3 ದಿನದಲ್ಲೇ ಅನ್​ಲಾಕ್ 2.0 ಎಂಡ್, ಇಂದು ಪ್ರಧಾನಿ ಮೋದಿ ಸಂಪುಟ ಸಭೆಯಲ್ಲಿ ಚರ್ಚೆ

| Updated By:

Updated on: Jul 30, 2020 | 8:26 PM

ದೆಹಲಿ: ದೇಶದಲ್ಲಿ ಅನ್​ಲಾಕ್​ 2.0 ಮುಗಿಯಲು ಉಳಿದಿರೋದು ಕೇವಲ 3 ದಿನ ಮಾತ್ರ. ಈ ಹಿನ್ನೆಲೆಯಲ್ಲಿ ಅನ್​ಲಾಕ್ 3.0 ನಿಯಮಗಳು ಹೇಗಿರುತ್ತವೆ ಅನ್ನೋ ಕುತೂಹಲ ದೇಶದ ಜನರಲ್ಲಿ ಮೂಡಿದೆ. ಹೀಗಾಗಿ ಇಂದು ಪ್ರಧಾನಿ ನೇತೃತ್ವದಲ್ಲಿ ನಡೆಯಲಿರೋ ಸಂಪುಟ ಸಭೆ ಮೇಲೆ ದೇಶದ ಜನರ ಚಿತ್ತ ನೆಟ್ಟಿದೆ. ದೇಶದಲ್ಲಿ ಈಗ ಜಾರಿಯಲ್ಲಿರೋ ಅನ್​ಲಾಕ್​ 2.0 ಮುಗಿಯಲು ಉಳಿದಿರೋದು ಕೇವಲ ಮೂರು ದಿನ ಮಾತ್ರ. ಆಗಸ್ಟ್ 1ರ ಮಧ್ಯರಾತ್ರಿಯಿಂದಲೇ 3ನೇ ಹಂತದ ಅನ್​ಲಾಕ್ ನಿಯಮಗಳು ಜಾರಿಗೆ ಬರಬೇಕಿದೆ. ಹೀಗಾಗಿ ಅನ್​ಲಾಕ್​ […]

3 ದಿನದಲ್ಲೇ ಅನ್​ಲಾಕ್ 2.0 ಎಂಡ್, ಇಂದು ಪ್ರಧಾನಿ ಮೋದಿ ಸಂಪುಟ ಸಭೆಯಲ್ಲಿ ಚರ್ಚೆ
ಪ್ರಧಾನಿ ನರೇಂದ್ರ ಮೋದಿ (ಸಾಂದರ್ಭಿಕ ಚಿತ್ರ)
Follow us on

ದೆಹಲಿ: ದೇಶದಲ್ಲಿ ಅನ್​ಲಾಕ್​ 2.0 ಮುಗಿಯಲು ಉಳಿದಿರೋದು ಕೇವಲ 3 ದಿನ ಮಾತ್ರ. ಈ ಹಿನ್ನೆಲೆಯಲ್ಲಿ ಅನ್​ಲಾಕ್ 3.0 ನಿಯಮಗಳು ಹೇಗಿರುತ್ತವೆ ಅನ್ನೋ ಕುತೂಹಲ ದೇಶದ ಜನರಲ್ಲಿ ಮೂಡಿದೆ. ಹೀಗಾಗಿ ಇಂದು ಪ್ರಧಾನಿ ನೇತೃತ್ವದಲ್ಲಿ ನಡೆಯಲಿರೋ ಸಂಪುಟ ಸಭೆ ಮೇಲೆ ದೇಶದ ಜನರ ಚಿತ್ತ ನೆಟ್ಟಿದೆ.

ದೇಶದಲ್ಲಿ ಈಗ ಜಾರಿಯಲ್ಲಿರೋ ಅನ್​ಲಾಕ್​ 2.0 ಮುಗಿಯಲು ಉಳಿದಿರೋದು ಕೇವಲ ಮೂರು ದಿನ ಮಾತ್ರ. ಆಗಸ್ಟ್ 1ರ ಮಧ್ಯರಾತ್ರಿಯಿಂದಲೇ 3ನೇ ಹಂತದ ಅನ್​ಲಾಕ್ ನಿಯಮಗಳು ಜಾರಿಗೆ ಬರಬೇಕಿದೆ. ಹೀಗಾಗಿ ಅನ್​ಲಾಕ್​ 3.0 ಕುರಿತು ಚರ್ಚಿಸಲು ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, ಬೆಳಗ್ಗೆ 10.30ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅನ್​ಲಾಕ್ 3.0 ರೂಲ್ಸ್​ಗಳನ್ನ ಫೈನಲ್ ಮಾಡೋ ಸಾಧ್ಯತೆಗಳಿವೆ. ಹೀಗಾಗಿ ಈಗಿರೋ ವಿನಾಯ್ತಿಗಳ ಜೊತೆಗೆ ಮತ್ತೆ ಯಾವುದಕ್ಕೆಲ್ಲಾ ವಿನಾಯ್ತಿ ಸಿಗಬಹುದು ಅನ್ನೋ ಕುರಿತು ದೇಶದಲ್ಲಿ ಈಗಾಗಲೇ ಭಾರಿ ಚರ್ಚೆ ನಡೆಯುತ್ತಿದೆ.

ಅನ್​ಲಾಕ್​ 3.0ನಲ್ಲಿ ಯಾವುದಕ್ಕೆಲ್ಲಾ ವಿನಾಯಿತಿ ಸಿಗಬಹುದು?
ಆಗಸ್ಟ್ 1ರಿಂದ ಮತ್ತಷ್ಟು ವಿನಾಯಿತಿ ನೀಡುವ ಸಾಧ್ಯಗಳಿದ್ದು, ಕೆಲವು ನಿರ್ಬಂಧಗಳನ್ನು ಮುಂದುವರಿಸುವ ಸಾಧ್ಯತೆಗಳಿವೆ. ಹೀಗಾಗಿ ಯಾವುದು ಲಾಕ್, ಯಾವುದು ಅನ್ಲಾಕ್ ಆಗುವ ಸಾಧ್ಯತೆಗಳಿದೆ ಅಂತಾ ಒಮ್ಮೆ ನೋಡೋದಾದ್ರೆ.

ಅನ್​ಲಾಕ್​ 3.0 ಹೇಗಿರುತ್ತೆ?
– ದೇಶಾದ್ಯಂತ ಶಾಲೆಗಳು ಈಗ ತೆರೆಯೋದು ಅನುಮಾನ
– ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಅವಕಾಶ..?
– ಖಾಸಗಿ ಕೋಚಿಂಗ್ ಸಂಸ್ಥೆಗಳಿಗೆ ಷರತ್ತು ಬದ್ಧ ಅವಕಾಶ
– ಮೆಟ್ರೋ ಸಂಚಾರ ನಿಷೇಧ ಮುಂದುವರಿಯುವ ಸಾಧ್ಯತೆ
– ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರವೂ ಇರುವುದಿಲ್ಲ
– ಜಿಮ್​ಗಳಿಗೆ ಷರತ್ತು ಬದ್ಧ ಅವಕಾಶ ನೀಡುವ ಸಾಧ್ಯತೆ
– 25% ಪ್ರೇಕ್ಷಕರೊಂದಿಗೆ ಸಿನಿಮಾ ಮಂದಿರ ಓಪನ್..?
– ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅವಕಾಶ..?
– ಕಂಟೇನ್ಮೆಂಟ್ ಬಿಟ್ಟು ಉಳಿದೆಡೆ ಮತ್ತಷ್ಟು ವಿನಾಯಿತಿ..?

ಇಂದು ಪ್ರಧಾನಿ ನೇತೃತ್ವದಲ್ಲಿ ನಡೆಯೋ ಸಂಪುಟ ಸಭೆಯಲ್ಲಿ ಅನ್​ಲಾಕ್ 3.0 ಬಗ್ಗೆ ಚರ್ಚೆ ನಡೆಸೋ ಸಾಧ್ಯತೆಗಳು ದಟ್ಟವಾಗಿವೆ. ಸಂಪುಟ ಸಭೆಯ ಬಳಿಕ ಅನ್​ಲಾಕ್​ 3.0 ರೂಲ್ಸ್ ಬಗ್ಗೆ ಜನರಿಗೆ ಒಂದು ಕ್ಲಾರಿಟಿ ಸಿಗಬಹುದು.

Published On - 7:12 am, Wed, 29 July 20