ದಿಸ್ಪುರ್, ಡಿ.29: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sharma) ಅವರು ಭಗವದ್ಗೀತೆಯ ಶ್ಲೋಕವನ್ನು ತಪ್ಪಾಗಿ ಭಾಷಾಂತರಿಸಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಬಿಸ್ವಾ ಶರ್ಮಾ ಅವರು ಅವರು ಎಕ್ಸ್ನಲ್ಲಿ ಈ ಬಗ್ಗೆ ಕ್ಷಮೆ ಕೇಳಿದ್ದಾರೆ. ಈ ವಿಚಾರವಾಗಿ ಭಾರಿ ಟೀಕೆಗೆ ಒಳಲಾಗಿದ್ದ ಬಿಸ್ವಾ ಶರ್ಮಾ ಅವರು ಕ್ಷಮೆ ಕೇಳಿದ್ದಾರೆ. ಬಿಸ್ವಾ ಶರ್ಮಾ ಅವರು ಸಾಮಾಜಿಕ ಜಾಲತಾಣ ನಿರ್ವಹಕರು ಮುಖ್ಯಮಂತ್ರಿಗಳು ಪ್ರತಿ ದಿನ ಭಗವದ್ಗೀತೆಯ ಈ ಶ್ಲೋಕಗಳನ್ನು ಹೇಳುತ್ತಾರೆ ಎಂದು ಶ್ಲೋಕ ಸಮೆತವಾಗಿ ಪೋಸ್ಟ್ ಮಾಡಿದ್ದರು. ಈ ಶ್ಲೋಕ ತಪ್ಪಾಗಿ ಬರೆಯಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿರೋಧಿಸಲಾಗಿದೆ.
ವಾಡಿಕೆಯಂತೆ ನಾನು ಪ್ರತಿದಿನ ಬೆಳಿಗ್ಗೆ ನನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಭಗವದ್ಗೀತೆಯ ಒಂದು ಶ್ಲೋಕವನ್ನು ಅಪ್‌ಲೋಡ್ ಮಾಡುತ್ತೇನೆ. ಇಲ್ಲಿಯವರೆಗೆ, ನಾನು 668 ಶ್ಲೋಕಗಳನ್ನು ಪೋಸ್ಟ್ ಮಾಡಿದ್ದೇನೆ. ಇತ್ತೀಚೆಗೆ ನನ್ನ ತಂಡದ ಸದಸ್ಯರೊಬ್ಬರು ಅಧ್ಯಾಯ 18 ಶ್ಲೋಕದ 44ರಿಂದ ತಪ್ಪಾದ ಅನುವಾದದೊಂದಿಗೆ ಶ್ಲೋಕವನ್ನು ಪೋಸ್ಟ್ ಮಾಡಿದ್ದಾರೆ. ತಪ್ಪು ಗಮನಕ್ಕೆ ಬಂದ ಕೂಡಲೇ ಟ್ವೀಟ್ ಡಿಲೀಟ್ ಮಾಡಿದ್ದೇನೆ. ತಪ್ಪನ್ನು ಗಮನಿಸಿದ ತಕ್ಷಣ ನಾನು ಪೋಸ್ಟ್ನ್ನು ಅಳಿಸಿದ್ದೇನೆ. ಈ ಪೋಸ್ಟ್ನಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
As a routine I upload one sloka of Bhagavad Gita every morning on my social media handles. Till date, I have posted 668 slokas.
Recently one of my team members posted a sloka from Chapter 18 verse 44 with an incorrect translation.
As soon as I noticed the mistake, I promptly…
— Himanta Biswa Sarma (@himantabiswa) December 28, 2023
ಗೀತೆಯ ಪ್ರಕಾರ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಎಂಬ ಇತರ ಮೂರು ಜಾತಿಗಳಿಗೆ ಸೇವೆ ಸಲ್ಲಿಸುವುದು ಶೂದ್ರರ ಕರ್ತವ್ಯ ಎಂದು ತಪ್ಪಾಗಿ ಬರೆದಿರುವುದು, ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಾಯಕ ಮತ್ತು ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಅವರು ಪ್ರತಿ ಭಾರತೀಯ ಪ್ರಜೆಯನ್ನು ಸಮಾನವಾಗಿ ಕಾಣುವ ಪ್ರತಿಜ್ಞೆಯನ್ನು ಪೂರೈಸುತ್ತಿಲ್ಲ ಎಂದು ಸಿಎಂ ಬಿಸ್ವಾ ಶರ್ಮಾ ವಿರೋಧ ತೀವ್ರ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪದ್ದತಿ ಜೀವಂತ; ಅಪ್ರಾಪ್ತೆಗೆ ಮದ್ವೆ ಮಾಡಲು ಖತರ್ನಾಕ್ ಪ್ಲ್ಯಾನ್ ಮಾಡಿದ ಕುಟುಂಬಸ್ಥರು
ಬಿಸ್ವಾ ಶರ್ಮಾ ಅವರ ಮನಸ್ಥಿತಿ ಇದರಿಂದ ಅರ್ಥವಾಗುತ್ತದೆ. ಅಸ್ಸಾಂ ಸಿಎಂ ತಮ್ಮ ಸಮಾಜದ ದೃಷ್ಟಿಕೋನವನ್ನು ವಿವರಿಸಿದ್ದಾರೆ.ಕೃಷಿ, ಹಸು ಸಾಕಣೆ ಮತ್ತು ವಾಣಿಜ್ಯವು ವೈಶ್ಯರ ನೈಸರ್ಗಿಕ ಕರ್ತವ್ಯಗಳು ಮತ್ತು ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರಿಗೆ ಸೇವೆ ಸಲ್ಲಿಸುವುದು ಶೂದ್ರರ ನೈಸರ್ಗಿಕ ಕರ್ತವ್ಯವಾಗಿದೆ ಎಂದು ನಿಮ್ಮ ಪೋಸ್ಟ್ ಹೇಳುತ್ತದೆ. ಆದರೆ ನೀವು ಸಾಂವಿಧಾನಿಕ ಸ್ಥಾನವನ್ನು ಹೊಂದಿರುವ ನಿಮ್ಮ ಪ್ರತಿಜ್ಞೆ ಪ್ರತಿಯೊಬ್ಬ ನಾಗರಿಕರನ್ನು ಸಮಾನವಾಗಿ ಕಾಣುಬೇಕಿತ್ತು. ಇದ್ದರಿಂದಲೇ ನಿಮ್ಮ ವಿಚಾರಧರೆಗಳೇನು ಎಂದು ತಿಳಿಯುತ್ತದೆ. ಇನ್ನು ಕೆಲವು ವರ್ಷಗಳಿಂದ ಅಸ್ಸಾಂನ ಮುಸ್ಲಿಮರು ಎದುರಿಸುತ್ತಿರುವ ದುರದೃಷ್ಟಕರ ಕ್ರೌರ್ಯವನ್ನು ಇದು ಪ್ರತಿಬಿಂಬಿಸುತ್ತದೆ. ಹಿಂದುತ್ವವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:42 pm, Fri, 29 December 23