ಎನ್ ಬಿರೇನ್ ಸಿಂಗ್ (N Biren Singh )ಎರಡನೇ ಬಾರಿಗೆ ಮಣಿಪುರ (Manipur) ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಫಲಿತಾಂಶಗಳು ಬಂದ ಹತ್ತು ದಿನಗಳ ನಂತರ, ಬಿಜೆಪಿ (BJP) ಭಾನುವಾರ ಇಬ್ಬರು ಸ್ಪರ್ಧಿಗಳ ನಡುವೆ ಸಿಂಗ್ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಿತು. ಬಿಸ್ವಜಿತ್ ಸಿಂಗ್ ಮತ್ತು ಯುಮ್ನಮ್ ಖೇಮ್ಚಂದ್ ಇವರಿಬ್ಬರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಎಂದು ಹೇಳಲಾಗಿತ್ತು. ಈ ಮೂವರೂ ನಿನ್ನೆ ದೆಹಲಿಯಲ್ಲಿ ಬಿಜೆಪಿಯ ಕೇಂದ್ರ ನಾಯಕತ್ವವನ್ನು ಭೇಟಿ ಮಾಡಿದ್ದು, ಮಣಿಪುರದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದರ ಬಗ್ಗೆ ಪಕ್ಷವು ಚರ್ಚಿಸಿದೆ. ಈ ಮೂವರೂ ನಿನ್ನೆ ದೆಹಲಿಯಲ್ಲಿ ಬಿಜೆಪಿಯ ಕೇಂದ್ರ ನಾಯಕತ್ವವನ್ನು ಭೇಟಿ ಮಾಡಿದ್ದು, ಮಣಿಪುರದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದರ ಬಗ್ಗೆ ಪಕ್ಷವು ಚರ್ಚಿಸಿದೆ. ಮಣಿಪುರದ ಬಿಜೆಪಿಯ ಕೇಂದ್ರ ವೀಕ್ಷಕರಾಗಿರುವ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಕಿರಣ್ ರಿಜಿಜು ಮುಖ್ಯಮಂತ್ರಿಯ ಘೋಷಣೆ ಮಾಡಲು ರಾಜ್ಯ ರಾಜಧಾನಿ ಇಂಫಾಲ್‌ಗೆ ಇವತ್ತು ಬೆಳಗ್ಗೆ ಬಂದಿದ್ದಾರೆ. ಮಾಜಿ ಫುಟ್ಬಾಲ್ ಆಟಗಾರ ಮತ್ತು ಪತ್ರಕರ್ತ, 61ರ ಹರೆಯದ ಸಿಂಗ್ ಮಣಿಪುರದಲ್ಲಿ ಬಿಜೆಪಿ ಪ್ರಚಾರವನ್ನು ಮುನ್ನಡೆಸಿದ್ದರು. ಆದರೆ ಬಿಜೆಪಿಯು ಮುಖ್ಯಮಂತ್ರಿಯ ಅಭ್ಯರ್ಥಿ ಎಂಬುದನ್ನು ಔಪಚಾರಿಕವಾಗಿ ಘೋಷಿಸಿರಲಿಲ್ಲ. ಮುಖ್ಯಮಂತ್ರಿಯ ರೇಸ್‌ನಲ್ಲಿದ್ದ ಬಿಸ್ವಜಿತ್ ಸಿಂಗ್, ಬಿರೇನ್ ಸಿಂಗ್ ಅವರಿಗಿಂತ ಹೆಚ್ಚು ಕಾಲ ಬಿಜೆಪಿಯಲ್ಲಿದ್ದವರು. 60 ರಲ್ಲಿ 32 ಸ್ಥಾನಗಳ ಅಲ್ಪ ಅಂತರದಿಂದ ರಾಜ್ಯವನ್ನು ಗೆದ್ದ ಬಿಜೆಪಿಗೆ, ಪ್ರತಿಸ್ಪರ್ಧಿಗಳು ಪರಿಸ್ಥಿತಿಯನ್ನು ಬಳಸಿಕೊಳ್ಳಬಹುದೆಂದು ಶಂಕಿಸಿದ್ದರಿಂದ ಈ ವಿಷಯವನ್ನು ಚತುರವಾಗಿ ನಿಭಾಯಿಸುವ ಅಗತ್ಯವಿದೆ.
Manipur’s acting CM N Biren Singh unanimously elected as the Chief Minister of the State in the Manipur BJP legislature party meeting, in Imphal today. pic.twitter.com/KU57xu5nW6
— ANI (@ANI) March 20, 2022
ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಬೆಂಬಲಿತ ಮೂರನೇ ಸ್ಪರ್ಧಿ ಯುಮ್ನಮ್ ಖೇಮ್‌ಚಂದ್ ಸಿಂಗ್. ಆರ್‌ಎಸ್‌ಎಸ್ ಬೆಂಬಲಿತ ನಾಯಕ, ಹಿಂದಿನ ಅಸೆಂಬ್ಲಿಯಲ್ಲಿ ಸ್ಪೀಕರ್ ಆಗಿದ್ದ ಸಿಂಗ್ ಅವರನ್ನೂ ಬಿಜೆಪಿ ನಾಯಕತ್ವ ನಿನ್ನೆ ದೆಹಲಿಗೆ ಕರೆಸಿತ್ತು.
ಬಿರೇನ್ ಸಿಂಗ್ ಅವರು ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಗಳು) ಕಾಯಿದೆ ಅಥವಾ AFSPA ಬಗ್ಗೆ ಏನಾದರೂ ಮಾಡುವ ಭರವಸೆಯೊಂದಿಗೆ ಮಣಿಪುರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು AFSPA ಅನ್ನು ತೆಗೆದುಹಾಕಲು ಕೆಲಸ ಮಾಡುವುದಾಗಿ ಹೇಳಿದ್ದರೂ, ಅವರು ನೆಲದ ವಾಸ್ತವತೆಯನ್ನು ನೋಡಿಕೊಳ್ಳುವ ಸಮತೋಲನ ವಿಧಾನಕ್ಕೆ ಆದ್ಯತೆ ನೀಡಿದರು.
ಬಿರೇನ್ ಸಿಂಗ್ ಅವರು ಫುಟ್ಬಾಲ್ ಆಟಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಅಥವಾ ಬಿಎಸ್ಎಫ್ ಲ್ಲಿ ಸೇರಿ, ದೇಶೀಯ ಸ್ಪರ್ಧೆಗಳಲ್ಲಿ ಅದರ ತಂಡಕ್ಕಾಗಿ ಆಡುತ್ತಿದ್ದರು. ಬಿಎಸ್‌ಎಫ್ ತೊರೆದ ನಂತರ ಪತ್ರಕರ್ತರಾದರು. ಯಾವುದೇ ಔಪಚಾರಿಕ ತರಬೇತಿ ಮತ್ತು ಅನುಭವವಿಲ್ಲದಿದ್ದರೂ, ಅವರು 1992 ರಲ್ಲಿ ನಹರೋಲ್ಗಿ ತೌಡಂಗ್ ಎಂಬ ಸ್ಥಳೀಯ ದಿನಪತ್ರಿಕೆಯನ್ನು ಪ್ರಾರಂಭಿಸಿದರು ಮತ್ತು 2001 ರವರೆಗೆ ಅದರ ಸಂಪಾದಕರಾಗಿ ಕೆಲಸ ಮಾಡಿದರು.
ಅವರು 2002 ರಲ್ಲಿ ರಾಜಕೀಯಕ್ಕೆ ಸೇರಿದರು, ಅವರು ಮಣಿಪುರದ ಹೀಂಗಾಂಗ್ ವಿಧಾನಸಭಾ ಕ್ಷೇತ್ರದಿಂದ ತಮ್ಮ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಅವರು 2007 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಥಾನವನ್ನು ಉಳಿಸಿಕೊಂಡರು ಮತ್ತು 2012 ರವರೆಗೆ ಸಚಿವರಾಗಿ ಸೇವೆ ಸಲ್ಲಿಸಿದರು. ನಾಲ್ಕು ವರ್ಷಗಳ ನಂತರ ಅವರು ಬಿಜೆಪಿ ಸೇರಿದರು. 2017 ರಲ್ಲಿ ಅವರು ಮತ್ತೆ ತಮ್ಮ ಸ್ಥಾನದಿಂದ ಗೆದ್ದರು, ನಂತರ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು.
ಇದನ್ನೂ ಓದಿ: ಮನುಷ್ಯ ಏಕಾಂಗಿಯಾಗಿ ಬದುಕುವುದಕ್ಕೆ ಸಾಧ್ಯವಿಲ್ಲ; ಸಂಘಜೀವಿಯಾದಾಗ ಸಹಕಾರ ಮುಖ್ಯ: ಬಸವರಾಜ ಬೊಮ್ಮಾಯಿ
Published On - 4:55 pm, Sun, 20 March 22