AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಗಿಂತ 18 ಪಟ್ಟು ದೊಡ್ಡದು: ಗಡಿಯಲ್ಲಿ 25,000 ಕಿ.ಮೀ ಉದ್ದದ ಮೆಗಾ ರಿಂಗ್ ರೋಡ್ ನಿರ್ಮಿಸುತ್ತಿದೆ ಚೀನಾ

ಚೀನಾ ಭಾರತದ ಗಡಿಗೆ ಸಮೀಪವಾಗಿ 25,000 ಕಿ.ಮೀ ಉದ್ದದ ಬೃಹತ್ ಹೆದ್ದಾರಿ ನಿರ್ಮಿಸುತ್ತಿದೆ. 'ಗೋಲ್ಡನ್ ಬಾರ್ಡರ್-ಕೋಸ್ಟ್ ಲೂಪ್' ಹೆಸರಿನ ಈ ಯೋಜನೆ (G219) ಸೇನಾ ನಿಯೋಜನೆಗೆ ಅನುಕೂಲವಾಗಿದ್ದು, ಭಾರತಕ್ಕೆ ಭದ್ರತಾ ಸವಾಲೊಡ್ಡಿದೆ. ಇದಕ್ಕೆ ಪ್ರತಿಯಾಗಿ, ಭಾರತವು LAC ಉದ್ದಕ್ಕೂ ರಸ್ತೆ ನಿರ್ಮಾಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಯನ್ನು ವೇಗಗೊಳಿಸಿದೆ. ಟಿಬೆಟ್‌ನ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿರ್ಮಾಣವು ಭವಿಷ್ಯದಲ್ಲಿ ಅಪಾಯವನ್ನು ಹೆಚ್ಚಿಸಿದೆ.

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಗಿಂತ 18 ಪಟ್ಟು ದೊಡ್ಡದು: ಗಡಿಯಲ್ಲಿ 25,000 ಕಿ.ಮೀ ಉದ್ದದ ಮೆಗಾ ರಿಂಗ್ ರೋಡ್ ನಿರ್ಮಿಸುತ್ತಿದೆ ಚೀನಾ
ರಸ್ತೆ
ನಯನಾ ರಾಜೀವ್
|

Updated on: Aug 23, 2026 | 9:08 AM

Share

ಬೀಜಿಂಗ್, ಆಗಸ್ಟ್​ 23: ಚೀನಾ(China) ತನ್ನ ಸಂಪೂರ್ಣ ಭೂ ಗಡಿಗಳು ಮತ್ತು ಕರಾವಳಿ ತೀರಗಳನ್ನು ಬೆಸೆಯುವ 25,000 ಕಿಲೋಮೀಟರ್‌ಗೂ ಅಧಿಕ ಉದ್ದದ ‘ಗೋಲ್ಡನ್ ಬಾರ್ಡರ್-ಕೋಸ್ಟ್ ಲೂಪ್’ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದು ಭಾರತದ ಅತಿ ಉದ್ದದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಗಿಂತ (1,386 ಕಿ.ಮೀ) ಸರಿಸುಮಾರು 18 ಪಟ್ಟು ಉದ್ದವಾಗಿದ್ದು, 2030 ರ ವೇಳೆಗೆ ಪೂರ್ಣಗೊಳಿಸಲು ಚೀನಾ ಗುರಿ ಹೊಂದಿದೆ.

ಗುವಾಂಗ್ಕ್ಸಿಯಿಂದ ಆರಂಭವಾಗಿ ಟಿಬೆಟ್ ಮತ್ತು ಕ್ಸಿನ್‌ಜಿಯಾಂಗ್ ಮೂಲಕ ಸಾಗುತ್ತದೆ. ಇದು ಭಾರತ, ಭೂತಾನ್, ನೇಪಾಳ, ಪಾಕಿಸ್ತಾನ, ವಿಯೆಟ್ನಾಂ ಸೇರಿದಂತೆ ಹಲವು ದೇಶಗಳ ಗಡಿಯ ಅತ್ಯಂತ ಸಮೀಪದಲ್ಲಿದೆ. ಬಳಿಕ ಕ್ಸಿನ್‌ಜಿಯಾಂಗ್‌ನಿಂದ ಉತ್ತರ ಚೀನಾದ ಮಂಗೋಲಿಯಾ, ರಷ್ಯಾ ಮತ್ತು ಉತ್ತರ ಕೊರಿಯಾ ಗಡಿ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಲಿಯಾನಿಂಗ್‌ನಿಂದ ಶಾಂಘೈ ಮಾರ್ಗವಾಗಿ ಗುವಾಂಗ್ಕ್ಸಿವರೆಗೆ ಚೀನಾದ ಸಂಪೂರ್ಣ ಪೂರ್ವ-ದಕ್ಷಿಣ ಸಮುದ್ರ ತೀರವನ್ನು ಬೆಸೆಯುತ್ತದೆ.

ಭಾರತದ ಮೇಲಾಗುವ ಪರಿಣಾಮ ಮತ್ತು ಭದ್ರತಾ ಸವಾಲುಗಳು ಸೇನಾ ನಿಯೋಜನೆಗೆ ಅನುಕೂಲ: G219 ಹೆದ್ದಾರಿಯು ಲಡಾಖ್ (ಅಕ್ಸಾಯ್ ಚಿನ್) ಮತ್ತು ಅರುಣಾಚಲ ಪ್ರದೇಶದ ಗಡಿಗಳಿಗೆ ತೀರಾ ಹತ್ತಿರದಲ್ಲಿದ್ದು, ಯುದ್ಧದ ಸಂದರ್ಭದಲ್ಲಿ ಚೀನಾ ಸೇನೆಗೆ (PLA) ಶಸ್ತ್ರಾಸ್ತ್ರ ಮತ್ತು ಸೈನ್ಯವನ್ನು ತ್ವರಿತವಾಗಿ ಸಾಗಿಸಲು ಸಹಕಾರಿಯಾಗಲಿದೆ.

ಮತ್ತಷ್ಟು ಓದಿ: ಚೀನಾದ ಉತ್ಪನ್ನಗಳು ಇಷ್ಟು ಕಡಿಮೆ ಬೆಲೆಗೆ ಸಿಗುವುದು ಹೇಗೆ? ಚೀನೀ ಸಿಇಒವೊಬ್ಬರು ಬಿಚ್ಚಿಟ್ಟ ವಾಸ್ತವ ಇದು

ಭಾರತದ ವಿರೋಧ: ವಿವಾದಿತ ಗಡಿ ಪ್ರದೇಶಗಳಲ್ಲಿ ಚೀನಾ ನಡೆಸುತ್ತಿರುವ ರಸ್ತೆ ವಿಸ್ತರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ಭಾರತ ತೀವ್ರವಾಗಿ ವಿರೋಧಿಸುತ್ತಾ ಬಂದಿದೆ.

ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ (VVP): ಚೀನಾದ ಈ ಗಡಿ ರಸ್ತೆ ಜಾಲಕ್ಕೆ ಪ್ರತಿಯಾಗಿ ಭಾರತವು ವಾಸ್ತವ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಗಡಿ ರಸ್ತೆಗಳ ಸಂಸ್ಥೆ (BRO) ಮೂಲಕ ಮುಂಚೂಣಿ ರಸ್ತೆಗಳು, ಸುರಂಗ ಮಾರ್ಗಗಳು ಮತ್ತು ಹೆಲಿಪ್ಯಾಡ್‌ಗಳ ನಿರ್ಮಾಣವನ್ನು ವೇಗಗೊಳಿಸಿದೆ.

ಪರಿಸರ ಹಾಗೂ ಭೌಗೋಳಿಕ ಸೂಕ್ಷ್ಮತೆ: ಟಿಬೆಟ್ ಮತ್ತು ಹಿಮಾಲಯದ ಕಡಿದಾದ, ಭೂಕಂಪದ ಸಂಭವನೀಯ ಪರಿಸರ ಸೂಕ್ಷ್ಮ ವಲಯಗಳಲ್ಲಿ ಈ ಬೃಹತ್ ಹೆದ್ದಾರಿ ನಿರ್ಮಾಣವಾಗುತ್ತಿರುವುದು ಭವಿಷ್ಯದಲ್ಲಿ ನೈಸರ್ಗಿಕ ವಿಕೋಪಗಳ ಅಪಾಯವನ್ನೂ ಹೆಚ್ಚಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us