AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ದಿನದಲ್ಲೇ ಅನ್​ಲಾಕ್ 2.0 ಎಂಡ್, ಇಂದು ಪ್ರಧಾನಿ ಮೋದಿ ಸಂಪುಟ ಸಭೆಯಲ್ಲಿ ಚರ್ಚೆ

ದೆಹಲಿ: ದೇಶದಲ್ಲಿ ಅನ್​ಲಾಕ್​ 2.0 ಮುಗಿಯಲು ಉಳಿದಿರೋದು ಕೇವಲ 3 ದಿನ ಮಾತ್ರ. ಈ ಹಿನ್ನೆಲೆಯಲ್ಲಿ ಅನ್​ಲಾಕ್ 3.0 ನಿಯಮಗಳು ಹೇಗಿರುತ್ತವೆ ಅನ್ನೋ ಕುತೂಹಲ ದೇಶದ ಜನರಲ್ಲಿ ಮೂಡಿದೆ. ಹೀಗಾಗಿ ಇಂದು ಪ್ರಧಾನಿ ನೇತೃತ್ವದಲ್ಲಿ ನಡೆಯಲಿರೋ ಸಂಪುಟ ಸಭೆ ಮೇಲೆ ದೇಶದ ಜನರ ಚಿತ್ತ ನೆಟ್ಟಿದೆ. ದೇಶದಲ್ಲಿ ಈಗ ಜಾರಿಯಲ್ಲಿರೋ ಅನ್​ಲಾಕ್​ 2.0 ಮುಗಿಯಲು ಉಳಿದಿರೋದು ಕೇವಲ ಮೂರು ದಿನ ಮಾತ್ರ. ಆಗಸ್ಟ್ 1ರ ಮಧ್ಯರಾತ್ರಿಯಿಂದಲೇ 3ನೇ ಹಂತದ ಅನ್​ಲಾಕ್ ನಿಯಮಗಳು ಜಾರಿಗೆ ಬರಬೇಕಿದೆ. ಹೀಗಾಗಿ ಅನ್​ಲಾಕ್​ […]

3 ದಿನದಲ್ಲೇ ಅನ್​ಲಾಕ್ 2.0 ಎಂಡ್, ಇಂದು ಪ್ರಧಾನಿ ಮೋದಿ ಸಂಪುಟ ಸಭೆಯಲ್ಲಿ ಚರ್ಚೆ
ಪ್ರಧಾನಿ ನರೇಂದ್ರ ಮೋದಿ (ಸಾಂದರ್ಭಿಕ ಚಿತ್ರ)
Follow us
ಆಯೇಷಾ ಬಾನು
| Updated By:

Updated on:Jul 30, 2020 | 8:26 PM

ದೆಹಲಿ: ದೇಶದಲ್ಲಿ ಅನ್​ಲಾಕ್​ 2.0 ಮುಗಿಯಲು ಉಳಿದಿರೋದು ಕೇವಲ 3 ದಿನ ಮಾತ್ರ. ಈ ಹಿನ್ನೆಲೆಯಲ್ಲಿ ಅನ್​ಲಾಕ್ 3.0 ನಿಯಮಗಳು ಹೇಗಿರುತ್ತವೆ ಅನ್ನೋ ಕುತೂಹಲ ದೇಶದ ಜನರಲ್ಲಿ ಮೂಡಿದೆ. ಹೀಗಾಗಿ ಇಂದು ಪ್ರಧಾನಿ ನೇತೃತ್ವದಲ್ಲಿ ನಡೆಯಲಿರೋ ಸಂಪುಟ ಸಭೆ ಮೇಲೆ ದೇಶದ ಜನರ ಚಿತ್ತ ನೆಟ್ಟಿದೆ.

ದೇಶದಲ್ಲಿ ಈಗ ಜಾರಿಯಲ್ಲಿರೋ ಅನ್​ಲಾಕ್​ 2.0 ಮುಗಿಯಲು ಉಳಿದಿರೋದು ಕೇವಲ ಮೂರು ದಿನ ಮಾತ್ರ. ಆಗಸ್ಟ್ 1ರ ಮಧ್ಯರಾತ್ರಿಯಿಂದಲೇ 3ನೇ ಹಂತದ ಅನ್​ಲಾಕ್ ನಿಯಮಗಳು ಜಾರಿಗೆ ಬರಬೇಕಿದೆ. ಹೀಗಾಗಿ ಅನ್​ಲಾಕ್​ 3.0 ಕುರಿತು ಚರ್ಚಿಸಲು ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, ಬೆಳಗ್ಗೆ 10.30ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅನ್​ಲಾಕ್ 3.0 ರೂಲ್ಸ್​ಗಳನ್ನ ಫೈನಲ್ ಮಾಡೋ ಸಾಧ್ಯತೆಗಳಿವೆ. ಹೀಗಾಗಿ ಈಗಿರೋ ವಿನಾಯ್ತಿಗಳ ಜೊತೆಗೆ ಮತ್ತೆ ಯಾವುದಕ್ಕೆಲ್ಲಾ ವಿನಾಯ್ತಿ ಸಿಗಬಹುದು ಅನ್ನೋ ಕುರಿತು ದೇಶದಲ್ಲಿ ಈಗಾಗಲೇ ಭಾರಿ ಚರ್ಚೆ ನಡೆಯುತ್ತಿದೆ.

ಅನ್​ಲಾಕ್​ 3.0ನಲ್ಲಿ ಯಾವುದಕ್ಕೆಲ್ಲಾ ವಿನಾಯಿತಿ ಸಿಗಬಹುದು? ಆಗಸ್ಟ್ 1ರಿಂದ ಮತ್ತಷ್ಟು ವಿನಾಯಿತಿ ನೀಡುವ ಸಾಧ್ಯಗಳಿದ್ದು, ಕೆಲವು ನಿರ್ಬಂಧಗಳನ್ನು ಮುಂದುವರಿಸುವ ಸಾಧ್ಯತೆಗಳಿವೆ. ಹೀಗಾಗಿ ಯಾವುದು ಲಾಕ್, ಯಾವುದು ಅನ್ಲಾಕ್ ಆಗುವ ಸಾಧ್ಯತೆಗಳಿದೆ ಅಂತಾ ಒಮ್ಮೆ ನೋಡೋದಾದ್ರೆ.

ಅನ್​ಲಾಕ್​ 3.0 ಹೇಗಿರುತ್ತೆ? – ದೇಶಾದ್ಯಂತ ಶಾಲೆಗಳು ಈಗ ತೆರೆಯೋದು ಅನುಮಾನ – ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಅವಕಾಶ..? – ಖಾಸಗಿ ಕೋಚಿಂಗ್ ಸಂಸ್ಥೆಗಳಿಗೆ ಷರತ್ತು ಬದ್ಧ ಅವಕಾಶ – ಮೆಟ್ರೋ ಸಂಚಾರ ನಿಷೇಧ ಮುಂದುವರಿಯುವ ಸಾಧ್ಯತೆ – ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರವೂ ಇರುವುದಿಲ್ಲ – ಜಿಮ್​ಗಳಿಗೆ ಷರತ್ತು ಬದ್ಧ ಅವಕಾಶ ನೀಡುವ ಸಾಧ್ಯತೆ – 25% ಪ್ರೇಕ್ಷಕರೊಂದಿಗೆ ಸಿನಿಮಾ ಮಂದಿರ ಓಪನ್..? – ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅವಕಾಶ..? – ಕಂಟೇನ್ಮೆಂಟ್ ಬಿಟ್ಟು ಉಳಿದೆಡೆ ಮತ್ತಷ್ಟು ವಿನಾಯಿತಿ..?

ಇಂದು ಪ್ರಧಾನಿ ನೇತೃತ್ವದಲ್ಲಿ ನಡೆಯೋ ಸಂಪುಟ ಸಭೆಯಲ್ಲಿ ಅನ್​ಲಾಕ್ 3.0 ಬಗ್ಗೆ ಚರ್ಚೆ ನಡೆಸೋ ಸಾಧ್ಯತೆಗಳು ದಟ್ಟವಾಗಿವೆ. ಸಂಪುಟ ಸಭೆಯ ಬಳಿಕ ಅನ್​ಲಾಕ್​ 3.0 ರೂಲ್ಸ್ ಬಗ್ಗೆ ಜನರಿಗೆ ಒಂದು ಕ್ಲಾರಿಟಿ ಸಿಗಬಹುದು.

Published On - 7:12 am, Wed, 29 July 20

ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ