ಹೆರಿಗೆ ನೋವು ಅನುಭವಿಸ್ತಿದ್ದ ಗರ್ಭಿಣಿಗೆ, ಹೆರಿಗೆ ಮಾಡಿಸಿದ ಶಾಸಕ! ಎಲ್ಲಿ?

|

Updated on: Aug 12, 2020 | 11:23 AM

ತೀವ್ರ ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿಗೆ, ಶಾಸಕರೊಬ್ಬರು ಹೆರಿಗೆ ಮಾಡಿಸಿರುವ ಘಟನೆ ಮಿಜೋರಂನಲ್ಲಿ ನಡೆದಿದೆ. ಮಿಜೋರಾಂನ ಚಾಂಫೈ ಆಸ್ಪತ್ರೆಯಲ್ಲಿ ಕಾರ್ಯನಿವರ್ಹಿಸ್ತಿದ್ದ ಏಕೈಕ ಸ್ತ್ರೀರೋಗತಜ್ಞರೂ ರಜೆಯಲ್ಲಿದ್ದರು. ಹೀಗಾಗಿ ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸುವವರು ಯಾರೂ ಇಲ್ಲದೆ ಆಸ್ಪತ್ರೆಯಲ್ಲಿ ನರಳುತ್ತಿದ್ದರು. ಗಂಡು ಮಗುವಿಗೆ ಜನ್ಮ ಆ ಸಂದರ್ಭದಲ್ಲಿ ಸ್ವತಃ ವೈದ್ಯರಾಗಿರುವ ಮಿಜೋರಾಂನ ಶಾಸಕ, 62 ವರ್ಷದ ಝಡ್. ಆರ್. ಥಿಯಾಮ್ಸಂಗಾ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದಾರೆ. ಶಾಸಕ ಥಿಯಾಮ್ಸಂಗಾ ಸೋಮವಾರದಂದು ದೂರದ ಚಂಪಾ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪೀಡಿತರು ಹಾಗೂ ಭೂಕಂಪ […]

ಹೆರಿಗೆ ನೋವು ಅನುಭವಿಸ್ತಿದ್ದ ಗರ್ಭಿಣಿಗೆ, ಹೆರಿಗೆ ಮಾಡಿಸಿದ ಶಾಸಕ! ಎಲ್ಲಿ?
Follow us on

ತೀವ್ರ ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿಗೆ, ಶಾಸಕರೊಬ್ಬರು ಹೆರಿಗೆ ಮಾಡಿಸಿರುವ ಘಟನೆ ಮಿಜೋರಂನಲ್ಲಿ ನಡೆದಿದೆ. ಮಿಜೋರಾಂನ ಚಾಂಫೈ ಆಸ್ಪತ್ರೆಯಲ್ಲಿ ಕಾರ್ಯನಿವರ್ಹಿಸ್ತಿದ್ದ ಏಕೈಕ ಸ್ತ್ರೀರೋಗತಜ್ಞರೂ ರಜೆಯಲ್ಲಿದ್ದರು. ಹೀಗಾಗಿ ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸುವವರು ಯಾರೂ ಇಲ್ಲದೆ ಆಸ್ಪತ್ರೆಯಲ್ಲಿ ನರಳುತ್ತಿದ್ದರು.

ಗಂಡು ಮಗುವಿಗೆ ಜನ್ಮ
ಆ ಸಂದರ್ಭದಲ್ಲಿ ಸ್ವತಃ ವೈದ್ಯರಾಗಿರುವ ಮಿಜೋರಾಂನ ಶಾಸಕ, 62 ವರ್ಷದ ಝಡ್. ಆರ್. ಥಿಯಾಮ್ಸಂಗಾ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದಾರೆ. ಶಾಸಕ ಥಿಯಾಮ್ಸಂಗಾ ಸೋಮವಾರದಂದು ದೂರದ ಚಂಪಾ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪೀಡಿತರು ಹಾಗೂ ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು.

ಆ ವೇಳೆ, ಗರ್ಭಿಣಿ ಮಹಿಳೆಯೊಬ್ಬರು ತೀವ್ರವಾದ ಹೆರಿಗೆ ನೋವು ಹಾಗೂ ರಕ್ತಸ್ರಾವದಿಂದ ಬಳಲುತ್ತಿದ್ದಾರೆ ಎಂಬುದು ತಿಳಿದಿದೆ. ಕೂಡಲೇ ಎಚ್ಚೆತ್ತ ಶಾಸಕ ಜಿಲ್ಲಾಸ್ಪತ್ರೆಗೆ ತೆರಳಿ ಸ್ವತಃ ತಾವೇ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯದಿಂದ ಇದ್ದಾರೆ ಎಂದು ತಿಳಿದುಬಂದಿದೆ.

ಡಾ. ಝಡ್. ಆರ್. ಥಿಯಾಮ್ಸಂಗಾ 2018 ರ ನವೆಂಬರ್ ವಿಧಾನಸಭಾ ಚುನಾವಣೆಯಲ್ಲಿ ಎಂಎಂಎಸ್ ಪಕ್ಷದ ಅಭ್ಯರ್ಥಿಯಾಗಿ ಜಯಗಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂಡಳಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಶಾಸಕ, ಈ ಭಾಗದ ಜನರಿಗೆ ತುರ್ತುಸೇವೆ ಅಗತ್ಯವಿದ್ದಾಗಲೆಲ್ಲ ಅಲ್ಲಿಗೆ ಸ್ವತಃ ತೆರಳಿ ವೈದ್ಯಕೀಯ ಚಿಕಿತ್ಸೆ ನೀಡುತ್ತಾರೆ.