಣೆ ಮಾಡಲಿ. ಅವರು ಹಾಗೆ ಮಾತಾಡ್ತಾರೆ, ಹೀಗೆ ಮಾತಾಡ್ತಾರೆ ಅಂದ್ರೆ ನಾನು ಅದಕ್ಕೆ ಉತ್ತರ ಕೊಡೋಲ್ಲ. ಮೋದಿ ಅವರು ನಾನು ಹೇಳಿರೋ ಹೇಳಿಕೆ ಬಗ್ಗೆ ಮಾತಾಡಿಲ್ಲ. ಸನಾತನ ಧರ್ಮದ ವಿಚಾರವಾಗಿ ಮಾತಾಡಿದ್ದಾರೆ ಎಂದು ಜಿ ಪರಮೇಶ್ವರ ಇದೇ ಸಂದರ್ಭದಲ್ಲಿ ತಿಳಿಸಿದರು.
ಇದನ್ನೂ ಓದಿ: ಮದುವೆಯಾದ ಒಂದು ವರ್ಷದೊಳಗೆ ವಿಚ್ಚೇದನ ಕೋರಬಾರದೆಂಬ ನಿಯಮ ಕಡ್ಡಾಯವಲ್ಲ – ಹೈಕೋರ್ಟ್
ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಬಿಜೆಪಿಯವರಿಗೆ ಏನು ಬೇರೆ ಕಾನೂನು ಇದೆಯಾ? ಬಿಜೆಪಿಯವರು ಹೋರಾಟ ಮಾಡಲಿ ನಾವು ಉತ್ತರ ಕೊಡ್ತೀವಿ ಎಂದ ಪರಮೇಶ್ವರ ಅವರು ಈಗಾಗಲೇ ಜನ ಉತ್ತರ ಕೊಟ್ಟಿದ್ದಾರೆ, ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿಗೆ ಜನ ಉತ್ತರ ಕೊಡ್ತಾರೆ ಎಂದು ಪರಮೇಶ್ವರ್ ಇದೇ ಸಂದರ್ಭದಲ್ಲಿ ಮಾರ್ಮಿಕವಾಗಿ ಹೇಳಿದರು.
ಇನ್ನು ರಾಜ್ಯದ ಸ್ಥಿತಿಗತಿ ಬಗ್ಗೆ ಪ್ರತಿಕ್ರಿಯಿಸುತ್ತಾ ಬರಗಾಲದ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಿದೆ. ಶೀಘ್ರವೇ ಬರಗಾಲ ಘೋಷಣೆ ಮಾಡಲಾಗವುದು ಎಂದು ಪರಮೇಶ್ವರ್ ಮುನ್ಸೂಚನೆ ಕೊಟ್ಟರು. ಜೊತೆಗೆ ಕೇಂದ್ರಕ್ಕೂ ವರದಿ ಕಳಸ್ತೀವಿ ಎಂದ ಪರಮೇಶ್ವರ್ ಅವರು ಗದಗದಲ್ಲಿ ಹೊಸದಾಗಿ ಕಮಾಂಡೋ ಸೆಂಟರ್ ಮಾಡಿದ್ದಾರೆ. ಹಾಗಾಗಿ ಗದಗಕ್ಕೆ ಹೋಗ್ತಿದೀನಿ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ