Video: ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಬಾಲಕನನ್ನು ಅಪಹರಿಸಿದ್ರಾ ಪೊಲೀಸರು?

ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರು ಬಸ್ಸಿನಿಂದ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವೈರಲ್ ಆದ ವಿಡಿಯೋದಲ್ಲಿ ಮಫ್ತಿಲಿದ್ದ ಪೊಲೀಸರು ಬಾಲಕನನ್ನು ಬಸ್ಸಿನಿಂದ ಇಳಿಸಿಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಮಲ್ಹಾರ್‌ಗಢ ಪೊಲೀಸ್ ಠಾಣೆ ಪೊಲೀಸರ ಮೇಲೆ ಈ ದೂರು ಕೇಳಿಬಂದಿದೆ.ವಿದ್ಯಾರ್ಥಿಯನ್ನು ಬಸ್ಸಿನಿಂದ ಅಪಹರಿಸಿ ನಕಲಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಹೈಕೋರ್ಟ್​​ಗೆ ಸಾಕ್ಷಿ ಸಮೇತ ದಾಖಲೆ ಸಲ್ಲಿಸಲಾಗಿದೆ.

ಭೋಪಾಲ್, ಡಿಸೆಂಬರ್ 10: ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪೊಲೀಸರು(Police) ಬಸ್ಸಿನಿಂದ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದಎ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವೈರಲ್ ಆದ ವಿಡಿಯೋದಲ್ಲಿ ಮಫ್ತಿಲಿದ್ದ ಪೊಲೀಸರು ಬಾಲಕನನ್ನು ಬಸ್ಸಿನಿಂದ ಇಳಿಸಿಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಮಲ್ಹಾರ್‌ಗಢ ಪೊಲೀಸ್ ಠಾಣೆ ಪೊಲೀಸರ ಮೇಲೆ ಈ ದೂರು ಕೇಳಿಬಂದಿದೆ.ವಿದ್ಯಾರ್ಥಿಯನ್ನು ಬಸ್ಸಿನಿಂದ ಅಪಹರಿಸಿ ನಕಲಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಹೈಕೋರ್ಟ್​​ಗೆ ಸಾಕ್ಷಿ ಸಮೇತ ದಾಖಲೆ ಸಲ್ಲಿಸಲಾಗಿದೆ.

ಆಗಸ್ಟ್ 29 ರಂದು ಮಲ್ಹರ್‌ಗಢದ 18 ವರ್ಷದ 12 ನೇ ತರಗತಿ ವಿದ್ಯಾರ್ಥಿ ಸೋಹನ್ ಎಂಬ ವಿದ್ಯಾರ್ಥಿಯನ್ನು ಬಲವಂತವಾಗಿ ಬಸ್ಸಿನಿಂದ ಇಳಿಸಿ ಕರೆದೊಯ್ಯಲಾಗಿತ್ತು. ಕೆಲವು ಗಂಟೆಗಳ ನಂತರ, ಪೊಲೀಸರು ಆತನನ್ನು 2.7 ಕೆಜಿ ಅಫೀಮು ಜೊತೆ ಬಂಧಿಸಲಾಗಿದೆ ಎಂದು ಘೋಷಿಸಿ ಮರುದಿನ ನ್ಯಾಯಾಲಯಕ್ಕೆ ಹಾಜರುಪಡಿಸಿದರು, ಅದು ಅವನನ್ನು ಜೈಲಿಗೆ ಕಳುಹಿಸಲಾಗಿತ್ತು.

ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ವೀಡಿಯೊಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಬೇರೆಯದೇ ಕಥೆಯನ್ನು ಹೇಳಿವೆ. ಆತನ ಬಳಿ ಯಾವುದೇ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದು ಎಲ್ಲೂ ಕಾಣಿಸಿಲ್ಲ. ನಂತರ ಅವರ ಕುಟುಂಬವು ಡಿಸೆಂಬರ್ 5 ರಂದು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠದ ಮುಂದೆ ಕಾನೂನುಬಾಹಿರ ಅಪಹರಣ,  ಸಾಕ್ಷ್ಯಗಳೇ ಇಲ್ಲದೆ ಬಂಧನ ಮತ್ತು ಸುಳ್ಳುಸಾಕ್ಷ್ಯಾಧಾರಗಳ ಸೃಷ್ಟಿ ಕುರಿತು ಆರೋಪಿಸಿ ಮೊಕದ್ದಮೆ ಹೂಡಿತು.

ಮತ್ತಷ್ಟು ಓದಿ:  ಬೆಂಗಳೂರು: ಹಾಸಿಗೆಯ ಕೆಳಗೆ 11 ಲಕ್ಷ ರೂ. ಬಚ್ಚಿಟ್ಟಿದ್ದ ಕಾನ್ಸ್ಟೇಬಲ್ ಅರೆಸ್ಟ್

ಹೈಕೋರ್ಟ್ ಈಗ ತನ್ನ ಆದೇಶವನ್ನು ಕಾಯ್ದಿರಿಸಿದೆ, ಕಾನೂನು ತಜ್ಞರು ಕಠಿಣ ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ತಿಂಗಳು ಮಲ್ಹರ್‌ಗಢ ಪೊಲೀಸ್ ಠಾಣೆ ರಾಷ್ಟ್ರೀಯ ಮನ್ನಣೆ ಗಳಿಸಿದ್ದು, ಭಾರತದ ಅತ್ಯುತ್ತಮ ಪೊಲೀಸ್ ಠಾಣೆಗಳಲ್ಲಿ ಒಂಬತ್ತನೇ ಸ್ಥಾನ ಪಡೆದಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:45 pm, Wed, 10 December 25