
ನವದೆಹಲಿ, ನವೆಂಬರ್ 12: ಕಾಂಗ್ರೆಸ್ನ ವಿದೇಶ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾಗೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಶುಭಾಶಯ ತಿಳಿಸಿದ್ದು ಆನ್ಲೈನ್ನಲ್ಲಿ ತಮಾಷೆಯ ಚರ್ಚೆಗಳು ಹುಟ್ಟುಹಾಕಿವೆ. ರಾಜಕೀಯ ವಿರೋಧಿಗೆ ಶುಭಾಶಯ ಹೇಳುತ್ತೀರಿ. ತಮಗೂ ಶುಭಾಶಯ ಕೋರಿರಿ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿಗಳ ಬೆನ್ನುಬಿದ್ದಿದ್ದಾರೆ. ಒಬ್ಬ ಎಕ್ಸ್ ಬಳಕೆದಾರರ ಬೇಡಿಕೆಗೆ ಬಾಗಿದ ನರೇಂದ್ರ ಮೋದಿ, ಅವರಿಗೆ ದೀಪಾವಳಿ ಶುಭಾಶಯ ತಿಳಿಸಿದರು.
‘ನೀವು ಸ್ಯಾಮ್ ಪಿತ್ರೋಡಾಗೆ ಹ್ಯಾಪಿ ದೀಪಾವಳಿ ಎಂದು ಶುಭ ಕೋರಬಲ್ಲಿರಾದರೆ, ನಮಗೂ ಶುಭಾಶಯ ಹೇಳಿ ಮೋದಿ ಜಿ’ ಎಂದು ಮಿಹಿರ್ ಝಾ ಎನ್ನುವ ಎಕ್ಸ್ ಬಳಕೆದಾರರು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರಧಾನಿ ಮೋದಿ ಸ್ಪಂದಿಸಿ ‘ತಮಗೂ ಹ್ಯಾಪಿ ದೀಪಾವಳಿ ಮಿಹಿರ್ ಭಾಯ್. ಹಬ್ಬದ ಋತು ಮತ್ತು ಮುಂಬರುವ ವರ್ಷ ಚೆನ್ನಾಗಿರಲಿ’ ಎಂದು ಉತ್ತರಿಸಿದರು. ಜೊತೆಗೆ ಒಂದು ಸ್ಮೈಲಿಂಗ್ ಇಮೋಜಿ ಕೂಡ ಹಾಕಿದರು.
ಮಿಹಿರ್ ಝಾ ಅವರಿಗೆ ಶುಭ ಕೋರಿದ ಪ್ರಧಾನಿ
ಇದನ್ನೂ ಓದಿ: ಮೋದಿ ಒಳ್ಳೆಯ ವ್ಯಕ್ತಿ, ಕಠಿಣ ಪರಿಶ್ರಮಿ ಅವರೊಂದಿಗೆ ನನಗೆ ವೈಯಕ್ತಿಕ ದ್ವೇಷವಿಲ್ಲ: ಸ್ಯಾಮ್ ಪಿತ್ರೋಡಾ
ಕಾಂಗ್ರೆಸ್ನ ವಿದೇಶ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರು ನರೇಂದ್ರ ಮೋದಿ ಅವರನ್ನು ಹೊಗಳಿದ ವಿಡಿಯೋವೊಂದನ್ನು ಐಎಎನ್ಎಸ್ ಸುದ್ದಿ ಸಂಸ್ಥೆ ಹಂಚಿಕೊಂಡಿದೆ. ‘ಮೋದಿ ನನ್ನ ಗುಜರಾತಿ ಗೆಳೆಯ. ಒಬ್ಬ ವ್ಯಕ್ತಿಯಾಗಿ ಅವರ ಮೇಲೆ ಗೌರವ ಇದೆ. ಪತ್ನಿ ಜೊತೆ ನಾನು ಅವರನ್ನು ಭೇಟಿಯಾಗಿದ್ದೇನೆ. ವೈಯಕ್ತಿಕ ಮಟ್ಟದಲ್ಲಿ ಬಹಳ ಒಳ್ಳೆಯ ವ್ಯಕ್ತಿ. ಬಹಳ ಒಳ್ಳೆಯ ವಾಗ್ಮಿ ಮತ್ತು ಪರಿಶ್ರಮಿ. ನಮ್ಮ ಬಾಂಧವ್ಯ ಚೆನ್ನಾಗಿದೆ’ ಎಂದು ಪಿತ್ರೋಡಾ ಆ ವಿಡಿಯೋದಲ್ಲಿ ಹೇಳಿದ್ದಾರೆ.
‘ಒಬ್ಬ ಗುಜರಾತೀ ನಾಯಕನಾಗಿ, ಸ್ನೇಹಿತನಾಗಿ ಅಥವಾ ಹಿತೈಷಿಯಾಗಿ ಮೋದಿ ಮೇಲೆ ನನಗೇನೂ ಸಮಸ್ಯೆ ಇಲ್ಲ. ನನ್ನೊಂದಿಗೆ ಚೆನ್ನಾಗಿದ್ದಾರೆ. ಅವರ ರಾಜಕೀಯ ವಿಚಾರಗಳಿಗಷ್ಟೇ ನನ್ನ ಅಭ್ಯಂತರ ಇರುವುದು’ ಎಂದು ಸ್ಯಾಮ್ ಪಿತ್ರೋಡಾ ತಿಳಿಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಸ್ ಯಂತ್ರದಿಂದ ಇನ್‌ಸ್ಟಾಗ್ರಾಂ ರೀಲ್ಸ್‌ವರೆಗೆ, 25 ವರ್ಷಗಳಲ್ಲಿ ರಾಜಕೀಯ, ಮಾಧ್ಯಮದ ಸ್ವರೂಪ ಬದಲಾಗಿದೆ: ಮೋದಿ
ಈ ವಿಡಿಯೋವನ್ನು ಉಲ್ಲೇಖಿಸಿ ನರೇಂದ್ರ ಮೋದಿ ಅವರು ಎಕ್ಸ್ನಲ್ಲಿ ಪೋಸ್ಟ್ ಹಾಕಿದರು. ಸ್ಯಾಮ್ ಭಾಯ್ ಮತ್ತು ಅಂಜನಾ ಬೆನ್ಗೆ ದೀಪಾವಳಿ ಮತ್ತು ಹೊಸ ವರ್ಷದ ಶುಭಾಶಯ ಕೋರಿದರು. ಅದೀಗ ನೆಟ್ಟಿಗರಿಂದ ಸೋಜಿಗದ ಪ್ರತಿಕ್ರಿಯೆಗೂ ಎಡೆ ಮಾಡಿಕೊಟ್ಟಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ