ಗಡಿ ಪಹರೆಗೆ ತರಬೇತಿ ಪಡೆಯಲಿವೆ ಮುಧೋಳ ಶ್ವಾನಗಳು; ಮೇಘಾಲಯ ಬಿಎಸ್​ಎಫ್​ ನಿರ್ಧಾರ

ಕೇವಲ ಗಡಿ ಭದ್ರತಾ ಪಡೆಯಷ್ಟೇ ಅಲ್ಲದೇ, ಭಾರತೀಯ ಸೇನೆಯೂ ಭಾರತೀಯ ತಳಿಯ ಶ್ವಾನಗಳಿಗೆ ಹೆಚ್ಚಿನ ತರಬೇತಿ ನೀಡಿ, ಸೇನೆಗೆ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಿದೆ.

ಗಡಿ ಪಹರೆಗೆ ತರಬೇತಿ ಪಡೆಯಲಿವೆ ಮುಧೋಳ ಶ್ವಾನಗಳು; ಮೇಘಾಲಯ ಬಿಎಸ್​ಎಫ್​ ನಿರ್ಧಾರ
ಪ್ರಾತಿನಿಧಿಕ ಚಿತ್ರ

Updated on: Jan 03, 2021 | 5:41 PM

ಶಿಲ್ಲಾಂಗ್: ಮೇಘಾಲಯದ ಶಿಲ್ಲಾಂಗ್​ನಲ್ಲಿ​ ಗಡಿ ಭದ್ರತಾ ಪಡೆ ಎರಡು ಭಾರತೀಯ ತಳಿಯ ಶ್ವಾನಗಳಿಗೆ ಗಡಿ ಪಹರೆ ತರಬೇತಿ ನೀಡಲು ನಿರ್ಧರಿಸಿದೆ. ಅದರಲ್ಲಿ ಒಂದು ಬಾಗಲಕೋಟೆಯ ಮುಧೋಳ ತಳಿಯ ನಾಯಿಗಳು ಮತ್ತು ಇನ್ನೊಂದು ತಮಿಳುನಾಡಿನ ವಿರುಧುನಗರದ ರಾಜಪಾಳಯಂ ತಳಿಯ ನಾಯಿಗಳು. ಒಂದೊಮ್ಮೆ ತರಬೇತಿ ಯಶಸ್ವಿಯಾಗಿ, ಶ್ವಾನಗಳು ಗಡಿಕಾಯಲು ಸಂಪೂರ್ಣ ಸಿದ್ಧಗೊಂಡರೆ, ಇನ್ನೂ ಹೆಚ್ಚಿನ ಭಾರತೀಯ ತಳಿಗಳ ಶ್ವಾನಗಳಿಗೆ ತರಬೇತಿ ನೀಡಿ, ಗಡಿಯಲ್ಲಿ ನಿಯೋಜಿಸಲು ಶಿಲ್ಲಾಂಗ್​ ಬಿಎಸ್​ಎಫ್​ ನಿರ್ಧಾರ ಮಾಡಿದೆ. ​

ನಾವು ಸದ್ಯಕ್ಕೆ ಮುಧೋಳ ಮತ್ತು ರಾಜಪಾಳಯಂ ತಳಿಯ ಶ್ವಾನಗಳಿಗೆ ಪ್ರಯೋಗಾತ್ಮಕವಾಗಿ ತರಬೇತಿ ನೀಡುತ್ತೇವೆ. ಆದಷ್ಟು ಬೇಗನೇ ಈ ತರಬೇತಿ​ ಮುಕ್ತಾಯವಾಗಲಿದ್ದು, ಗಡಿಯಲ್ಲಿ ಪಹರೆಗೆ ಇಳಿಯಲಿವೆ. ಇವು ಎಷ್ಟು ಚುರುಕಾಗಿ ಗಡಿ ಕಾಯುತ್ತವೆ, ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಗಮನಿಸಿ, ಇನ್ನಷ್ಟು ಭಾರತದ ತಳಿಯ ನಾಯಿಗಳಿಗೆ ತರಬೇತಿ ನೀಡುತ್ತೇವೆ. ನಾಯಿಗಳಿಗೆ ಸಂಪೂರ್ಣ ತರಬೇತಿ ಸಿಗಲು ಒಂದು ವರ್ಷ ಬೇಕು ಎಂದು ಮೇಘಾಲಯದ ಬಿಎಸ್​ಎಫ್​ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಕೇವಲ ಗಡಿ ಭದ್ರತಾ ಪಡೆಯಷ್ಟೇ ಅಲ್ಲದೇ, ಭಾರತೀಯ ಸೇನೆಯೂ ಭಾರತೀಯ ತಳಿಯ ಶ್ವಾನಗಳಿಗೆ ಹೆಚ್ಚಿನ ತರಬೇತಿ ನೀಡಿ, ಸೇನೆಗೆ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಿದೆ.

ಆಗಲೇ ಪ್ರಧಾನಿ ಹುದ್ದೆ, ಕೇಂದ್ರದ ಅಧಿಕಾರ ತಿರಸ್ಕರಿಸಿದ್ದೇವೆ ಯಕಃಶ್ಚಿತ್‌ ಮಂತ್ರಿ ಸ್ಥಾನಕ್ಕೆ ಆಸೆ ಪಡುವ ವ್ಯಕ್ತಿ ನಾನಲ್ಲ: HDK

Published On - 5:40 pm, Sun, 3 January 21