ನನ್ನ ಮುಂದೆ ಮಿನಿ ಇಂಡಿಯಾ ಹೊರಹೊಮ್ಮಿದೆ: ಕುವೈತ್​ನಲ್ಲಿ ಪ್ರಧಾನಿ ಮೋದಿ ಮಾತು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 21, 2024 | 8:08 PM

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 4 ದಶಕಗಳ ನಂತರ ಕುವೈತ್‌ಗೆ ಭೇಟಿ ನೀಡಿದ್ದಾರೆ. ಭಾರತ ಮತ್ತು ಕುವೈತ್ ನಡುವಿನ ದೀರ್ಘಕಾಲದ ಸಂಬಂಧವನ್ನು ಮೆಲುಕು ಹಾಕಿದ ಅವರು, ಭಾರತ-ಕುವೈತ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಕೌಶಲ್ಯ, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಸಹಕಾರವನ್ನು ಬಲಪಡಿಸುವ ಉದ್ದೇಶ ಹೊಂದಿದ್ದಾರೆ.

ನನ್ನ ಮುಂದೆ ಮಿನಿ ಇಂಡಿಯಾ ಹೊರಹೊಮ್ಮಿದೆ: ಕುವೈತ್​ನಲ್ಲಿ ಪ್ರಧಾನಿ ಮೋದಿ ಮಾತು
ನನ್ನ ಮುಂದೆ ಮಿನಿ ಇಂಡಿಯಾ ಹೊರಹೊಮ್ಮಿದೆ: ಕುವೈತ್​ನಲ್ಲಿ ಪ್ರಧಾನಿ ಮೋದಿ ಮಾತು
Follow us on

ಕುವೈತ್​, ಡಿಸೆಂಬರ್​ 21: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎರಡು ದಿನ ಕುವೈತ್‌ ಪ್ರವಾಸದಲ್ಲಿದ್ದಾರೆ. 4 ದಶಕಗಳ ನಂತರ ಭಾರತದ ಪ್ರಧಾನಿಯೊಬ್ಬರು ಕುವೈತ್​ಗೆ ಭೇಟಿ ನೀಡಿದ್ದಾರೆ. ಈ ವೇಳೆ ಕುವೈತ್​ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಕ್ಷಣ ನನಗೆ ವೈಯಕ್ತಿಕವಾಗಿ ಬಹಳ ವಿಶೇಷವಾಗಿದೆ. ನನ್ನ ಮುಂದೆ ಮಿನಿ ಇಂಡಿಯಾ ಹೊರಹೊಮ್ಮಿದೆ ಎಂದು ಹೇಳಿದ್ದಾರೆ.

ಭಾರತದ ಎಲ್ಲ ಪ್ರದೇಶದ ಜನರು ನನ್ನ ಮುಂದೆ ಕಾಣುತ್ತಿದ್ದಾರೆ. ಎಲ್ಲರ ಹೃದಯದಲ್ಲಿ ಒಂದೇ ಪ್ರತಿಧ್ವನಿ ‘ಭಾರತ್ ಮಾತಾ ಕೀ ಜೈ’. 4 ದಶಕಗಳ ನಂತರ ಭಾರತದ ಪ್ರಧಾನಿಯೊಬ್ಬರು ಕುವೈತ್​ಗೆ ಬಂದಿದ್ದಾರೆ. ನೀವು ಭಾರತದಿಂದ ಇಲ್ಲಿಗೆ ಬರಲು ಬಯಸಿದರೆ 4 ಗಂಟೆ ಸಾಕು. ಆದರೆ, ಭಾರತದ ಪ್ರಧಾನಿ ಇಲ್ಲಿಗೆ ಬರಲು 4 ದಶಕ ಬೇಕಾಯಿತು ಎಂದಿದ್ದಾರೆ.

ಇದನ್ನೂ ಓದಿ: PM Modi Kuwait Visit: 43 ವರ್ಷಗಳ ಬಳಿಕ ಕುವೈತ್​ಗೆ ಭಾರತದ ಪ್ರಧಾನಿ ಭೇಟಿ, 2 ದಿನಗಳಲ್ಲಿ ಮೋದಿ ಎಲ್ಲೆಲ್ಲಿಗೆ ಹೋಗ್ತಾರೆ?

ಕೌಶಲ್ಯ, ತಂತ್ರಜ್ಞಾನ, ನಾವೀನ್ಯತೆ ಮತ್ತು ಮಾನವಶಕ್ತಿ ಕುವೈತ್​ಗೆ ಅಗತ್ಯವಿದೆ. ಆ ಮೂಲಕ ವ್ಯಾಪಾರದಲ್ಲಿ
ನಾವೀನ್ಯತೆ ಹೊಂದುವ ಮೂಲಕ ಆರ್ಥಿಕವಾಗಿ ಸದೃಢವಾಗಲು ಬಯಸುತ್ತಿದೆ. ಇದೇ ರೀತಿ ಭಾರತವು ನಾವೀನ್ಯತೆ ಮತ್ತು ತನ್ನ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಗಮನ ಹರಿಸಿದೆ. ನೂತನ ಕುವೈತ್​ಗೆ ಅಗತ್ಯವಿರುವ ಕೌಶಲ್ಯ, ತಂತ್ರಜ್ಞಾನ, ನಾವೀನ್ಯತೆ ಮತ್ತು ಮಾನವಶಕ್ತಿಯನ್ನು ಭಾರತ ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Narendra Modi: ಮಹಾರಾಷ್ಟ್ರ, ಹರ್ಯಾಣದಲ್ಲಿ ಮೋದಿ ಹೆಸರೇ ಮ್ಯಾಜಿಕ್: ರಾಹುಲ್​ ಆರೋಪಗಳೇ ಕೈಗೆ ತಿರುಗುಬಾಣ

ಗುಜರಾತಿಗೆ ಬಂದ ಕುವೈತ್ ವ್ಯಾಪಾರಿಗಳು ಹೇಗೆ ಗುಜರಾತಿ ಕಲಿತರು. ಜೊತೆಗೆ ನಮ್ಮ ಮಾರುಕಟ್ಟೆಗಳಲ್ಲಿ ತಮ್ಮ ವಿಶ್ವಪ್ರಸಿದ್ಧ ಮುತ್ತುಗಳನ್ನು ಹೇಗೆ ವ್ಯಾಪಾರ ಮಾಡಿದರು ಎಂಬುದನ್ನು ಗುಜರಾತಿನ ನಮ್ಮ ಹಿರಿಯರು ಈಗಲೂ ನೆನಪಿಸಿಕೊಳ್ಳುತ್ತಾರೆ. ಕುದುರೆಗಳು ಸೇರಿದಂತೆ ಇತರೆ ಅನೇಕ ವಸ್ತುಗಳನ್ನು ಸರಬರಾಜು ಮಾಡಲಾಗಿದೆ. ಆ ಮೂಲಕ ಭಾರತ ಮತ್ತು ಕುವೈತ್ ನಡುವೆ ದೀರ್ಘಕಾಲದ ಸಂಬಂಧವನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:08 pm, Sat, 21 December 24