Amritsiddhi Yoga: ಅಮೃತಸಿದ್ಧಿ ಯೋಗ ಎಂದರೇನು? ಕಾರ್ಯಗಳ ಫಲವು ದ್ವಿಗುಣವಾಗಬೇಕೇ? ಇಲ್ಲಿದೆ ಮಾಹಿತಿ

ಮನುಷ್ಯನ ಜೀವನವು ಒಂದು ಅಗೋಚರವಾದ ವ್ಯವಸ್ಥೆ. ಅದನ್ನು ಸುಖವಾಗಿ ನೆಮ್ಮದಿಯಿಂದ ಅನುಭವಿಸುವುದು ಒಂದು ಕಲೆ. ಈ ಜೀವನವನ್ನು ಸುಂದರವಾಗಿಸಲು ಹಲವಾರು ಹಾದಿಗಳಿವೆ. ಆ ಹಾದಿಗಳಲ್ಲಿ ಸಾಗುವಾಗ ಎಡುವಿದೆರೆ ಅದರಷ್ಟು ದೊಡ್ಡ ಕಂಟಕ ಬೇರೆ ಇಲ್ಲ.

Amritsiddhi Yoga: ಅಮೃತಸಿದ್ಧಿ ಯೋಗ ಎಂದರೇನು? ಕಾರ್ಯಗಳ ಫಲವು ದ್ವಿಗುಣವಾಗಬೇಕೇ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 16, 2023 | 9:55 AM

ನಾವು ಮಾಡಿದ ಅಥವಾ ಮಾಡುವ ಕಾರ್ಯಗಳ ಫಲವು ದ್ವಿಗುಣವಾಗಬೇಕೇ? ಮತ್ತು ಖರೀದಿಸುವ ವಸ್ತುಗಳಿಂದ ಶುಭ ಹಾಗೂ ವೃದ್ಧಿಯನ್ನು ಕಾಣಬೇಕೇ? ಹಾಗಾದರೆ ಈ ಯೋಗವಿರುವಾಗ ಕಾರ್ಯ ಖರೀದಿ ಮತ್ತು ಶುಭ ಕೆಲಸಗಳನ್ನು ಮಾಡಿರಿ. ಅದುವೇ ಅಮೃತಸಿದ್ಧಿಯೋಗ (Amritsiddhi Yoga). ಮನುಷ್ಯನ ಜೀವನವು ಒಂದು ಅಗೋಚರವಾದ ವ್ಯವಸ್ಥೆ. ಅದನ್ನು ಸುಖವಾಗಿ ನೆಮ್ಮದಿಯಿಂದ ಅನುಭವಿಸುವುದು ಒಂದು ಕಲೆ. ಈ ಜೀವನವನ್ನು ಸುಂದರವಾಗಿಸಲು ಹಲವಾರು ಹಾದಿಗಳಿವೆ. ಆ ಹಾದಿಗಳಲ್ಲಿ ಸಾಗುವಾಗ ಎಡುವಿದೆರೆ ಅದರಷ್ಟು ದೊಡ್ಡ ಕಂಟಕ ಬೇರೆ ಇಲ್ಲ. ಆದ್ದರಿಂದ ಸರಿಯಾಗಿ ತಿಳಿದು ಬಲ್ಲವರಿಂದ ಆ ಕುರಿತಾಗಿ ಮಾರ್ಗದರ್ಶನ ಪಡೆದುಕೊಂಡು ನಮಗೊಪ್ಪುವ ಸರಿಯಾದ ಹಾದಿಯ ಆಯ್ಕೆ ಸುಂದರ ಜೀವನಕ್ಕೆ ಭದ್ರ ಬುನಾದಿ ಆಗಬಲ್ಲದು.

ಇಂತಹ ಜೀವನದಲ್ಲಿ ನಮಗೆ ಅದೆಷ್ಟೋ ಕರ್ತವ್ಯಗಳು ಇರುತ್ತವೆ. ನಮ್ಮ ನೆಮ್ಮದಿಯೊಂದಿಗೆ ನಮ್ಮ ಕರ್ತವ್ಯವನ್ನು ನಿಭಾಯಿಸುವುದೂ ಅನಿವಾರ್ಯ ಆಗಿರುತ್ತದೆ. ಅಂತಹ ಕಾರ್ಯಗಳನ್ನು ಮಾಡಲು ಉತ್ತಮ ದಿನಗಳನ್ನು ಅರಸುವುದು ಸಹಜ. ಬಲ್ಲವರು ಹೇಳುವಂತೆ ತದೇವ ಲಗ್ನಂ ಸುದಿನಂ ತದೇವ ಕಾರ್ಯ ಆರಂಭದ ಲಗ್ನವೇ ಸುಲಗ್ನ (ಒಳ್ಳೆಯ ಘಳಿಗೆ) ಆ ದಿನವೇ ಸುದಿನ ಎಂದು ಹೇಳಿದ್ದರು. ಹಲವಾರು ಬಾರಿ ದಿನ ಆಯ್ಕೆಯ ತಪ್ಪಿನಿಂದಾಗಿ ಮಾಡುವ ಕಾರ್ಯ ಖರೀದಿ ಇತ್ಯಾದಿಗಳಲ್ಲಿ ನಷ್ಟ ಅನಿಷ್ಟ ಅನುಭವಿಸಿರುತ್ತೇವೆ ಅಲ್ಲವೇ? ಹಾಗಾದರೆ ಸುಲಭವಾಗಿ ಉತ್ತಮ ಯೋಗಗಳು ಇವೆಯೇ ಎಂದು ಕೇಳಿದರೆ ಇವೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ.

ಹಾಗಾದರೆ ಮಾಡುವ ಕಾರ್ಯಗಳಲ್ಲಿ ಉತ್ತಮ ಫಲವನ್ನು ಲಾಭವನ್ನು ಹೊಂದಬೇಕಾದರೆ ದಿನದ ಆಯ್ಕೆ ಹೇಗೆ ಮಾಡುವುದು ಉನ್ನುವುದಕ್ಕೆ ಇಲ್ಲಿದೆ ಉತ್ತರ ನೋಡಿ. ಅಮೃತಸಿದ್ಧಿ ಎನ್ನುವ ಯೋಗವೊಂದಿದೆ. ಈ ಯೋಗವಿರುವಾಗ ಯಾವುದೇ ಕಾರ್ಯ ಆರಂಭ ಅಥವಾ ಚಿನ್ನ ವಾಹನ ಭೂಮಿ ಖರೀದಿ ಪರೀಕ್ಷೆ ಕಟ್ಟುವಿಕೆ ಹೀಗೇ ಜೀವನದಲ್ಲಿ ಜೀವಿಯು ತನ್ನ ಯಶಸ್ಸಿಗೋಸ್ಕರ ಮಾಡುವ ಯಾವುದೇ ಪ್ರಕ್ರಿಯೆಯನ್ನು ಅಮೃಸಿದ್ಧಿಯೋಗವಿರುವಾಗ ಮಾಡಿದರೆ ನಿಶ್ಚಿತ ಫಲ ದ್ವಿಗುಣ ಫಲ ಅದ್ಭುತ ಫಲ ಹೀಗೆ ನಿರೀಕ್ಷೆಗಿಂತಲೂ ಉತ್ತಮ ಲಾಭ ಹೊಂದುವರು ಎಂಬುದು ನಕ್ಷತ್ರ ಶಾಸ್ತ್ರದ ಅಭಿಮತ. ಇದು ಸತ್ಯವೂ ಹೌದು. ಆ ಯೋಗದ ಸ್ವರೂಪ ಇಂತಿದೆ ತಿಳಿಯಿರಿ.

“ಆದಿತ್ಯ ಹಸ್ತೇ ಗುರು ಪುಷ್ಯ ಯೋಗೇ ಬುಧ ಅನುರಾಧಾ ಶನಿ ರೋಹಿಣೀ ಚ |

ಸೋಮಃ ಶ್ರವಣ್ಯಾಂ ಭೃಗು ರೇವತೀ ಚ ಭೌಮ ಅಶ್ವಿನೀ ಚ ಅಮೃತಸಿದ್ಧಿಯೋಗಃ ||”

1. ಭಾನುವಾರ ಹಸ್ತನಕ್ಷತ್ರ ಇದ್ದರೆ. 2. ಗುರುವಾರ ಪುಷ್ಯ ನಕ್ಷತ್ರವಿದ್ದರೆ 3. ಬುಧವಾರ ಅನುರಾಧಾ ನಕ್ಷತ್ರವಿದ್ದರೆ 4.ಶನಿವಾರ ರೋಹಿಣೀ ನಕ್ಷತ್ರವಿದ್ದರೆ 5.ಸೋಮವಾರ ಶ್ರವಣ ನಕ್ಷತ್ರವಿದ್ದರೆ 6.ಶುಕ್ರವಾರ ರೇವತೀ ನಕ್ಷತ್ರವಿದ್ದರೆ 7.ಮಂಗಳವಾರ ಅಶ್ವಿನೀ ನಕ್ಷತ್ರ ಹೀಗೆ ಕಂಡುಬರುವ ವಾರ ಮತ್ತು ನಕ್ಷತ್ರದ ಕೂಡುವಿಕೆಯು ಅತ್ಯಂತ ಶುಭಪ್ರದವಾದ ಅಮೃತಸಿದ್ಧಿಯೋಗವನ್ನು ಉಂಟುಮಾಡುತ್ತದೆ ಅಥವಾ ಆ ದಿನವನ್ನು ಅಮೃತಸಿದ್ಧಿಯೋಗ ದಿನ ಎನ್ನುವರು ಶಾಸ್ತ್ರದಲ್ಲಿ. ಅಮೃತ ಪ್ರಾಪ್ತವಾದರೆ ಹೇಗೋ ಅದೇ ಪ್ರಮಾಣದ ಅಥವಾ ಅಂತಹ ಆನಂದ ಕೊಡಬಲ್ಲ ಸಿದ್ಧಿಯುಳ್ಳ ಯೋಗ ಇದಾಗಿದೆ. ಆದ್ದರಿಂದಲೇ ಇದನ್ನು ಅಮೃತಸಿದ್ಧಿಯೋಗ ಎಂದು ಕರೆಯುತ್ತಾರೆ. ಇದು ಕಾರ್ಯಸಿದ್ಧಿಯೋಗವೂ ಹೌದು.

ಇದನ್ನೂ ಓದಿ: Yoga for Constipation: ಈ ಯೋಗಾಸನದಿಂದ ನೈಸರ್ಗಿಕವಾಗಿ ಮಲಬದ್ಧತೆಯನ್ನು ನಿವಾರಿಸಿ

ಸರ್ವಶುಭಕರ್ಮಗಳಿಗೂ ಇದು ಅತ್ಯಂತ ಪ್ರಶಸ್ತ ಮತ್ತು ಶುಭಫಲಪ್ರದವಾಗಿದೆ. ಅದರಲ್ಲೂ ಗುರುವಾರ ಪುಷ್ಯ ನಕ್ಷತ್ರದ ಫಲವಂತೂ ಅದ್ಭುತವಾದದ್ದು ಎಂಬುದು ಶಾಸ್ತ್ರಕಾರರೇ ಹೇಳುತ್ತಾರೆ. ಉತ್ತಮ ಕಾರ್ಯಕ್ಕೆ ಉತ್ತಮ ದಿನ ನೋಡಿ ಶುಭಫಲ ಪಡೆಯಿರಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ