ಹಿಜಾಬ್ ಬಳಿಕ ಇದೀಗ ಜೀನ್ಸ್​ ಪ್ಯಾಂಟ್​, ಟಿ- ಶರ್ಟ್​ ನಿಷೇಧಿಸಿದ ಕಾಲೇಜು

|

Updated on: Jul 02, 2024 | 12:26 PM

ಈ ಮೊದಲು ಹಿಜಾಬ್​ ನಿಷೇಧಿಸಿದ್ದ ಚೆಂಬೂರಿನ ಆಚಾರ್ಯ ಮತ್ತು ಮರಾಠೆ ಕಾಲೇಜು ಈಗ ಟಿ-ಶರ್ಟ್​ ಹಾಗೂ ಜೀನ್ಸ್​ ತೊಡುವುದನ್ನು ನಿಷೇಧಿಸಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಕಳೆದ ವರ್ಷ ವಸ್ತ್ರಸಂಹಿತೆ ಜಾರಿಗೊಳಿಸಿದ್ದ ಈ ಕಾಲೇಜು ವಿದ್ಯಾರ್ಥಿಗಳು ಹಿಜಾಬ್ ಮತ್ತಿತರ ಧಾರ್ಮಿಕ ಗುರುತುಗಳ ವಸ್ತ್ರತೊಟ್ಟು ಕಾಲೇಜಿಗೆ ಪ್ರವೇಶಿಸಬಾರದು ಎಂದು ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿತ್ತು.

ಹಿಜಾಬ್ ಬಳಿಕ ಇದೀಗ ಜೀನ್ಸ್​ ಪ್ಯಾಂಟ್​, ಟಿ- ಶರ್ಟ್​ ನಿಷೇಧಿಸಿದ ಕಾಲೇಜು
ಕಾಲೇಜು
Follow us on

ಹಿಜಾಬ್(Hijab) ನಿಷೇಧದ ನಂತರ ಮುಂಬೈನ ಈ ಕಾಳೇಜಿನಲ್ಲಿ ಜೀನ್ಸ್ ಮತ್ತು ಟೀ ಶರ್ಟ್‌ಗಳನ್ನು ಧರಿಸುವುದನ್ನು ಕೂಡ ನಿಷೇಧಿಸಲಾಗಿದೆ. ಸೋಮವಾರ ಚೆಂಬೂರಿನ ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನ ಗೇಟ್‌ನಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ಧರಿಸಿದ್ದ ವಿದ್ಯಾರ್ಥಿಗಳನ್ನು ತಡೆದಿದ್ದರು. ಕಾಲೇಜು ಹೊಸ ವಸ್ತ್ರಸಂಹಿತೆಯನ್ನು ಬಿಡುಗಡೆ ಮಾಡಿದೆ. ಕೆಲ ದಿನಗಳ ಹಿಂದೆಯಷ್ಟೇ ಕಾಲೇಜಿನಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು.

ಜೂನ್ 27 ರಂದು ಆಚಾರ್ಯ ಮತ್ತು ಮರಾಠೆ ಕಾಲೇಜು ಹೊರಡಿಸಿದ ನೋಟಿಸ್ ಪ್ರಕಾರ, ಹರಿದ ಜೀನ್ಸ್, ಟಿ-ಶರ್ಟ್, ತೆರೆದ ಬಟ್ಟೆ ಮತ್ತು ಜೆರ್ಸಿಗಳಿಗೆ ಅನುಮತಿ ಇಲ್ಲ ಎಂದು ಹೇಳಿದೆ. ಕಾಲೇಜು ಪ್ರಾಂಶುಪಾಲರಾದ ಡಾ.ವಿದ್ಯಾಗೌರಿ ಲೇಲೆ ಅವರು ನೋಟಿಸ್ ಜಾರಿ ಮಾಡಿದ್ದಾರೆ.

ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಔಪಚಾರಿಕ ಮತ್ತು ಯೋಗ್ಯವಾದ ಉಡುಪನ್ನು ಧರಿಸಬೇಕು. ಅವರು ಅರ್ಧ-ಶರ್ಟ್ ಅಥವಾ ಪೂರ್ಣ-ಶರ್ಟ್ ಮತ್ತು ಪ್ಯಾಂಟ್ ಧರಿಸಬಹುದು. ಹುಡುಗಿಯರು ಭಾರತೀಯ ಅಥವಾ ಪಾಶ್ಚಿಮಾತ್ಯ ಉಡುಗೆಯನ್ನು ಧರಿಸಬಹುದು. ವಿದ್ಯಾರ್ಥಿಗಳು ಧರ್ಮ ಅಥವಾ ಸಾಂಸ್ಕೃತಿಕ ಅಸಮಾನತೆಯನ್ನು ಪ್ರತಿಬಿಂಬಿಸುವ ಯಾವುದೇ ಉಡುಪನ್ನು ಧರಿಸಬಾರದು.

ಮತ್ತಷ್ಟು ಓದಿ: Hijab Ban: ಮುಸ್ಲಿಂ ರಾಷ್ಟ್ರವಾದ ತಜಿಕಿಸ್ತಾನದಲ್ಲಿ ಹಿಜಾಬ್ ಬ್ಯಾನ್​

ನಿಖಾಬ್, ಹಿಜಾಬ್, ಬುರ್ಖಾ, ಸ್ಟೋಲ್, ಕ್ಯಾಪ್, ಬ್ಯಾಡ್ಜ್ ಇತ್ಯಾದಿಗಳನ್ನು ಕೊಠಡಿಯಲ್ಲಿಯೇ ಇರಿಸಿಕೊಳ್ಳಬೇಕು ಆಗ ಅವರು ಇಡೀ ಕಾಲೇಜು ಆವರಣದಲ್ಲಿ ಓಡಾಡಬಹುದಾಗಿದೆ. ಕಳೆದ ವರ್ಷ ಹಿಜಾಬ್​ಗೆ ನಿಷೇಧ ಹೇರಲಾಗಿತ್ತು, ಇದೀಗ ಟಿ-ಶರ್ಟ್​ ಹಾಗೂ ಜೀನ್ಸ್​ಗೆ ನಿಷೇಧ ಹೇರಲಾಗಿದೆ.

ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿರುವಾಗ ಔಪಚಾರಿಕ ಮತ್ತು ಯೋಗ್ಯವಾದ ಉಡುಗೆಯನ್ನು ಧರಿಸಬೇಕು. ಕಾಲೇಜಿನ ಪ್ರಕಾರ, ಕಾರ್ಪೊರೇಟ್ ಜಗತ್ತಿಗೆ ಸಿದ್ಧವಾಗಲು ಆಡಳಿತವು ಅವರನ್ನು ಸಿದ್ಧಪಡಿಸುತ್ತಿದೆ. ದಾಖಲಾತಿ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಡ್ರೆಸ್​ಕೋಡ್​ ಬಗ್ಗೆ ತಿಳಿಸಲಾಗಿತ್ತು. ಈ ಹಿಂದೆ ಹಿಜಾಬ್ ನಿಷೇಧದ ವಿರುದ್ಧ 9 ವಿದ್ಯಾರ್ಥಿಗಳು ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ