‘ನಾನಿನ್ನು ಡಾ. ರಾಹುಲ್​..’ಎಂದು ಖುಷಿಯಿಂದ ಹೇಳಿಕೊಂಡಿದ್ದ ವೈದ್ಯ ಕೊವಿಡ್​ 19ನಿಂದ ಸಾವು; ಆಸ್ಪತ್ರೆ ಬೆಡ್​ ಮೇಲೆ ಒಂದು ತಿಂಗಳು ಹೋರಾಟ

|

Updated on: May 27, 2021 | 3:54 PM

ಡಾ. ರಾಹುಲ್​ ಮಹಾರಾಷ್ಟ್ರದ ಲಾಥೂರ್​​​ನಲ್ಲಿರುವ ಇನ್​​ಸ್ಟಿಟ್ಯೂಟ್ ಆಫ್​ ಮೆಡಿಕಲ್​ ಸೈನ್ಸ್​ ಆ್ಯಂಡ್​ ರಿಸರ್ಚ್​ನಲ್ಲಿ 5ವರ್ಷಗಳ ಎಂಬಿಬಿಎಸ್​ ಪದವಿ ಪೂರ್ಣಗೊಳಿಸಿದ್ದರು. ಹಾಗೇ ಮೊದಲಿನಿಂದಲೂ ವಿದ್ಯಾಭ್ಯಾಸದಲ್ಲಿ ಮುಂದಿದ್ದರು.

‘ನಾನಿನ್ನು ಡಾ. ರಾಹುಲ್​..’ಎಂದು ಖುಷಿಯಿಂದ ಹೇಳಿಕೊಂಡಿದ್ದ ವೈದ್ಯ ಕೊವಿಡ್​ 19ನಿಂದ ಸಾವು; ಆಸ್ಪತ್ರೆ ಬೆಡ್​ ಮೇಲೆ ಒಂದು ತಿಂಗಳು ಹೋರಾಟ
ಡಾ.ರಾಹುಲ್​
Follow us on

ಇವರು ಆಗತಾನೇ ವೈದ್ಯಕೀಯ ವೃತ್ತಿ ಶುರು ಮಾಡಿದ ಯುವಕ. ಏಪ್ರಿಲ್​ 26ರಂದು ಫೇಸ್​​ಬುಕ್​​ನಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ವೈದ್ಯಕೀಯ ವೃತ್ತಿ ಪ್ರಾರಂಭದ ವಿಷಯವನ್ನು ತಿಳಿಸಿದ್ದರು. ‘ನಾನು ವೈದ್ಯಕೀಯ ಪದವಿಯ ಅಂತಿಮ ವರ್ಷ ಉತ್ತೀರ್ಣನಾದೆ. ಇದೀಗ ಅಧಿಕೃತವಾಗಿ ಡಾ. ರಾಹುಲ್​ ಆಗಿದ್ದೇನೆ..’ಹೀಗೆಂದು ಬರೆದುಕೊಂಡಿದ್ದರು. ರಾಹುಲ್ ಹಾಕಿದ್ದ ಈ ಪೋಸ್ಟ್​​ಗೆ ಸಿಕ್ಕಾಪಟೆ ಲೈಕ್​​ಗಳು, ಶುಭಹಾರೈಕೆಗಳು ಬಂದಿದ್ದವು. ಆದರೇನು? ಈಗ ಅವರ ಸ್ನೇಹಿತರು, ಆಪ್ತರು ರಾಹುಲ್​ ಅವರ ಸಾವಿನ ನೋವನ್ನು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ. ರಾಹುಲ್​ ಫೋಟೋ ಹಾಕಿ ಸಂತಾಪ ಸೂಚಿಸುತ್ತಿದ್ದಾರೆ.

ಕಳೆದ ತಿಂಗಳಷ್ಟೇ ವೈದ್ಯಕೀಯ ವೃತ್ತಿ ಶುರು ಮಾಡಿ ಹೊಸದೊಂದು ಹೆಜ್ಜೆ ಇಟ್ಟಿದ್ದ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಆನಂದನಗರ ಗ್ರಾಮದ ಡಾ. ರಾಹುಲ್ ಆಶಾ ವಿಶ್ವನಾಥ್​ ಪವಾರ್​ ಕೊವಿಡ್​ 19 ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇವರ ತಂದೆ ಕಬ್ಬು ಕೊಯ್ಲು ಮಾಡುವ ವೃತ್ತಿ ನಡೆಸುತ್ತಿದ್ದು, ತಮ್ಮ ಮಗನನ್ನು ತುಂಬ ಚೆನ್ನಾಗಿ ಓದಿಸಿ, ಭವಿಷ್ಯದ ಕನಸು ಕಂಡಿದ್ದರು. ಹಾಗೇ ಇವರ ಕುಟುಂಬದಲ್ಲಿ ಡಾ. ರಾಹುಲ್​ ಅವರೇ ಮೊದಲ ವೈದ್ಯರೂ ಆಗಿದ್ದರು.

ಡಾ. ರಾಹುಲ್​ ಮಹಾರಾಷ್ಟ್ರದ ಲಾಥೂರ್​​​ನಲ್ಲಿರುವ ಇನ್​​ಸ್ಟಿಟ್ಯೂಟ್ ಆಫ್​ ಮೆಡಿಕಲ್​ ಸೈನ್ಸ್​ ಆ್ಯಂಡ್​ ರಿಸರ್ಚ್​ನಲ್ಲಿ 5ವರ್ಷಗಳ ಎಂಬಿಬಿಎಸ್​ ಪದವಿ ಪೂರ್ಣಗೊಳಿಸಿದ್ದರು. ಹಾಗೇ ಮೊದಲಿನಿಂದಲೂ ವಿದ್ಯಾಭ್ಯಾಸದಲ್ಲಿ ಮುಂದಿದ್ದರು. ಎಂಬಿಬಿಎಸ್​ ಕೊನೇ ವರ್ಷದ ಪರೀಕ್ಷೆ ಮುಗಿಸಿದ ಕೂಡಲೇ ಡಾ. ರಾಹುಲ್ ಹಳ್ಳಿಗೆ ಬಂದಿದ್ದರು. ಆದರೆ ಕೆಲವು ದಿನಗಳಲ್ಲಿ ಅವರಲ್ಲಿ ಕೊವಿಡ್​ 19 ಸಂಬಂಧಪಟ್ಟ ಲಕ್ಷಣಗಳು ಕಾಣಿಸಿಕೊಂಡಿದ್ದವು. ಅದಾದ ಬಳಿಕ ಬೀಡ್​ ಜಿಲ್ಲೆಯ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದರು. ಆದರೆ ರಾಹುಲ್ ಆರೋಗ್ಯ ಸ್ಥಿತಿ ಹದಗೆಡುತ್ತ ಹೋಯಿತು. ಹಾಗಾಗಿ ನಂತರ ಔರಂಗಾಬಾದ್​ನ ಎಂಜಿಎಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಮೇ 6ರಿಂದ ಅವರ ಇಂಟರ್ನ್​ಶಿಪ್​ ಶುರುವಾಗುವುದಿತ್ತು. ಆದರೆ ರಾಹುಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ರಾಹುಲ್​ಗೆ ಯಾವುದೇ ಇತರ ಕಾಯಿಲೆಗಳು ಇಲ್ಲದೆ ಇದ್ದರೂ ಆರೋಗ್ಯ ಸ್ಥಿತಿ ಹದಗೆಡುತ್ತಲೇ ಹೋಯಿತು. ಈ ವೇಳೆ ಹಣಕಾಸಿನ ತೊಂದೆಯೂ ಉಂಟಾಗಿ ರಾಹುಲ್ ಸ್ನೇಹಿತರು ಮೇ 20ರಿಂದ ಸಾಮಾಜಿಕ ಜಾಲತಾಣಗಳ ಮೂಲಕ ದೇಣಿಗೆ, ಹಣಕಾಸು ನೆರವು ಕೇಳಲು ಶುರು ಮಾಡಿದರು. ಅದೇ ವೇಳೆ, ರಾಹುಲ್​ಗೆ ಉಚಿತವಾಗಿ ಚಿಕಿತ್ಸೆ ನೀಡಲು ಆಸ್ಪತ್ರೆಯೂ ನಿರ್ಧಾರ ಮಾಡಿತ್ತು ಎಂದು ರಾಹುಲ್​ ಸಹೋದ್ಯೋಗಿ ಡಾ.ಅಮರನಾಥ್ ಗುಟ್ಟೆ ತಿಳಿಸಿದ್ದಾರೆ.

ಇನ್ನು ಎಷ್ಟೆಲ್ಲ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಅಷ್ಟರಲ್ಲಿ ಡಾ. ರಾಹುಲ್​ಗೆ ಬ್ಲ್ಯಾಕ್ ಫಂಗಸ್​ ಕೂಡ ತಗುಲಿತ್ತು. ಕ್ಷೀಣಿಸುತ್ತಿರುವ ಆರೋಗ್ಯದೊಂದಿಗೆ ಸುಮಾರು ತಿಂಗಳ ಕಾಲ ಹೋರಾಟ ಮಾಡಿದ ರಾಹುಲ್​ ನಿನ್ನೆ (ಬುಧವಾರ) ಮೃತಪಟ್ಟಿದ್ದಾರೆ. ನಾವು ನಮ್ಮ ಅತ್ಯುತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದೇವೆ ಎಂದು ಡಾ. ಗುಟ್ಟೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ ಸತ್ತ ವ್ಯಕ್ತಿಯ ಮೃತದೇಹವನ್ನ ಕಸದ ವಾಹನದಲ್ಲಿ ಅಂತ್ಯಕ್ರಿಯೆಗಾಗಿ ಸಾಗಿಸಲಾಗಿದೆ…