ಟಾಯ್ಲೆಟ್​ ಮೇಲೆ ವಾಷಿಂಗ್​ ಮೆಷಿನ್ ಇಟ್ಟಿರುವ ಇಕ್ಕಟ್ಟಿನ ಫ್ಲ್ಯಾಟ್​ಗೆ ಬಾಡಿಗೆ ಎಷ್ಟು ಗೊತ್ತೇ?

|

Updated on: Sep 26, 2024 | 11:27 AM

ಮುಂಬೈ ಒಂದು ಕನಸಿನ ನಗರಿ ಎಂದೇ ಹೇಳಬಹುದು, ಭವಿಷ್ಯವನ್ನು ಕಟ್ಟಿಕೊಳ್ಳುವ ಭರವಸೆಯೊಂದಿಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಆದರೆ ದುರಾದೃಷ್ಟವಶಾತ್ ಹೆಚ್ಚುತ್ತಿರುವ ಬಾಡಿಗೆಯಿಂದಾಗಿ ಜನರಿಗೆ ಇದು ಆರ್ಥಿಕ ಸವಾಲಾಗಿದೆ. ಉನ್ನತ ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ಮುಂಬೈಗೆ ತೆರಳುವ ಜನರು ಗಗನಚುಂಬಿ ಕಟ್ಟಡಗಳ ನಗರದಲ್ಲಿ ಗಗನಕ್ಕೇರುತ್ತಿರುವ ಬಾಡಿಗೆ ಕೊಟ್ಟು ಉಳಿಯಲೇಬೇಕು.

ಟಾಯ್ಲೆಟ್​ ಮೇಲೆ ವಾಷಿಂಗ್​ ಮೆಷಿನ್ ಇಟ್ಟಿರುವ ಇಕ್ಕಟ್ಟಿನ ಫ್ಲ್ಯಾಟ್​ಗೆ ಬಾಡಿಗೆ ಎಷ್ಟು ಗೊತ್ತೇ?
ಟಾಯ್ಲೆಟ್
Follow us on

ಮುಂಬೈ ಒಂದು ಕನಸಿನ ನಗರಿ ಎಂದೇ ಹೇಳಬಹುದು, ಭವಿಷ್ಯವನ್ನು ಕಟ್ಟಿಕೊಳ್ಳುವ ಭರವಸೆಯೊಂದಿಗೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಆದರೆ ದುರಾದೃಷ್ಟವಶಾತ್ ಹೆಚ್ಚುತ್ತಿರುವ ಬಾಡಿಗೆಯಿಂದಾಗಿ ಜನರಿಗೆ ಇದು ಆರ್ಥಿಕ ಸವಾಲಾಗಿದೆ.
ಉನ್ನತ ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ಮುಂಬೈಗೆ ತೆರಳುವ ಜನರು ಗಗನಚುಂಬಿ ಕಟ್ಟಡಗಳ ನಗರದಲ್ಲಿ ಗಗನಕ್ಕೇರುತ್ತಿರುವ ಬಾಡಿಗೆ ಕೊಟ್ಟು ಉಳಿಯಲೇಬೇಕು.

ಅಲ್ಲಿನ ಬಾಡಿಗೆದಾರರು ಇಂಚಿಂಚು ಜಾಗವನ್ನೂ ಬಿಡದೆ ಬಳಕೆ ಮಾಡುತ್ತಾರೆ. ಮುಂಬೈನ ಪಾಲಿ ಹಿಲ್​ನಲ್ಲಿರುವ ಅಪಾರ್ಟ್​ಮೆಂಟ್​ನ 2ಬಿಎಚ್​ಕೆ ಫ್ಲ್ಯಾಟ್​ ಬಗ್ಗೆ ಎಕ್ಸ್​ನಲ್ಲಿ ಒಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಉತ್ಕರ್ಷ್​ ಗುಪ್ತಾ ಎಂಬುವವರು ಅಪಾರ್ಟ್​ಮೆಂಟ್​ನ ಬಾತ್​ರೂಂನ ಫೋಟೊವನ್ನು ಹಂಚಿಕೊಂಡಿದ್ದು, ಟಾಯ್ಲೆಟ್​ ಮೇಲಿನ ಜಾಗವನ್ನೂ ಬಿಡದೆ ವಾಷಿಂಗ್ ಮೆಷಿನ್ ಇಟ್ಟಿರುವ ಕುರಿತು ಮಾತನಾಡಿದ್ದಾರೆ.

ಆದರೆ ಇಷ್ಟು ಇಕ್ಕಟ್ಟಿರುವ ಅಪಾರ್ಟ್​ಮೆಂಟ್​ನ ಮನೆಗೆ ತಿಂಗಳಿಗೆ 1.35 ಲಕ್ಷ ರೂ. ಬಾಡಿಗೆ, 4 ಲಕ್ಷ ರೂ. ಸೆಕ್ಯೂರಿಟಿ ಡೆಪಾಸಿಟ್ ಮಾಡಬೇಕು, 1.4 ಲಕ್ಷ ರೂ. ದಲ್ಲಾಳಿಗಳಿಗೆ ನೀಡಬೇಕು.

ಕಮೋಡ್ ಹಾಗೂ ವಾಷಿಂಗ್​ ಮೆಷಿನ್​ನನ್ನು ಒಂದೇ ಸಮಯದಲ್ಲಿ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಈ ಅಪಾರ್ಟ್​ಮೆಂಟ್​ನಲ್ಲಿ ಎರಡು ಮಲಗುವ ಕೋಣೆಗಳು, ಎರಡು ಬಾತ್​ರೂಂಗಳಿದ್ದು, ಬಾಲ್ಕನಿಗಳಿಲ್ಲ, ಇದು ಸಂಪೂರ್ಣವಾಗಿ ಸುಸಜ್ಜಿತವಾಗಿದೆ ಹಾಗೂ ಬಾಡಿಗೆಯೂ ಸರಿ ಇದೆ ಎಂದು ಹೌಸಿಂಗ್ ಡಾಟ್​ಕಾಮ್ ಹೇಳಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ