Defamation case ಮಾಜಿ ಸಚಿವೆ ಮನೇಕಾ ಗಾಂಧಿಗೆ ಮೈಸೂರು ಕೋರ್ಟ್​ನಿಂದ ನೋಟಿಸ್

Mysuru Court Notice to Maneka Gandhi | ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿಗೆ ಮೈಸೂರಿನ 1ನೇ ಜಿಲ್ಲಾ & ಸೆಷನ್ಸ್​ ಕೋರ್ಟ್​ ಮಾರ್ಚ್ 1ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.

Defamation case ಮಾಜಿ ಸಚಿವೆ ಮನೇಕಾ ಗಾಂಧಿಗೆ ಮೈಸೂರು ಕೋರ್ಟ್​ನಿಂದ ನೋಟಿಸ್
ಮಾಜಿ ಸಚಿವೆ ಮನೇಕಾ ಗಾಂಧಿ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Feb 09, 2021 | 3:32 PM

ಮೈಸೂರು: ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿಗೆ ಕೋರ್ಟ್​ನಿಂದ ನೋಟಿಸ್ ಜಾರಿಯಾಗಿದೆ. ಮೈಸೂರಿನ 1ನೇ ಜಿಲ್ಲಾ & ಸೆಷನ್ಸ್​ ಕೋರ್ಟ್​ ಮನೇಕಾ ಅವರನ್ನು ಮಾರ್ಚ್ 1ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ನಲ್ಲಿ ತಿಳಿಸಿದೆ. ಕರ್ನಾಟಕ & ಕೇರಳ ರಾಜ್ಯ ಉಸ್ತುವಾರಿ ಆಗಿದ್ದ, ಅನಿಮಲ್ ವೆಲ್​ಫೇರ್​ ಬೋರ್ಡ್ ಆಫ್​ ಇಂಡಿಯಾ ಸದಸ್ಯ ಮೈಸೂರು ನಿವಾಸಿ ಡಾ.ಎಸ್.ಕೆ.ಮಿತ್ತಲ್​ರಿಂದ ಕೇಸ್​ ದಾಖಲಾಗಿತ್ತು. ಈ ಸಂಬಂಧ ಮಾರ್ಚ್ 1ರಂದು ವಿಚಾರಣೆಗೆ ಹಾಜರಾಗುವಂತೆ ಮೈಸೂರು ಕೋರ್ಟ್ ನೋಟಿಸ್ ನೀಡಿದೆ.

ಪ್ರಕರಣ ಏನು?
ಕಸಾಯಿಖಾನೆಗೆ ಭೇಟಿ ಸೇರಿದಂತೆ ಸಾಕಷ್ಟು ಕಾರ್ಯಗಳಲ್ಲಿ ಡಾ.ಎಸ್.ಕೆ.ಮಿತ್ತಲ್ ಸಮರ್ಪಕವಾಗಿ ಕೆಲಸಮಾಡಿಲ್ಲವೆಂದು ಮಿತ್ತಲ್​ ವಿರುದ್ಧ ಮನೇಕಾ ಗಾಂಧಿ ಆರೋಪಿಸಿದ್ದರು. ಈ ಸಂಬಂಧ ಅಂದಿನ ಕೇಂದ್ರ ಪರಿಸರ ಸಚಿವರಾಗಿದ್ದ ಡಾ.ಹರ್ಷವರ್ಧನ್​ಗೆ ಮಂಡಳಿ ಸದಸ್ಯರ ವಿರುದ್ಧ ಆರೋಪ ಮಾಡಿ ಪತ್ರ ಬರೆದಿದ್ದರು. ಈ ಆರೋಪಗಳಿಗೆ ಸಂಬಂಧಿಸಿದಂತೆ ಮನೇಕಾಗೆ ಪತ್ರ ಬರೆದು ಮಿತ್ತಲ್​ ಸ್ಪಷ್ಟನೆ ನೀಡಿದ್ದರು. ಆದ್ರೂ ಮನೇಕಾ, ಮಿತ್ತಲ್ ವಿರುದ್ಧ ಆರೋಪ ಮಾಡುವುದನ್ನು ಮುಂದುವರಿಸಿದ್ದರು.

ಇದರಿಂದ ಬೇಸರಗೊಂಡು ಮಿತ್ತಲ್ ಮೈಸೂರಿನ JMFC ಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಡಾ.ಎಸ್.ಕೆ.ಮಿತ್ತಲ್​ರ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು. ನಂತರ ಮಿತ್ತಲ್ 1ನೇ ಜಿಲ್ಲಾ & ಸೆಷನ್ಸ್​ ಕೋರ್ಟ್​ ಮೊರೆ ಹೋಗಿದ್ದರು. ಮೇಲ್ಮನವಿ ವಿಚಾರಣೆಗೆ ಸ್ವೀಕರಿಸಿ ಮನೇಕಾ ಗಾಂಧಿಗೆ ನೋಟಿಸ್ ಜಾರಿ ಮಾಡಲಾಗಿದೆ. ಟಿವಿ9ಗೆ ಡಾ.ಮಿತ್ತಲ್​ ಪರ ವಕೀಲ ಹೆಚ್.ಬಿ.ಪ್ರಭು ಮಾಹಿತಿ ನೀಡಿದ್ದಾರೆ.

ರಾಜೀವ್ ಗಾಂಧಿ ಆರೋಗ್ಯ ವಿವಿಯ 23ನೇ ಘಟಿಕೋತ್ಸವ | ವೈದ್ಯಕೀಯ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಸಾಧನೆ ಅಪಾರ: ರಾಮನಾಥ​ ಕೋವಿಂದ್

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us