Yoga: ಒತ್ತಡ ಹೆಚ್ಚಾದಾಗ ನೀವು ಈ 4 ಯೋಗಾಸನಗಳನ್ನು ಮಾಡಿ

ಇತ್ತೀಚಿನ ದಿನಗಳಲ್ಲಿ ಒತ್ತಡ ಮತ್ತು ಆತಂಕ ಸಾಮಾನ್ಯವಾಗಿ ಬಿಟ್ಟಿದೆ. ಆ ಸವಾಲಿನ ದಿನಗಳಲ್ಲಿ, ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುವ ಯೋಗಾಸನಗಳು ನಿಮ್ಮನ್ನು ಮರಳಿ ನೆಮ್ಮದಿಯ ಜೀವನಕ್ಕೆ ತರಲು ಸಹಕಾರಿಯಾಗಲಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

Yoga: ಒತ್ತಡ ಹೆಚ್ಚಾದಾಗ ನೀವು ಈ 4 ಯೋಗಾಸನಗಳನ್ನು ಮಾಡಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: May 30, 2023 | 6:50 PM

ಇತ್ತೀಚಿನ ದಿನಗಳಲ್ಲಿ ಜೀವನದ ಅವ್ಯವಸ್ಥೆಯ ಮಧ್ಯೆ, ನಾವೆಲ್ಲರೂ ಒತ್ತಡ ಮತ್ತು ಆತಂಕದ ಸವಾಲಿನ ದಿನಗಳನ್ನು ಅನುಭವಿಸಿರುತ್ತೇವೆ. ಇದೆಲ್ಲದರಿಂದ ಮುಕ್ತಿ ಪಡೆಯಬೇಕು ಎಂಬ ಹಂಬಲವಿದ್ದರೂ ಅದು ಸಾಧ್ಯವಾಗುವುದಿಲ್ಲ. ಅತಿಯಾದ ನಿರಾಶಾದಾಯಕ ಭಾವನೆಯಿಂದ ಸಾಂತ್ವನ ಪಡೆಯಲು ಮನಸ್ಸು ಹಂಬಲಿಸಿವುದು ಸಹಜ. ಹಾಗಾಗಿ ಆಂತರಿಕ ಶಾಂತಿಯನ್ನು ಮರಳಿ ಪಡೆಯುವಲ್ಲಿ ಸಹಾಯ ಮಾಡುವ ಸರಳ, ಶಕ್ತಿಯುತ ಆಸನಗಳಿವೆ. ಮನಸ್ಸು, ದೇಹ ಮತ್ತು ಆತ್ಮವನ್ನು ಸಮನ್ವಯಗೊಳಿಸುವ ಪ್ರಾಚೀನ ಅಭ್ಯಾಸವಾದ ಯೋಗವು ಭಾವನಾತ್ಮಕವಾಗಿ ನಮ್ಮ ಯೋಗಕ್ಷೇಮಕ್ಕೆ ಸಹಕಾರಿಯಾಗಲಿದೆ.

ಈ ನಾಲ್ಕು ಯೋಗ ಆಸನಗಳು ನಿಮ್ಮ ದೇಹ ಮತ್ತು ಮನಸ್ಸಿಗೆ ಅಗತ್ಯವಾದ ವಿರಾಮ ನೀಡಬಲ್ಲದು ಈ ಬಗ್ಗೆ ಮಾಹಿತಿ ಇಲ್ಲಿದೆ:

ಬಾಲಾಸನ (ಮಗುವಿನ ಭಂಗಿ):

ಬಾಲಾಸನವು ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನೆಲದ ಮೇಲೆ ಮಂಡಿಯೂರಿ, ನಿಮ್ಮ ದೇಹವನ್ನು ಮುಂದಕ್ಕೆ ಮಡಚಿ, ಮತ್ತು ಹಣೆಯನ್ನು ನೆಲಕ್ಕೆ ನಿಧಾನವಾಗಿ ತಾಗಿಸಿ, ದೇಹ ವಿಶ್ರಾಂತಿ ಪಡೆಯಲು ಬಿಡಿ. ನೀವು ಭೂಮಿಗೆ ಶರಣಾಗುವಾಗ ನಿಮ್ಮ ಬೆನ್ನಿನ ಕೆಳಭಾಗದಲ್ಲಿ ಮೃದುವಾದ ಹಿಗ್ಗುವಿಕೆಯ ಅನುಭವವಾಗುತ್ತದೆ. ಉದ್ವೇಗ ಮತ್ತು ಒತ್ತಡವನ್ನು ಹೊರಹಾಕಿ, ಆಳವಾಗಿ ಉಸಿರಾಡಿ. ಶಾಂತತೆ ಇರಲಿ. ಚಿಂತೆಗಳನ್ನು ಹೊರಹಾಕಿ. ಈ ಭಂಗಿಯಲ್ಲಿ ನಿಮ್ಮ ಸಮಸ್ಯೆಗಳಿಗೆ ಒಂದು ರೀತಿಯ ಸಾಂತ್ವನ ಕಂಡುಕೊಳ್ಳುತ್ತೀರಿ.

ವಿಪರಿತಾ ಕರಣಿ (ಲೆಗ್ಸ್-ಅಪ್-ದಿ-ವಾಲ್ ಪೋಸ್):

ಮನಸ್ಸು ಮತ್ತು ದೇಹಕ್ಕೆ ತಕ್ಷಣದ ಶಾಂತತೆಯನ್ನು ತರುವ ಭಂಗಿಯಾದ ವಿಪರಿತಾ ಕರಣಿಯಿಂದ ದಿನದ ಹೊರೆಗಳಿಂದ ಪಾರಾಗಬಹುದು. ನಿಮ್ಮ ಬೆನ್ನಿನ ಮೇಲೆ ಮಲಗಿ, ನಿಮ್ಮ ಕಾಲುಗಳನ್ನು ಗೋಡೆ ಅಥವಾ ಗಟ್ಟಿ ಮುಟ್ಟಾದ ಹಲಗೆ ಅಥವಾ ಇನ್ನಿತರ ವಸ್ತುಗಳಿಗೆ ತಾಡಿಕೊಳ್ಳಿ. ರಕ್ತದ ಹಿತವಾದ ಸಂವೇದನೆ ನಿಮ್ಮ ಹೃದಯದ ಕಡೆಗೆ ಹರಿಯಲು ಅವಕಾಶ ನೀಡಿ ಮತ್ತು ನಿಮ್ಮ ಇಡೀ ದೇಹವನ್ನು ವಿಶ್ರಾಂತಿಗೊಳಿಸಲು ಅವಕಾಶ ಮಾಡಿಕೊಡಿ. ಬಳಿಕ ನೀವು ನಿಮ್ಮ ಕಣ್ಣುಗಳನ್ನು ಮುಚ್ಚಬೇಕು. ನಿಮ್ಮ ಒತ್ತಡ ಹೇಗೆ ಮಾಯವಾಗುತ್ತದೆ ಎಂಬುದು ನಿಮಗೆ ಅರಿವಾಗುತ್ತದೆ. ಜೊತೆಗೆ ಮನಸ್ಸು ಶಾಂತಿಯಿಂದ ಕೂಡಿರುತ್ತದೆ.

ಅಂಜಲಿ ಮುದ್ರೆ (ಪ್ರಾರ್ಥನಾ ಭಂಗಿ):

ಅಂಜಲಿ ಮುದ್ರೆ, ಪ್ರಾರ್ಥನೆಯ ಸನ್ನೆ, ನಮ್ಮನ್ನು ನಮ್ಮ ಆಂತರಿಕ ಆತ್ಮ ಮತ್ತು ಬ್ರಹ್ಮಾಂಡದೊಂದಿಗೆ ಸಂಪರ್ಕಿಸುತ್ತದೆ. ಆರಾಮದಾಯಕವಾಗಿ ಅಡ್ಡ ಕಾಲಿನ ಭಂಗಿಯಲ್ಲಿ ಕುಳಿತುಕೊಳ್ಳಿ, ಅಂದರೆ ಒಂದು ಕಾಲಿನ ಮೇಲೆ ಇನ್ನೊಂದು ಕಾಲು ಹಾಕಿ ಕುಳಿತುಕೊಳ್ಳಿ. ಬಳಿಕ ಹೃದಯದ ಕೇಂದ್ರ ಭಾಗದಲ್ಲಿ ನಿಮ್ಮ ಅಂಗೈಗಳನ್ನು ಒಟ್ಟಿಗೆ ಸೇರಿಸಿ. ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ ಮತ್ತು ಯಾವುದೇ ನಕಾರಾತ್ಮಕ ಭಾವನೆಗಳು ನಿಮ್ಮ ಮುಂದೆ ಬರಬಾರದು. ಆಳವಾಗಿ ಉಸಿರಾಡುವಾಗ, ಕೃತಜ್ಞತಾ ಭಾವ ಹೃದಯವನ್ನು ತುಂಬಲು ಅವಕಾಶ ನೀಡಿ, ಶಾಂತ ಮತ್ತು ಸಮತೋಲನದ ಪ್ರಜ್ಞೆಯನ್ನು ಆರಿಸಿಕೊಳ್ಳಿ.

ಶವಾಸನ (ಶವದ ಭಂಗಿ):

ವಿಶ್ರಾಂತಿ ಭಂಗಿಯಾದ ಶವಾಸನವು ನಿಮ್ಮನ್ನು ಸಂಪೂರ್ಣವಾಗಿ ಎಲ್ಲ ಚಿಂತೆಗಳಿಂದ ಶರಣಾಗಲು ಮತ್ತು ದಿನದ ಒತ್ತಡ, ಆತಂಕ ಎಲ್ಲವನ್ನೂ ಮರೆಸಾಲು ಸಹಾಯ ಮಾಡುತ್ತದೆ. ಅಂಗಾತವಾಗಿ ಮಲಗಿ, ತೋಳುಗಳನ್ನು ಮಡಚದೆ ನೇರವಾಗಿ ಇಟ್ಟುಕೊಳ್ಳಿ. ಅಂಗೈಯನ್ನು ಮೇಲಕ್ಕೆ ಮುಖ ಮಾಡಿ, ನಿಮ್ಮ ಕಣ್ಣುಗಳನ್ನು ಮುಚ್ಚಿ ದೇಹದಲ್ಲಿರುವ ಯಾವುದೇ ರೀತಿಯ ಉದ್ವೇಗವನ್ನು ಹೊರಹಾಕಿ. ಆಳವಾಗಿ ವಿಶ್ರಾಂತ ಸ್ಥಿತಿಯನ್ನು ಪ್ರವೇಶಿಸುತ್ತಿದ್ದಂತೆ, ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಿ, ಯಾವುದೇ ನಕಾರಾತ್ಮಕ ಯೋಚನೆ ಇದ್ದರೂ ಹೊರಹಾಕಿ. ಈ ಆನಂದಮಯ ನಿಶ್ಚಲತೆಯಲ್ಲಿ, ಶಾಂತಿಯನ್ನು ಕಂಡುಕೊಳ್ಳಿ ಮತ್ತು ನಿಮ್ಮ ಆಂತರಿಕ ಸಮತೋಲನವನ್ನು ಕಾಪಾಡಿಕೊಳ್ಳಿ.

ಇದನ್ನೂ ಓದಿ:Yoga for Constipation: ಈ ಯೋಗಾಸನದಿಂದ ನೈಸರ್ಗಿಕವಾಗಿ ಮಲಬದ್ಧತೆಯನ್ನು ನಿವಾರಿಸಿ

ಬಾಲಾಸನ, ವಿಪರಿತಾ ಕರಣಿ, ಅಂಜಲಿ ಮುದ್ರಾ ಮತ್ತು ಶವಾಸನವನ್ನು ಅಭ್ಯಾಸ ಮಾಡುವ ಮೂಲಕ, ಜೀವನದ ಪ್ರಕ್ಷುಬ್ಧತೆಯ ನಡುವೆ ಶಾಂತಿ ಮತ್ತು ಪ್ರಶಾಂತತೆಯನ್ನು ಕಂಡುಕೊಳ್ಳಿ. ಮುಂದಿನ ಬಾರಿ ನೀವು ಕೆಟ್ಟ ದಿನವನ್ನು ಎದುರಿಸಿತ್ತಿದ್ದಲ್ಲಿ, ಯೋಗದ ಶಕ್ತಿಯನ್ನು ನೆನಪಿಟ್ಟುಕೊಳ್ಳಿ. ಆಸನಗಳು ನಿಮಗೆ ಶಾಂತಿ ಮತ್ತು ಯೋಗಕ್ಷೇಮದ ಸ್ಥಿತಿಯತ್ತ ಮಾರ್ಗದರ್ಶನ ನೀಡಲು ಅವಕಾಶ ನೀಡಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ