
ಮುಂಬೈ, ಆಗಸ್ಟ್ 27: ಮುಂಬೈನ (Mumbai) ಎತ್ತರದ ಕಟ್ಟಡವೊಂದರ 10ನೇ ಮಹಡಿಯಿಂದ ಕೆಳಗೆ ಜಿಗಿದ ಮಹಿಳೆಯೊಬ್ಬರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಕೆಳಗೆ ಬೀಳುವಾಗ ದಟ್ಟವಾದ ಮರದ ಕೊಂಬೆಗಳ ಮೇಲೆ ಬಿದ್ದಿದ್ದರಿಂದ ಅವರ ಜೀವ ಉಳಿದಿದೆ. ನಂತರ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಇದರಿಂದಾಗಿ ನೇರವಾಗಿ ನೆಲಕ್ಕೆ ಬೀಳುವುದು ತಪ್ಪಿ, ಭಾರಿ ಅನಾಹುತವೊಂದು ತಪ್ಪಿದೆ.
ಆ ಮಹಿಳೆ ಮರದ ಕೊಂಬೆಯಲ್ಲಿ ಸಿಲುಕಿಕೊಂಡಿರುವುದನ್ನು ಕಂಡ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಅಗ್ನಿಶಾಮಕ ಸಿಬ್ಬಂದಿ ಹುಕ್ ಏಣಿಯನ್ನು ಬಳಸಿ ಆಕೆಯನ್ನು ಮರದಿಂದ ಸುರಕ್ಷಿತವಾಗಿ ಕೆಳಗಿಳಿಸಿದರು. ನಂತರ ಅವರನ್ನು ಆ್ಯಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಎಡಕಾಲಿಗೆ ಗಾಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಾಗಿ ಅವರನ್ನು ಸಿಯಾನ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಫರೀದಾಬಾದ್‌ನಲ್ಲಿ ಭೀಕರ ಕೃತ್ಯ; ಪತಿಯ ಕೊಲೆ ಮಾಡಿ ಮನೆ ಬಳಿ ಹೂತುಹಾಕಿದ ಹೆಂಡತಿ-ಪ್ರಿಯಕರ!
ಈ ಘಟನೆಯ ಕುರಿತು ವರದಿ ಮಾಡಿರುವ ‘ಇಂಡಿಯಾ ಟುಡೇ’, ಈ ಘಟನೆ ಭಾಂಡೂಪ್ ವೆಸ್ಟ್‌ನ ತುಳಶೇಟ್‌ಪಡಾದಲ್ಲಿರುವ ಸನ್‌ಶೈನ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿ ನಡೆದಿದೆ ಎಂದು ತಿಳಿಸಿದೆ. ರಕ್ಷಿಸಿದ ತಕ್ಷಣವೇ ಮಹಿಳೆಯನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
Bhandup: A woman fell from the 10th floor of the Sunshine SRA building but survived after getting caught in the branches of a large tree below. Fire brigade personnel rescued her safely. Police are probing how she fell and her current condition. #MumbaiUpdates pic.twitter.com/b7KBoqrF4b
— Visshal Singh (@VishooSingh) August 26, 2026
ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ದೋಖಾ: ಕೇರಳದಲ್ಲಿ ಸಿಕ್ಕಿಬಿದ್ರು ತಾಯಿ, ಮಗ!
ಆ ಮಹಿಳೆಗೆ ಸುಮಾರು 4 ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಆ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿರುವುದರಿಂದ ಪೊಲೀಸರಿಗೆ ಇದುವರೆಗೆ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಘಟನೆಯ ಕುರಿತು ಮಹಿಳೆಯ ಪೋಷಕರಿಗೂ ಮಾಹಿತಿ ನೀಡಲಾಗಿದೆ. ಆ ಮಹಿಳೆ 10ನೇ ಮಹಡಿಯಿಂದ ಜಿಗಿಯಲು ನಿಜವಾದ ಕಾರಣವೇನು? ಎಂಬುದರ ಕುರಿತು ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ