AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್‌ಡೌನ್‌ ಹಸಿವು ತಾಳದೇ ಆ ಯುವಕರು ಕದ್ದಿದ್ದು ಕೇಳಿದ್ರೆ ಶಾಕ್‌ ಆಗ್ತಿರಾ!

ಮುಂಬೈ: ಕೊರೊನಾದಿಂದಾಗಿ ಕೇವಲ ನಾಲ್ಕು ಗಂಟೆಗಳಲ್ಲಿ ಲಾಕ್‌ ಡೌನ್‌ ಮಾಡೋದಾಗಿ ಹೇಳಿ ದೇಶಾದ್ಯಂತ ಲಾಕ್‌ಡೌನ್‌‌ ವಿಧಿಸಲಾಯಿತು. ಪರಿಣಾಮ ಕೋಟ್ಯಂತರ ಜನರು ಪರದಾಡಬೇಕಾಯಿತು. ಇದರ ಮುಂದಿನ ಕೆಲವೇ ದಿನಗಳಲ್ಲಿ ಇದರಿಂದಾಗ ಪರಿಣಾಮ ಮಾತ್ರ ಯಾರೂ ಊಹಿಸಲಾರದಷ್ಟು. ಹೀಗೆ ಲಾಕ್‌ಡೌನ್‌‌ನಿಂದ ತಿನ್ನಲು ಏನು ಸಿಗದೇ ಕಳ್ಳತನಕ್ಕಿಳಿದ ಬಡಪಾಯಿಗಳನ್ನ ಮುಂಬೈ ಪೊಲೀಸರು ಅರೆಸ್ಟ್‌ ಮಾಡಿ ಅಂದರ್‌ ಮಾಡಿದ್ದಾರೆ. ಹೌದು ಮಂಬೈನ ಛತ್ರಪತಿ ಶಿವಾಜಿ ಟರ್ಮಿನಸ್‌ ನಲ್ಲಿ ಮುಂಬೈ ಮಹಾನಗರ ಪಾಲಿಕೆ ಎದುರು ಪ್ರಖ್ಯಾತ ಕ್ಯಾನನ್‌ ಪಾವಭಾಜಿ ಶಾಪ್‌ನಲ್ಲಿ ಕಳ್ಳತನ ನಡೆದಿತ್ತು. ಈ […]

ಲಾಕ್‌ಡೌನ್‌ ಹಸಿವು ತಾಳದೇ ಆ ಯುವಕರು ಕದ್ದಿದ್ದು ಕೇಳಿದ್ರೆ ಶಾಕ್‌ ಆಗ್ತಿರಾ!
Guru
| Edited By: |

Updated on:Jul 30, 2020 | 4:27 PM

Share

ಮುಂಬೈ: ಕೊರೊನಾದಿಂದಾಗಿ ಕೇವಲ ನಾಲ್ಕು ಗಂಟೆಗಳಲ್ಲಿ ಲಾಕ್‌ ಡೌನ್‌ ಮಾಡೋದಾಗಿ ಹೇಳಿ ದೇಶಾದ್ಯಂತ ಲಾಕ್‌ಡೌನ್‌‌ ವಿಧಿಸಲಾಯಿತು. ಪರಿಣಾಮ ಕೋಟ್ಯಂತರ ಜನರು ಪರದಾಡಬೇಕಾಯಿತು. ಇದರ ಮುಂದಿನ ಕೆಲವೇ ದಿನಗಳಲ್ಲಿ ಇದರಿಂದಾಗ ಪರಿಣಾಮ ಮಾತ್ರ ಯಾರೂ ಊಹಿಸಲಾರದಷ್ಟು. ಹೀಗೆ ಲಾಕ್‌ಡೌನ್‌‌ನಿಂದ ತಿನ್ನಲು ಏನು ಸಿಗದೇ ಕಳ್ಳತನಕ್ಕಿಳಿದ ಬಡಪಾಯಿಗಳನ್ನ ಮುಂಬೈ ಪೊಲೀಸರು ಅರೆಸ್ಟ್‌ ಮಾಡಿ ಅಂದರ್‌ ಮಾಡಿದ್ದಾರೆ.

ಹೌದು ಮಂಬೈನ ಛತ್ರಪತಿ ಶಿವಾಜಿ ಟರ್ಮಿನಸ್‌ ನಲ್ಲಿ ಮುಂಬೈ ಮಹಾನಗರ ಪಾಲಿಕೆ ಎದುರು ಪ್ರಖ್ಯಾತ ಕ್ಯಾನನ್‌ ಪಾವಭಾಜಿ ಶಾಪ್‌ನಲ್ಲಿ ಕಳ್ಳತನ ನಡೆದಿತ್ತು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಮಾಲೀಕ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದ. ತನ್ನ ಶಾಪ್‌ನಲ್ಲಿ ಲಾಕ್‌ಡೌನ್‌ ವೇಳೆ 80 ಕೇಜಿ ಬೆಣ್ಣೆ, 20 ಕೇಜಿ ಚೀಸ್‌, ಸಕ್ಕರೆ ಮತ್ತು ಇತರ ಅಡುಗೆ ಮಾಡುವ ಸಾಮಾನುಗಳು ಕಳವು ಆಗಿವೆ ಎಂದು ದೂರಿನಲ್ಲಿ ದಾಖಲಿಸಿದ್ದ.

ಪ್ರಕರಣದ ತನಿಖೆ ಆರಂಭಿಸಿದ ಮುಂಬೈನ ಆಜಾದ್‌ ಮೈದಾನ ಪೊಲೀಸರು ಇಬ್ಬರು ಚಿಂದಿ ಆಯುವ ಯುವಕರನ್ನ ಬಂಧಿಸಿದ್ದಾರೆ. ಅರೆಸ್ಟ್‌ ಮಾಡಿ ವರ್ಕ್‌ಔಟ್‌ ಮಾಡುತ್ತಿದ್ದಂತೆ ಯುವಕರಿಬ್ಬರು ಸತ್ಯವನ್ನ ಬಾಯಿಬಿಟ್ಟಿದ್ದಾರೆ. ಯುವಕರು ಬಾಯಿ ಬಿಟ್ಟ ಸತ್ಯವನ್ನ ಕೇಳಿ ಪೊಲೀಸರೇ ಒಂದು ಕ್ಷಣ ಅವಕ್ಕಾಗಿದ್ದಾರೆ. ಏನು ಮಾಡಬೇಕು ಎಂದು ಕ್ಷಣಕಾಲ ಅವರೇ ಗೊಂದಲಕ್ಕಿಡಾಗಿದ್ದಾರೆ. ಯಾಕಂದ್ರೆ ಯುವಕರು ಹೇಳಿದ ಸತ್ಯ.

ಲಾಕ್‌ ಡೌನ್‌ ಸಮಯದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು. ದುಡಿಯಲು ಕೆಲಸವೂ ಇರಲಿಲ್ಲ. ಹಸಿವಿನಿಂದ ಕಂಗಾಲಾಗಿದ್ದೇವು. ತಿನ್ನಲು ಏನು ಇರಲಿಲ್ಲ. ಹೀಗಾಗಿ ಬೇರೆ ದಾರಿ ಕಾಣದೆ ಪಾವ್‌  ಭಾಜಿ ಅಂಗಡಿಯಲ್ಲಿ ಕಳ್ಳತನ ಮಾಡಬೇಕಾಯಿತು. ತಿನ್ನುವುದಕ್ಕಾಗಿ ಅಲ್ಲಿ ಇದ್ದ ಚೀಸ್‌, ಬೆಣ್ಣೆ, ಸಕ್ಕರೆ ಹಾಗೂ ಕೆಲ ಇತರೇ ವಸ್ತುಗಳನ್ನು ಕದ್ದು, ಕೆಲವನ್ನು ಮಾರಾಟ ಮಾಡಿದ್ದೇವೆ. ಇನ್ನುಳಿದವನ್ನು ಹೊಟ್ಟೆ ಹಸಿದಾಗಲೆಲ್ಲಾ ತಿಂದಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಇದನ್ನು ಕೇಳಿದ ಮುಂಬೈ ಪೊಲೀಸರಿಗೆ ಮಾತೇ ಹೊರಟಿಲ್ಲ. ಆದ್ರೆ ಏನು ಮಾಡೋದು ಕಾನೂನು ಪಾಲಿಸಲೇ ಬೇಕಲ್ಲಾ. ಹೀಗಾಗಿ ಈ ಯುವಕರಿಬ್ಬರ ಮೇಲೆ ಐಪಿಸಿ ಸೆಕ್ಸನ್‌ 454, ಐಪಿಸಿ ಸೆಕ್ಸನ್‌ 457, ಮತ್ತು ಐಪಿಸಿ ಸೆಕ್ಸನ್‌ 380 ಅಡಿಯಲ್ಲಿ ಎಪ್‌ಐಆರ್‌ ದಾಖಲಿಸಿದ್ದಾರೆ. ನಂತರ ಕೋರ್ಟ್‌ ಇವರನ್ನು ಜುಲೈ 30ರ ವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ. ಈಗ ಪೊಲೀಸರು ಇವರು ಎಲ್ಲೆಲ್ಲಿ ಕದ್ದ ವಸ್ತುಗಳನ್ನ ಮಾರಿದ್ದಾರೋ ಅಲ್ಲಿಂದ ಆ ವಸ್ತುಗಳನ್ನು ಜಪ್ತ್‌ ಮಾಡುತ್ತಿದ್ದಾರೆ.

Published On - 9:39 pm, Tue, 28 July 20

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ