ದೆಹಲಿ: ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಒತ್ತಡವನ್ನು ಕಡಿಮೆ ಮಾಡಲು, ರಿಫ್ರೆಶ್ ಮೂಡ್ನಲ್ಲಿರಲು ಮತ್ತು ತಮ್ಮ ಕೆಲಸದ ಮೇಲೆ ಗಮನ ನೀಡಲು ‘ವೈ-ಬ್ರೇಕ್ – ಯೋಗ ಅಟ್ ಆಫೀಸ್ ಚೇರ್‘ ನ್ನು (Take Yoga Break At Chair) ತೆಗೆದುಕೊಳ್ಳುವಂತೆ ಕೇಳಿಕೊಂಡಿದೆ. ಕೇಂದ್ರ ಸಿಬ್ಬಂದಿ ಸಚಿವಾಲಯವು ಹೊರಡಿಸಿರುವ ಆದೇಶದಂತೆ ಎಲ್ಲಾ ಕೇಂದ್ರ ಸರ್ಕಾರದ ಸಚಿವಾಲಯಗಳು/ಇಲಾಖೆಗಳು ಕೆಲಸದ ಸ್ಥಳದಲ್ಲಿ ಉದ್ಯೋಗಿಗಳಿಗೆ ಈ ಹೊಸ ಯೋಗ ಪ್ರೋಟೋಕಾಲ್ನ್ನು ಅಳವಡಿಸಿಕೊಳ್ಳಲು ಮತ್ತು ಇದರ ಬಗ್ಗೆ ಜಾಗೃತಿ ಮೂಡಿಸುವಂತೆ ಮಾಡಲು ಆದೇಶ ನೀಡಿದೆ. ವೈ-ಬ್ರೇಕ್ ಅಟ್ ವರ್ಕ್ಪ್ಲೇಸ್ನ್ನು ಆಯುಷ್ ಸಚಿವಾಲಯವು ಪರಿಚಯಿಸಿದೆ, ಇದು ಕೆಲಸದ ಸ್ಥಳದಲ್ಲಿ ಒತ್ತಡ, ರಿಫ್ರೆಶ್ ಮೂಡ್ ಮತ್ತು ಕೆಲಸದ ಕಡೆ ಹೆಚ್ಚು ಗಮನ ನೀಡಲು ಅವಕಾಶ ಮಾಡುತ್ತದೆ ಎಂದು ಹೇಳಿದೆ. ಇದರಿಂದ ಉದ್ಯೋಗಿಗಳ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮವನ್ನು ಉಂಟು ಮಾಡುತ್ತದೆ. ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೋಗ ಮತ್ತು ಸಚಿವಾಲಯದ ಸಿಬ್ಬಂದಿಗಳಿಗೆ ಒತ್ತಡ ಕೆಲಸದ ನಡುವೆ ಯೋಗಾಭ್ಯಾಸ ಮಾಡಲು ಸಾಧ್ಯವಾಗದ ಕಾರಣ ಆಯುಷ್ ಈ ಹೊಸ ವೈಶಿಷ್ಟ್ಯಗಳನ್ನು ಪರಿಚಯಸಿದೆ.
ಅಧಿಕಾರಿಗಳು ಈಗ ತಮ್ಮ ಕಚೇರಿಯ ಕುರ್ಚಿಯಲ್ಲಿ ಕುಳಿತುಕೊಂಡು “ವೈ-ಬ್ರೇಕ್ ವರ್ಕ್ಪ್ಲೇಸ್ ಯೋಗ” ಎಂಬ ಅಲ್ಪಾವಧಿಯ ಯೋಗವನ್ನು ಕುರ್ಚಿಯಲ್ಲಿ ಅಭ್ಯಾಸ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಬಹುದು ಎಂದು ಜೂನ್ 12 ರಂದು (ಸೋಮವಾರ) ಆದೇಶದಲ್ಲಿ ತಿಳಿಸಲಾಗಿದೆ. ಯೋಗ ಅಟ್ ಚೇರ್ಗಳನ್ನು ತಮ್ಮ ಎಲ್ಲ ಉದ್ಯೋಗಿಗಳು ಅಳವಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರವು ಆದೇಶ ನೀಡಿದ್ದು, ಈ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸುವಂತೆ ಕೇಳಿಕೊಂಡಿದೆ.
ಇದನ್ನೂ ಓದಿ:Yoga: ಒತ್ತಡ ಹೆಚ್ಚಾದಾಗ ನೀವು ಈ 4 ಯೋಗಾಸನಗಳನ್ನು ಮಾಡಿ
ಈ ಚೇರ್ ಬಗ್ಗೆ ಈ YouTube ಲಿಂಕ್ನಲ್ಲಿ ನೋಡಬಹುದು https://youtu.be/1qQQ3yUjnyM, https://youtu.be/2zBEUqc7nCc, https://youtu.be/aqYJR8HnSJI, https://youtu.be/I8YBnxWjHbg, ಮತ್ತು ಯೋಗ ಪೋರ್ಟಲ್ ಈ YouTube ಲಿಂಕ್ಗೆ ಹೋಗಿ https://yoga.ayush.gov.in/Y-Break/
ಇದು ಕೆಲಸದಿಂದ ವಿರಾಮವನ್ನು ತೆಗೆದುಕೊಳ್ಳುವ ಸಮಯದಲ್ಲಿ ಇದನ್ನು ಮಾಡಬಹುದು. ಇದು ಕೆಲವು ಸರಳ ಯೋಗ ಅಭ್ಯಾಸಗಳನ್ನು ಒಳಗೊಂಡಿದೆ, ಇದರಲ್ಲಿ ‘ಆಸನಗಳು’ (ಭಂಗಿಗಳು), ‘ಪ್ರಾಣಾಯಾಮ’ (ಉಸಿರಾಟದ ತಂತ್ರಗಳು) ಮತ್ತು ‘ಧ್ಯಾನ’ ಗಳನ್ನು ಒಳಗೊಂಡಿದೆ. ಇದನ್ನು ಪ್ರಖ್ಯಾತ ತಜ್ಞರು ಅಭಿವೃದ್ಧಿಪಡಿಸಲಾಗಿದೆ. ಈ ಬಗ್ಗೆ ಆಯುಷ್ ಸಚಿವಾಲಯದ ವೆಬ್ಸೈಟ್ನಲ್ಲಿ ವಿವರಗಳನ್ನು ನೀಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:57 am, Tue, 13 June 23