AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವನದಲ್ಲಿ ನೀವು ಯಶಸ್ಸು ಸಾಧಿಸಬೇಕಾ? ಹಾಗಾದರೆ ಮೊದಲು ನಿಮ್ಮದೇ ವೈಫಲ್ಯಗಳಿಂದ ಜೀವನಪಾಠ ಕಲಿಯಿರಿ ಎನ್ನುತ್ತಾರೆ ಚಾಣಕ್ಯ

Chanakya Niti: ಚಾಣಕ್ಯನ ಪ್ರಕಾರ ಸೋಲಿನ ಭಯ ಬೇಡ. ಅದನ್ನು ದೃಢವಾಗಿ ನಿಭಾಯಿಸಬೇಕು. ನಿಜವಾದ ಸಂತೋಷವು ಪ್ರಯತ್ನ, ಸಮರ್ಪಣೆಯಿಂದ ಮಾತ್ರ ಬರುತ್ತದೆ. ಕಷ್ಟಪಟ್ಟು ಪರಿಶ್ರಮ ಪಡದೆ ಸೋಲೊಪ್ಪಿಕೊಳ್ಳುವುದು ಹೇಡಿತನದ ಲಕ್ಷಣ.

ಜೀವನದಲ್ಲಿ ನೀವು ಯಶಸ್ಸು ಸಾಧಿಸಬೇಕಾ? ಹಾಗಾದರೆ ಮೊದಲು ನಿಮ್ಮದೇ ವೈಫಲ್ಯಗಳಿಂದ ಜೀವನಪಾಠ ಕಲಿಯಿರಿ ಎನ್ನುತ್ತಾರೆ ಚಾಣಕ್ಯ
ಜೀವನದಲ್ಲಿ ನೀವು ಯಶಸ್ಸು ಸಾಧಿಸಬೇಕಾ?
ಸಾಧು ಶ್ರೀನಾಥ್​
|

Updated on:May 15, 2023 | 3:21 PM

Share

ಚಾಣಕ್ಯ ನೀತಿ: ಆಚಾರ್ಯ ಚಾಣುಕ್ಯರನ್ನು ಭಾರತದಲ್ಲಿ ತತ್ವಜ್ಞಾನಿ, ಆರ್ಥಿಕ ವಿದ್ವಾಂಸ ಎಂದು ಪರಿಗಣಿಸಲಾಗಿದೆ. ಅವರು ನೀತಿಶಾಸ್ತ್ರದಲ್ಲಿ (Chanakya niti) ಮಾನವ ಜೀವನ ವಿಧಾನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು. ಈ ವಿಷಯಗಳು ಇಂದಿಗೂ ಪ್ರಸ್ತುತವಾಗಿವೆ. ಇವುಗಳನ್ನು ಅನುಸರಿಸುವ ಮೂಲಕ ವೈಫಲ್ಯದಿಂದ ಅನೇಕ ಪಾಠಗಳನ್ನು ಕಲಿಯಬಹುದು. ನೀವು ವೈಫಲ್ಯಗಳನ್ನು ಜಯಿಸಬಹುದು ಮತ್ತು ಯಶಸ್ಸನ್ನು (success) ಪಡೆಯಬಹುದು. ತನ್ನದೇ ವೈಫಲ್ಯಗಳಿಂದ (Failure) ತಾನೂ ಕೆಲ ಪಾಠಗಳನ್ನು ಕಲಿತಿರುವುದಾಗಿ ಚಾಣಕ್ಯ ಹೇಳುತ್ತಾನೆ. ಇದು ಪ್ರತಿಯೊಬ್ಬರ ಜೀವನದಲ್ಲಿಯೂ ಸಹಾಯ ಬರುತ್ತದೆ ಎಂಬುದು ಅವರ ಖಚಿತ ಅನಿಸಿಕೆ.

ಆಚಾರ್ಯ ಚಾಣಕ್ಯರ ಪ್ರಕಾರ ನೇರವಾಗಿ ಮಾತನಾಡಬಾರದು. ನೇರವಾದ ಮರವನ್ನು ಸುಲಭವಾಗಿ ಕಡಿದುಹಾಕುವಂತೆ.. ನೇರ ಮಾತುಗಾರ ಹತ್ತು ಜನರಿಗೆ ಶತ್ರುವಾಗುತ್ತಾನೆ. ಇದೇ ವೇಳೆ ಪ್ರತಿಯೊಬ್ಬರಿಗೂ ಪ್ರಾಮಾಣಿಕತೆ ಮುಖ್ಯ ಎಂದು ತಿಳಿಸಿದರು. ಚಾಣಕ್ಯನ ಪ್ರಕಾರ ಅಪ್ರಾಮಾಣಿಕ ವ್ಯಕ್ತಿಯ ಯಶಸ್ಸು ತಾತ್ಕಾಲಿಕ. ಅಂತಹ ಯಶಸ್ಸು ಅವನೊಂದಿಗೆ ಹೆಚ್ಚು ಕಾಲ ಉಳಿಯುವುದಿಲ್ಲ.

ನೀವು ಏನು ಮಾಡಬೇಕೆಂದು ಯೋಚಿಸುತ್ತಿದ್ದೀರಿ.. ಅದನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ ಎಂದು ಚಾಣಕ್ಯ ಹೇಳಿದನು. ಬುದ್ಧಿವಂತ ವ್ಯಕ್ತಿಯು ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸುವವರೆಗೆ ತಾನು ಏನು ಮಾಡಬೇಕೆಂಬುದನ್ನು ರಹಸ್ಯವಾಗಿಡುತ್ತಾನೆ. ಯೋಜನೆಗಳು ಮತ್ತು ಕಾರ್ಯತಂತ್ರಗಳನ್ನು ಸಂಪೂರ್ಣವಾಗಿ ಸಿದ್ಧಪಡಿಸುವವರೆಗೆ ಮತ್ತು ಕಾರ್ಯಗತಗೊಳಿಸಲು ಸಿದ್ಧವಾಗುವವರೆಗೆ ಅವುಗಳನ್ನು ರಹಸ್ಯವಾಗಿಡಬೇಕೆಂದು ಅವರು ಹೇಳುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಪ್ರಯತ್ನಗಳಿಗೆ ಇತರರು ಅಡ್ಡಿಯಾಗುವುದನ್ನು ತಡೆಯಬಹುದು ಎಂಬುದು ಉದ್ದೇಶವಾಗಿದೆ.

ಆಚಾರ್ಯ ಚಾಣಕ್ಯ ಮುಂದುವರಿದು ಹೇಳಿರುವ ಮಾತುಗಳು ಇತರರ ವೈಫಲ್ಯಗಳು ಮತ್ತು ತಪ್ಪುಗಳಿಂದ ಕಲಿಯುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ವೈಯಕ್ತಿಕ ನಷ್ಟದ ಬಗ್ಗೆ ಯೋಚಿಸುವ ಬದಲು.. ಇತರರು ಮಾಡಿದ ತಪ್ಪುಗಳನ್ನು ನೋಡಿ ಅರ್ಥಮಾಡಿಕೊಳ್ಳುವುದು. ಅವುಗಳನ್ನು ಪುನರಾವರ್ತಿಸದಿರುವುದು ಬುದ್ಧಿವಂತ ವ್ಯಕ್ತಿಯ ಲಕ್ಷಣವಾಗಿದೆ. ಅಂತಹ ಜನರು ಬೇಗನೆ ಯಶಸ್ಸನ್ನು ಪಡೆಯುತ್ತಾರೆ.

Also Read: ಚಾಣಕ್ಯ ನೀತಿ: ಯಶಸ್ಸು ಗಳಿಸಬೇಕಿದ್ದರೆ ಕಠಿಣ ಪರಿಶ್ರಮವೊಂದೇ ಅಲ್ಲ, ಅದನ್ನು ನಿಯಂತ್ರಿಸುವುದೂ ಮುಖ್ಯ!

ಚಾಣಕ್ಯನ ಪ್ರಕಾರ ಯಾವ ವ್ಯಕ್ತಿಯೂ ಶ್ರೇಷ್ಠನಾಗಿ ಹುಟ್ಟುವುದಿಲ್ಲ. ಅವನು ಏನು ಮಾಡುತ್ತಾನೆ ಎಂಬುದರ ಮೂಲಕ.. ಉತ್ತಮವಾದದ್ದು ತಿಳಿಯುತ್ತದೆ. ಶ್ರೇಷ್ಠತೆಯನ್ನು ಆರಂಭಿಕ ಸಂದರ್ಭಗಳು ಅಥವಾ ವೈಫಲ್ಯಗಳಿಂದ ನಿರ್ಧರಿಸಲಾಗುವುದಿಲ್ಲ, ಆದರೆ ಅವುಗಳನ್ನು ಜಯಿಸಲು ತೆಗೆದುಕೊಂಡ ಕ್ರಮಗಳಿಂದ ಎಂದು ಚಾಣಕ್ಯ ನಂಬುತ್ತಾರೆ. ವೈಫಲ್ಯದ ಕಾರಣದಿಂದ ಕೈಗೆತ್ತಿಕೊಂಡ ಕೆಲಸವನ್ನು ಎಂದಿಗೂ ಬಿಟ್ಟುಕೊಡಬಾರದು.

ಚಾಣಕ್ಯನ ಪ್ರಕಾರ ಸೋಲಿನ ಭಯ ಬೇಡ. ಅದನ್ನು ದೃಢವಾಗಿ ನಿಭಾಯಿಸಬೇಕು. ನಿಜವಾದ ಸಂತೋಷವು ಪ್ರಯತ್ನ ಮತ್ತು ಸಮರ್ಪಣೆಯಿಂದ ಮಾತ್ರ ಬರುತ್ತದೆ. ಕಷ್ಟಪಟ್ಟು ಪರಿಶ್ರಮ ಪಡದೆ ಸೋಲನ್ನು ಒಪ್ಪಿಕೊಳ್ಳುವುದು ಹೇಡಿತನದ ಲಕ್ಷಣ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:20 pm, Mon, 15 May 23