AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon 2021: ಸೋಮವಾರದಂದು ಕೇರಳ ಪ್ರವೇಶಿಸಲು ಸಜ್ಜಾದ ಮುಂಗಾರು; ಬಲಗೊಳ್ಳುತ್ತಿದೆ ನೈರುತ್ಯ ಮಾರುತ

ಸದ್ಯದ ಪರಿಸ್ಥಿತಿಯಲ್ಲಿ ಮೇ 31ಕ್ಕೆ ಮುಂಗಾರು ಕೇರಳ ಪ್ರವೇಶಿಸಲು ವಾತಾವರಣ ಪೂರಕವಾಗಿದ್ದು, ಜೂನ್​ನಿಂದ ಸೆಪ್ಟೆಂಬರ್ ತನಕದ ನಾಲ್ಕು ತಿಂಗಳ ಮಳೆಗಾಲ ಈ ಬಾರಿ ಉತ್ತಮವಾಗಿರಲಿದೆ ಎಂದು ಹವಾಮಾನ ಇಲಾಖೆ ನಿರೀಕ್ಷಿಸಿದೆ. ಮುಂಗಾರಿಗೆ ಸಂಬಂಧಿಸಿದ ಎರಡನೇ ಹಂತದ ಮಾಹಿತಿಯನ್ನು ಇಲಾಖೆಯು ಮೇ 31ರಂದು ಬಿಡುಗಡೆ ಮಾಡುವುದಾಗಿ ತಿಳಿಸಿದೆ.

Monsoon 2021: ಸೋಮವಾರದಂದು ಕೇರಳ ಪ್ರವೇಶಿಸಲು ಸಜ್ಜಾದ ಮುಂಗಾರು; ಬಲಗೊಳ್ಳುತ್ತಿದೆ ನೈರುತ್ಯ ಮಾರುತ
ಸಾಂದರ್ಭಿಕ ಚಿತ್ರ
Skanda
|

Updated on: May 28, 2021 | 10:04 AM

Share

ದೆಹಲಿ: ಈ ಬಾರಿ ಮೇ ತಿಂಗಳಿನಿಂದಲೇ ದೇಶದ ಹಲವೆಡೆ ಮಳೆಗಾಲದ ವಾತಾವರಣ ಕಾಣಿಸಿಕೊಂಡಿದೆ. ತೌಕ್ತೆ ಚಂಡಮಾರುತ ಹಾಗೂ ಅದರ ಬೆನ್ನಲ್ಲೇ ಬಂದ ಯಾಸ್ ಚಂಡಮಾರುತದ ಕಾರಣ ಒಂದಷ್ಟು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಇದೀಗ ಚಂಡಮಾರುತದ ಪರಿಣಾಮವಾಗಿ ಮುಂಗಾರು ಮತ್ತಷ್ಟು ವೇಗ ಪಡೆದುಕೊಂಡಿದ್ದು ಮೇ 31ರಂದು ಕೇರಳ ಪ್ರವೇಶಿಸಲು ಸನ್ನದ್ಧವಾಗಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಇಲಾಖೆಯ ವರದಿಗಳ ಪ್ರಕಾರ ನೈರುತ್ಯ ಮಾರುತಗಳು ಬಲಗೊಂಡಿದ್ದು, ಮುಂದಿನ ಸೋಮವಾರದಿಂದ ಮುಂಗಾರು ಆರಂಭವಾಗುವ ಸಾಧ್ಯತೆ ಇದೆ.

ಅರಬ್ಬೀ ಸಮುದ್ರದಲ್ಲಿ ತೌಕ್ತೆ ಹಾಗೂ ಬಂಗಾಳ ಕೊಲ್ಲಿಯಲ್ಲಿ ಯಾಸ್ ಚಂಡಮಾರುತಗಳು ಸೃಷ್ಟಿಯಾದ ಕಾರಣ ಹಲವೆಡೆ ಉತ್ತಮ ಮಳೆಯಾಗಿದೆ. ಕೆಲವೊಂದಷ್ಟು ಜನರ ಊಹೆಗಳ ಪ್ರಕಾರ ಚಂಡಮಾರುತದ ಪ್ರಭಾವದಿಂದಾಗಿ ಮುಂಗಾರು ದುರ್ಬಲಗೊಂಡು ಈ ಬಾರಿಯ ಮಳೆಗಾಲ ತಡವಾಗಬಹುದು ಎನ್ನಲಾಗಿತ್ತಾದರೂ ಈಗ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ವಾಡಿಕೆಗಿಂತಲೂ ಒಂದು ದಿನ ಮುಂಚೆಯೇ ಮುಂಗಾರು ಆಗಮಿಸಲಿದೆ.

ಸಾಧಾರಣವಾಗಿ ಪ್ರತಿವರ್ಷ ಜೂನ್ 1 ರಂದು ಮುಂಗಾರು ಕೇರಳ ಪ್ರವೇಶಿಸುತ್ತದೆ ಎನ್ನುವುದು ವಾಡಿಕೆ. ಇದು ಒಂದೆರೆಡು ದಿನ ಆಚೀಚೆ ಆಗಬಹುದಾದರೂ ಚಂಡಮಾರುತಗಳು ಹತ್ತಿರದಲ್ಲಿ ಉದ್ಭವಿಸಿದಾಗ ನಾಲ್ಕಾರು ದಿನ ಮುಂದೆ ಹೋಗುವ ಸಾಧ್ಯತೆಯೂ ಇರುತ್ತದೆ. ಆದರೆ, ಈ ವರ್ಷ ತೌಕ್ತೆ ಹಾಗೂ ಯಾಸ್ ಚಂಡಮಾರುತಗಳು ಸನಿಹದಲ್ಲೇ ಉಲ್ಬಣಿಸಿದರೂ ಅಂತಹ ಪರಿಣಾಮಗಳಾದಂತಿಲ್ಲ. ಬದಲಾಗಿ ನಿನ್ನೆ (ಮೇ 27) ಮುಂಜಾನೆ ವೇಳೆಗಾಗಲೇ ಮಾಲ್ಡೀವ್ಸ್, ಕೊಮಾರಿನ್ ಪ್ರದೇಶ, ಬಂಗಾಳ ಕೊಲ್ಲಿಯ ನೈರುತ್ಯ ಹಾಗೂ ಪೂರ್ವ ಕೇಂದ್ರ ಭಾಗಗಳಲ್ಲಿ ನೈರುತ್ಯ ಮಾರುತಗಳು ತಮ್ಮ ಪ್ರಭಾವ ಬೀರಲಾರಂಭಿಸಿವೆ.

ಸದ್ಯದ ಪರಿಸ್ಥಿತಿಯಲ್ಲಿ ಮೇ 31ಕ್ಕೆ ಮುಂಗಾರು ಕೇರಳ ಪ್ರವೇಶಿಸಲು ವಾತಾವರಣ ಪೂರಕವಾಗಿದ್ದು, ಜೂನ್​ನಿಂದ ಸೆಪ್ಟೆಂಬರ್ ತನಕದ ನಾಲ್ಕು ತಿಂಗಳ ಮಳೆಗಾಲ ಈ ಬಾರಿ ಉತ್ತಮವಾಗಿರಲಿದೆ ಎಂದು ಹವಾಮಾನ ಇಲಾಖೆ ನಿರೀಕ್ಷಿಸಿದೆ. ಮುಂಗಾರಿಗೆ ಸಂಬಂಧಿಸಿದ ಎರಡನೇ ಹಂತದ ಮಾಹಿತಿಯನ್ನು ಇಲಾಖೆಯು ಮೇ 31ರಂದು ಬಿಡುಗಡೆ ಮಾಡುವುದಾಗಿ ತಿಳಿಸಿದೆ.

(Monsoon 2021 likely to onset over Kerala on May 31st says India Meteorological Department IMD)

ಇದನ್ನೂ ಓದಿ: Cyclone Yaas: 4 ದಿನ ಮುಂಚೆಯೇ ಕರ್ನಾಟಕಕ್ಕೆ ಮುಂಗಾರು ಪ್ರವೇಶ; ಇದು ಪ್ರಚಂಡ ಮಾರುತ ಯಾಸ್​ ಪರಿಣಾಮ: ಏನಿದರ ಪ್ರಕೋಪ? 

Monsoon 2021: ಅವಧಿಗೂ ಮುನ್ನವೇ ಮುಂಗಾರು ಪ್ರವೇಶ; ಚಂಡಮಾರುತದ ಬೆನ್ನಲ್ಲೇ ಮಳೆಗಾಲ ಶುರುವಾಗುವ ಸಾಧ್ಯತೆ