ಮುಂಬೈ ಲೋಕಲ್ ರೈಲೊಂದು ಥಾಣೆಯ ಮುಂಬ್ರಾ ನಿಲ್ದಾಣದಲ್ಲಿ ಟ್ರ್ಯಾಕ್ ಬಿಟ್ಟು ಪ್ಲಾಟ್ಫಾರಂಗೆ ಡಿಕ್ಕಿ ಹೊಡೆದಿದೆ. ಮುಂಬ್ರಾ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ನ ಅಂಚಿಗೆ ಬಡಿದ ಪರಿಣಾಮ ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ (ಸಿಎಸ್‌ಎಂಟಿ) ಪ್ರಯಾಣ ಆರಂಭಿಸಿದ ರೈಲು ಮುಂಬ್ರಾ ನಿಲ್ದಾಣಕ್ಕೆ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ. ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ.
ಪಿಟಿಐ ಜೊತೆ ಮಾತನಾಡಿದ ಸೆಂಟ್ರಲ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಶಿವರಾಜ್ ಮನಸ್ಪುರೆ, ರಾತ್ರಿ 9.20 ರ ಸುಮಾರಿಗೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ಕ್ಕೆ ರೈಲು ನಿಧಾನವಾಗಿ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಮತ್ತಷ್ಟು ಓದಿ: Odisha Train Accident: ಒಡಿಶಾ ರೈಲು ದುರಂತದಲ್ಲಿ ಬೆಂಗಳೂರಿನ ಹೊಟೇಲ್ ಕಾರ್ಮಿಕ ಸಾವು
ಪ್ಲಾಟ್ಫಾರಂಗೆ ರೈಲು ತಗುಲುತ್ತಿದ್ದಂತೆಯೇ ರೈಲನ್ನು ನಿಲ್ಲಿಸಲಾಗಿತ್ತು. ರೈಲು ಹಳಿತಪ್ಪಿಲ್ಲ ಎಂದು ಕೇಂದ್ರ ರೈಲ್ವೆ ಸ್ಪಷ್ಟಪಡಿಸಿದೆ. ಹಲವು ರೈಲುಗಳ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು ಹೀಗಾಗಿ ಪ್ಲಾಟ್ಫಾರಂನಲ್ಲಿ ಜನಸಂದಣಿ ಹೆಚ್ಚಾಗಿತ್ತು.
Trains stuck for more than an hour at Mumbra. No movement towards kalyan. Everyone jumping off trains and on feet. @mumbaimatterz @Central_Railway pic.twitter.com/vIoq56ZXEY
— Engineer Mantas (@mantaseltauro) July 5, 2023
ಇತ್ತೀಚೆಗಷ್ಟೇ ಒಡಿಶಾದ ಬಾಲಸೋರ್ನಲ್ಲಿ ತ್ರಿವಳಿ ರೈಲು ಅಪಘಾತ ಸಂಭವಿಸಿತ್ತು, ನೂರಾರು ಮಂದಿ ಇದರಲ್ಲಿ ಪ್ರಾಣ ಕಳೆದುಕೊಂಡಿದ್ದರು. ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ