Monsoon 2021: ಇಂದಿನಿಂದ ಕೇರಳದಲ್ಲಿ ಮುಂಗಾರು; ಹವಾಮಾನ ಇಲಾಖೆ ಮುಂಗಾರು ಲೆಕ್ಕಾಚಾರದ ಹನಿ ಹನಿ ಮಾಹಿತಿ ಇಲ್ಲಿದೆ

| Updated By: Digi Tech Desk

Updated on: Jun 03, 2021 | 9:43 AM

Monsoon 2021 Forecast: ಕೃಷಿ ಪ್ರಧಾನ ಭಾರತಕ್ಕೆ ಮುಂಗಾರು ಮಳೆಯೇ ಆಧಾರ. ಅದನ್ನು ಗಾಳಿಯ ವೇಗ, ನಿರಂತರ ಮಳೆಯಾಗುವ ಗುಣಲಕ್ಷಣ ಮತ್ತು ಮೋಡಗಳ ಸಾಂದ್ರತೆಯನ್ನು ಪರಿಗಣಿಸಿ, ಮುಂಗಾರು ವಿದ್ಯಮಾನ ನಿರ್ಧರಿಸಲಾಗುತ್ತದೆ. ಗುರುವಾರ ಸಂಜೆಯ ವೇಳೆಗೆ ಮತ್ತೊಮ್ಮೆ ಮುಂಗಾರು ಅಂದಾಜು ವರದಿಯನ್ನು ಪ್ರಕಟಿಸುವುದಾಗಿ IMD ಪ್ರಧಾನ ನಿರ್ದೇಶಕ ಎಂ ಮಹಾಪಾತ್ರ ತಿಳಿಸಿದ್ದಾರೆ.

Monsoon 2021: ಇಂದಿನಿಂದ ಕೇರಳದಲ್ಲಿ ಮುಂಗಾರು; ಹವಾಮಾನ ಇಲಾಖೆ ಮುಂಗಾರು ಲೆಕ್ಕಾಚಾರದ ಹನಿ ಹನಿ ಮಾಹಿತಿ ಇಲ್ಲಿದೆ
ಇಂದಿನಿಂದ ಕೇರಳದಲ್ಲಿ ಮುಂಗಾರು; ಹವಾಮಾನ ಇಲಾಖೆ ಮುಂಗಾರು ಲೆಕ್ಕಾಚಾರದ ಹನಿ ಹನಿ ಮಾಹಿತಿ ಇಲ್ಲಿದೆ
Follow us on

ಕೊಚ್ಚಿ: ನೈಋತ್ಯ ಮುಂಗಾರು ವಾಡಿಕೆಯಂತೆ ಕೇರಳಕ್ಕೆ ಇಂದು ಪ್ರವೇಶಿಸುವ ಸಾಧ್ಯತೆಯಿದೆ. ಅದರೆ ಇದು ಎರಡು ದಿನ ವಿಳಂಬವಾಗಿ ಬರುತ್ತಿದೆ. ಮುಂಗಾರು ಮಳೆ ದೇಶದಾದ್ಯಂತ ಜುಲೈ 5ರ ವೇಳೆಗೆ ಆಗಮಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ಪುನರ್​ವಿಮರ್ಷಿತ ಅಂದಾಜಿನಲ್ಲಿ ತಿಳಿಸಿದೆ. ಮುಂಗಾರು ವಾಡಿಕೆಯಂತೆ ಕೇರಳಕ್ಕೆ ಇಂದು ಪ್ರವೇಶಿಸಲಿದ್ದು, ಅದರ ಗುಣಲಕ್ಷಣವಾಗಿ ಕರ್ನಾಟಕದಲ್ಲಿ ಮೋಡ, ತುಂತುರು ಮಳೆ ಆರಂಭವಾಗಿದೆ.

ಕೇರಳದಲ್ಲಿ ಸದ್ಯಕ್ಕೆ ನೈಋತ್ಯ ಬೀಸುಗಾಳಿ ಬಲವಾಗಿ ಬೀಸುತ್ತಿದ್ದು, ಗುರುವಾರ ರಾಜ್ಯದಲ್ಲಿ ಮುಂಗಾರು ಪ್ರವೇಶಿಸುವುದಕ್ಕೆ ಹವಾಮಾನ ಹದವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department -IMD) ಪ್ರಕಟಣೆಯಲ್ಲಿ ತಿಳಿಸಿದೆ. ಕೃಷಿ ಪ್ರಧಾನ ಭಾರತಕ್ಕೆ ಮುಂಗಾರು ಮಳೆಯೇ ಆಧಾರ. ಅದನ್ನು ಗಾಳಿಯ ವೇಗ, ನಿರಂತರ ಮಳೆಯಾಗುವ ಗುಣಲಕ್ಷಣ ಮತ್ತು ಮೋಡಗಳ ಸಾಂದ್ರತೆಯನ್ನು ಪರಿಗಣಿಸಿ, ಮುಂಗಾರು ವಿದ್ಯಮಾನ ನಿರ್ಧರಿಸಲಾಗುತ್ತದೆ. ಗುರುವಾರ ಸಂಜೆಯ ವೇಳೆಗೆ ಮತ್ತೊಮ್ಮೆ ಮುಂಗಾರು ಅಂದಾಜು ವರದಿಯನ್ನು ಪ್ರಕಟಿಸುವುದಾಗಿ IMD ಪ್ರಧಾನ ನಿರ್ದೇಶಕ ಎಂ ಮಹಾಪಾತ್ರ ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಮುಂಗಾರು ಲೆಕ್ಕಾಚಾರದ ಹನಿ ಹನಿ ಮಾಹಿತಿ ಹೀಗಿದೆ:
ಪಶ್ಚಿಮ ಮಾರುತಗಳು ದಕ್ಷಿಣ ಅರಬ್ಬೀ ಸಮುದ್ರದ ತಟದಲ್ಲಿ ಕೆಳ ಹಂತದಲ್ಲಿ ಬಲಗೊಂಡಿದ್ದು, ಆಳವಾಗಿದೆ. ಹಾಗಾಗಿ ಪ್ರಾದೇಶಿಕ ಮಳೆ ಪ್ರಮಾಣ ಕೇರಳದಲ್ಲಿ ಹೆಚ್ಚಾಗಿದೆ. ಕೇರಳ ಕರಾವಳಿಯಲ್ಲಿ ಮತ್ತು ಸಮೀಪದ ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಮೋಡಗಳ ಸಾಂದ್ರತೆ ಹೆಚ್ಚಾಗಿದೆ. ಇದರಿಂದ ಮುಂದಿನ 24 ಗಂಟೆಯಲ್ಲಿ ಕೇರಳಾದ್ಯಂತ ಮಳೆ ಸುರಿಯಲಿದೆ.ಅದುವೇ ಮುಂಗಾರು ಆರಂಭ ಎಂದು ಉಪಗ್ರಹ ಚಿತ್ರಗಳನ್ನಾಧರಿಸಿ IMD ನಿಖರ ಮಾಹಿತಿ ನೀಡಿದೆ.

ಮಂಗಳವಾರ IMD ಬಿಡುಗಡೆಗೊಳಿಸಿದ ವರದಿಯನುಸಾರ ಎರಡನೆಯ ದೀರ್ಘಾವಧಿ ಅಂದಾಜಿನಲ್ಲಿ ಈ ಬಾರಿ ಮುಂಗಾರು ಪ್ರಮಾಣ ಶೇ. 101ರಷ್ಟಿರಲಿದೆ. ಇದು ಎರಡು ವರ್ಷಗಳ ದೀರ್ಘಾವಧಿ ಸರಾಸರಿ (LPA) ಮಳೆ ಪ್ರಮಾಣದ ಆಧಾರದಲ್ಲಿದೆ. LPA ಅಂದ್ರೆ ದೀರ್ಘಾವಧಿ ಮಳೆ ಸರಾಸರಿ 88 ಸೆಂಟಿ ಮೀಟರ್ ಪ್ರಮಾಣದಲ್ಲಿರುತ್ತದೆ. ಇದನ್ನು 1961ರ ಮತ್ತು 2010ರ ನಡುವೆ ಜೂನ್​ ಮತ್ತು ಸೆಪ್ಟೆಂಬರ್ ತಿಂಗಳಲ್ಲಾದ ​ಮಳೆಯನ್ನಾಧರಿಸಿ ಲೆಕ್ಕ ಹಾಕಲಾಗಿದೆ.

2020 ಮತ್ತು 2019 ಮುಂಗಾರು ಸಾಲಿನಲ್ಲಿ LPA ಮಳೆ ಸರಾಸರಿ ಅನುಕ್ರಮವಾಗಿ 110 % ಮತ್ತು 109 % ಪ್ರಮಾಣದಲ್ಲಿತ್ತು. 1996, 1997 ಮತ್ತು 1998 ಮುಂಗಾರು ಸಾಲಿನಲ್ಲಿ 103.4 %, 102.2 % ಮತ್ತು 104 % ಪ್ರಮಾಣದ ಮಳೆಯಾಗಿತ್ತು.

ಜೂನ್​ ನಿಂದ ಸೆಪ್ಟೆಂಬರ್​ ವರೆಗಿನ ನಾಲ್ಕು ತಿಂಗಳ ಮುಂಗಾರು ಸಾಲಿನಲ್ಲಿ ಭಾರತದಲ್ಲಿ ಶೇ. 70ರಷ್ಟು ಮಳೆಯಾಗುತ್ತದೆ. ಇದು ಅಕ್ಕಿ, ಸೋಯಾಬೀನ್, ಹತ್ತಿ ಬೆಳೆಗೆ ನಿರ್ಣಾಯಕವಾಗಿರುತ್ತದೆ. ಕಳೆದ ಎರಡು ವರ್ಷಗಳಿಂದ ಇದು ಉತ್ತಮವಾಗಿದೆ. ಕೊವಿಡ್​ ಸೋಂಕು ಕಾಲದಲ್ಲೂ ಕಳೆದ ವರ್ಷ ಉತ್ತಮ ಮಳೆಯಾಗಿ ರೈತಾಪಿ ರ್ಗಕ್ಕೆ ಆಶಾದಾಯಕವಾಗಿತ್ತು. ಈ ವರ್ಷವೂ ಇದೇ ನಿರೀಕ್ಷೆಯಲ್ಲಿದೆ ರೈತಾಪಿ ವರ್ಗ.

(Monsoon 2021 onset in Kerala today: says forecast by M Mohapatra director general India Meteorological Department IMD)

Monsoon 2021: ಸೋಮವಾರದಂದು ಕೇರಳ ಪ್ರವೇಶಿಸಲು ಸಜ್ಜಾದ ಮುಂಗಾರು; ಬಲಗೊಳ್ಳುತ್ತಿದೆ ನೈರುತ್ಯ ಮಾರುತ