AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಸದ ನಾಯಕ; ರಾಹುಲ್ ಗಾಂಧಿಯ ಜರ್ಮನಿ ಭೇಟಿಗೆ ಬಿಜೆಪಿ ಲೇವಡಿ

ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿರುವ ಬಿಜೆಪಿ ನಾಯಕರು ರಾಹುಲ್ ಗಾಂಧಿಯನ್ನು ಪ್ರವಾಸದ ನಾಯಕ ಎಂದು ಲೇವಡಿ ಮಾಡಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಇದೀಗ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದ ಸಮಯದಲ್ಲಿಯೇ ಜರ್ಮನಿಗೆ ಪ್ರಯಾಣಿಸಲಿದ್ದಾರೆ. ಆಗಾಗ ವಿದೇಶ ಪ್ರವಾಸ ಮಾಡುವ ಮೂಲಕ ಅವರು ತಮ್ಮ ಕರ್ತವ್ಯಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಪ್ರವಾಸದ ನಾಯಕ; ರಾಹುಲ್ ಗಾಂಧಿಯ ಜರ್ಮನಿ ಭೇಟಿಗೆ ಬಿಜೆಪಿ ಲೇವಡಿ
Rahul Gandhi
ಸುಷ್ಮಾ ಚಕ್ರೆ
|

Updated on: Dec 10, 2025 | 4:52 PM

Share

ನವದೆಹಲಿ, ಡಿಸೆಂಬರ್ 10: ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರ ಮುಂಬರುವ ಜರ್ಮನಿ ಪ್ರವಾಸದ ಬಗ್ಗೆ ಬಿಜೆಪಿ ವಾಗ್ದಾಳಿ ನಡೆಸಿದೆ. ರಾಹುಲ್ ಗಾಂಧಿಯನ್ನು “ಪ್ರವಾಸದ ನಾಯಕ” ಎಂದು ಬಿಜೆಪಿ ಲೇವಡಿ ಮಾಡಿದೆ. ಚಳಿಗಾಲದ ಅಧಿವೇಶನ ಮುಗಿಯುವ ಮೊದಲೇ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ. ಚಳಿಗಾಲದ ಅಧಿವೇಶನ ಡಿಸೆಂಬರ್ 19ರಂದು ಮುಕ್ತಾಯಗೊಳ್ಳಲಿದೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಡಿಸೆಂಬರ್ 15ರಿಂದ 20ರವರೆಗೆ ಬರ್ಲಿನ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಮಯದಲ್ಲಿ ಅವರು ಜರ್ಮನ್ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಿ ಭಾರತೀಯ ವಲಸೆಗಾರರೊಂದಿಗೆ ಸಂವಾದ ನಡೆಸುವ ನಿರೀಕ್ಷೆಯಿದೆ.

ಈ ಬಗ್ಗೆ ಎಕ್ಸ್​​​ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ರಾಹುಲ್ ಗಾಂಧಿಯನ್ನು “ಪ್ರವಾಸದ ನಾಯಕ” ಎಂದು ಕರೆದಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಜತೆ ರಾಹುಲ್ ಗಾಂಧಿ ಮಹತ್ವದ ಸಭೆ

“ಬಿಹಾರದ ಚುನಾವಣೆಯ ಸಮಯದಲ್ಲಿ ರಾಹುಲ್ ಗಾಂಧಿ ಎಲ್ಲಿದ್ದರು? ಈಗ ಮತ್ತೊಂದು ಪ್ರವಾಸಕ್ಕೆ ಹೊರಟಿದ್ದಾರೆ. ಸಾಮಾನ್ಯ ಜನರು ಕೆಲಸದ ಅವಧಿಗಳ ನಡುವೆ ರಜೆ ತೆಗೆದುಕೊಳ್ಳುತ್ತಾರೆ. ಆದರೆ ಈ ವ್ಯಕ್ತಿ ಎರಡು ರಜಾ ಅವಧಿಗಳ ನಡುವೆ ಕೆಲಸ ಮಾಡುತ್ತಾರೆ ಅನಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
"ಕಳೆದ 2 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ"
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ
ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ