ಮನುಷ್ಯ ಏಕಾಂಗಿಯಾಗಿ ಬದುಕುವುದಕ್ಕೆ ಸಾಧ್ಯವಿಲ್ಲ; ಸಂಘಜೀವಿಯಾದಾಗ ಸಹಕಾರ ಮುಖ್ಯ: ಬಸವರಾಜ ಬೊಮ್ಮಾಯಿ

Basavaraj Bommai: ಹಕಾರ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಸಹಕಾರ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಿಎಂ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ಕಾರ್ಯಕ್ರಮ ನಡೆದಿದೆ.

ಮನುಷ್ಯ ಏಕಾಂಗಿಯಾಗಿ ಬದುಕುವುದಕ್ಕೆ ಸಾಧ್ಯವಿಲ್ಲ; ಸಂಘಜೀವಿಯಾದಾಗ ಸಹಕಾರ ಮುಖ್ಯ: ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us
| Updated By: ganapathi bhat

Updated on:Mar 20, 2022 | 3:33 PM

ಬೆಂಗಳೂರು: ಸಹಕಾರ ಎನ್ನುವುದು ಮನುಷ್ಯ ಜೀವನದ ಒಂದು ಭಾಗ. ಮನುಷ್ಯ ಏಕಾಂಗಿಯಾಗಿ ಬದುಕುವುದಕ್ಕೆ ಸಾಧ್ಯವಿಲ್ಲ. ಮನುಷ್ಯ ಸಂಘಜೀವಿಯಾದಾಗ ಸಹಕಾರ ಬಹಳ ಮುಖ್ಯ. ಸಹಕಾರದ ಮಹತ್ವ ತಿಳಿದುಕೊಂಡ್ರೆ ನಮ್ಮ ಬದುಕು ಸುಲಭ. ಇಲ್ಲದಿದ್ದರೆ ನಾವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಬೆಂಗಳೂರಿನಲ್ಲಿ ಇಂದು (ಮಾರ್ಚ್ 20) ನಡೆದ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಸಹಕಾರ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಿಎಂ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ಕಾರ್ಯಕ್ರಮ ನಡೆದಿದೆ.

ಸಹಕಾರ ಇಲಾಖೆವತಿಯಿಂದ ಸಪ್ತಾಹ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಮ್ಮ ಕ್ಷೇತ್ರದಲ್ಲಿ ಇಲಾಖೆಯ ಕಾರ್ಯಕ್ರಮ ಆಯೋಜಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಸದಾನಂದ ಗೌಡ, ಸಚಿವರಾದ ಆರಗ ಜ್ಞಾನೇಂದ್ರ, ಗೋಪಾಲಯ್ಯ, ಸೇರಿದಂತೆ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು.

ಅಮಿತ್ ಶಾ ಕೂಡ ಸಹಕಾರಿ ರಂಗದಿಂದ ಬಂದವರು. ಅಹಮದಾಬಾದ್ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ರು. ಈಗ ದೇಶದ ಗೃಹ ಮಂತ್ರಿ ಆಗಿದ್ದಾರೆ. ಇಲ್ಲಿರುವ ಸಹಕಾರಿ ಸಂಘದವರು ಕನಸು ಕಾಣಬಹುದು. ಮುಂದೆ ದೇಶದ ಗೃಹ ಮಂತ್ರಿ ಆಗಬಹುದು ಅಂತ ಕನಸು ಕಾಣಬಹುದು. ಇದಕ್ಕೆ ಚಪ್ಪಾಳೆ ಹೊಡೆಯಿರಿ ಎಂದು ಸಿಎಂ ಬೊಮ್ಮಾಯಿ‌ ಹೇಳಿದ್ದಾರೆ. ದುಡ್ಡೆ ದೊಡ್ಡಪ್ಪ ಅಲ್ಲ. ದುಡಿಮೆ ದೊಡ್ಡಪ್ಪ. ಸಹಕಾರಿ ಸಂಘದಲ್ಲಿ ದುಡಿಮೆ ಮುಖ್ಯವಾದುದು. ಸಹಕಾರಿ ಸಂಘದಲ್ಲಿ ಎಲ್ಲರಿಗೂ ಅವಕಾಶವಿದೆ. ಎಸ್​ಸಿ, ಎಸ್​ಟಿ ವರ್ಗದವರು ಸಹಕಾರಿ ಸಂಘದಲ್ಲಿ ಭಾಗವಹಿಸಲು ಸರ್ಕಾರವೇ ಸದಸ್ಯತ್ವ ನೊಂದಣಿ ಹಣ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸಹಕಾರಿ ಸಂಘ ಬಹಳ ದೊಡ್ಡದಾಗಿದೆ. ದುಡಿಯುವ ವರ್ಗದ ಜನ ಭಾಗವಹಿಸಬೇಕು. ಮಹಿಳೆಯರು ಮೊದಲು ಭಾಗವಹಿಸಬೇಕು. ಸಾಕಷ್ಟು ಮಹಿಳೆಯರ ಸಂಘ ಇದೆ. ವಿವಿಧ ಉದ್ದೇಶ ಸಹಕಾರಿ ‌ಮಹಿಳಾ ಸಂಘ ಪ್ರತಿ ತಾಲೂಕಿನಲ್ಲಿ ಪ್ರಾರಂಭ ಮಾಡುತ್ತೇವೆ. ಸರ್ಕಾರದ ಕಡೆಯಿಂದ ಬಂಡವಾಳ ಹಾಕುತ್ತೇವೆ. ಮಹಿಳೆಯರು ಕೂಡ ಸರ್ಕಾರದ ಸಹಾಯದಿಂದ ಮೇಲೆ ಬರಬೇಕು. ಇದರಿಂದ ರಾಜ್ಯ ಕೂಡ ಅಭಿವೃದ್ಧಿ ಆಗುತ್ತೆ. ಈಗ ಅಕೌಂಟ್ ಸರಿ ಮಾಡಲು ಸಿದ್ದತೆ ಮಾಡಿಕೊಂಡಿದ್ದೇವೆ. ಸಹಕಾರಿ ರಂಗದ ಮೇಲೆ ಕೆಲವರು ಅವಲಂಬಿತರಾಗಿದ್ದಾರೆ. ಸಹಕಾರಿ ಕ್ಷೇತ್ರ ಬೆಳೆಯಬೇಕು. ಸಹಕಾರಿ ಜೊತೆಗೆ ನಾನಿದ್ದೇನೆ, ಪ್ರತಿಯೊಂದು ಹಂತದಲ್ಲಿ ನಾನು ಇರ್ತಿನಿ. ಸರ್ಕಾರ ಕೂಡ ಇರುತ್ತೆ, ಇನ್ನೂ ಉತ್ತಮ ಕೆಲಸ ಮಾಡಿ ಎಂದು ಸಿಎಂ ಬೊಮ್ಮಾಯಿ ಪ್ರೋತ್ಸಾಹಿಸಿದ್ದಾರೆ.

ಸಹಕಾರ ಕ್ಷೇತ್ರಕ್ಕೆ ಏನೆಲ್ಲ ಕೊಡಬೇಕು ಎಂಬ ಮಾಹಿತಿ ಸಿಎಂಗೆ ಇದೆ: ಎಸ್.ಟಿ ಸೋಮಶೇಖರ್

2ನೇ ಬಾರಿಗೆ ನನ್ನನ್ನು ಸಹಕಾರಿ ಮಂತ್ರಿ ಮಾಡಿದ್ದಲ್ಲದೇ ನನಗೆ ಮೈಸೂರು ಜಿಲ್ಲಾ ಮಂತ್ರಿ ಅವಕಾಶ ಕೊಟ್ಟ ಸಿಎಂಗೆ ತುಂಬು ಹೃದಯದ ಧನ್ಯವಾದಗಳು. ಯಶವಂತಪುರ ಕ್ಷೇತ್ರಕ್ಕೆ 402 ಕೋಟಿ ರೂ. ಅನುದಾನವನ್ನ 5 ವಾರ್ಡ್​ಗೆ ನೀಡಿದ್ದಾರೆ. 110 ಹಳ್ಳಿ ಯೋಜನೆಯಡಿಯೂ ಕೆಲಸ ಮುಗಿಯುವ ಹಂತಕ್ಕೆ ಬಂದಿದೆ. 102 ಕೆರೆಗಳಿಗೆ ನೀರು ತುಂಬಿಸಲು 160 ಕೋಟಿ ರೂ. ನೀಡಲಾಗಿದೆ. ಮಂಚನಬೆಲೆಗೆ 161 ಕೋಟಿ ರೂ. ನೀಡಿದ್ದಾರೆ. ನಮ್ಮ ಕ್ಷೇತ್ರಕ್ಕೆ ಅನುದಾನ ನೀಡಿದ ಸಿಎಂಗೆ ನಮ್ಮ ಕ್ಷೇತ್ರದ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದು ಸಹಕಾರ ಸಚಿವ ಎಸ್​.ಟಿ ಸೋಮಶೇಖರ್ ಹೇಳಿದ್ದಾರೆ.

ಸಹಕಾರ ಇಲಾಖೆಯಲ್ಲಿ ಯಶಸ್ವಿನಿ ತರಲು ಬೇಡಿಕೆ ಕಟ್ಟಿದ್ದಾರೆ. ಪ್ರತಿಯೊಂದು ಜಿಲ್ಲೆಯ ರೈತರು ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಅಡಚಣೆ ಇರಬಹುದು. ಸದನದಲ್ಲಿ ಯಶಸ್ವಿನಿಗೆ ಕೆಲವರು ವಿರೋಧ ಮಾಡಿದ್ರು. ಸಹಕಾರಿ ಕ್ಷೇತ್ರಕ್ಕೆ ಸುಧೀರ್ಘವಾದ ಇತಿಹಾಸ ಇದೆ. ಸಿಎಂ ಹೇಳಿದಂತೆ ಅನೇಕ ವರ್ಷಗಳ ಕಾಲ‌ ಕೆಲಸ ಮಾಡಿದ 60 ಜನರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ. ಸಚಿವ ಸುಧಾಕರ್‌ ಎರಡು‌ ಕೆಲಸ ಮಾಡಿಕೊಟ್ಟಿದ್ದಾರೆ. ಸಿಎಂಗೆ ನಾನು ಯಾವ ಬೇಡಿಕೆ‌ ಇಡಲ್ಲ. ಲೆಟರ್ ನಾನು ಈಗ ‌ಕೊಡಬಾರದು ಅಂತ ಅಂದುಕೊಂಡಿದ್ದೇನೆ. ಸಹಕಾರ ಕ್ಷೇತ್ರಕ್ಕೆ ಏನೆಲ್ಲ ಕೊಡಬೇಕು ಎಂಬ ಮಾಹಿತಿ ಸಿಎಂಗೆ ಇದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿದ್ದಾರೆ.

ಪುನೀತ್ ರಾಜ್‌ಕುಮಾರ್​ಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ

ನಿರಂತರವಾಗಿ ಬೊಮ್ಮಾಯಿಯವರೇ ಸಿಎಂ ಆಗಲಿ. ಸಹಕಾರ ಇಲಾಖೆಗೆ ಸಿಎಂ ಬಹಳ ಸಹಕಾರ ಕೊಟ್ಟಿದ್ದಾರೆ. ಕೊರೊನಾ ಹಿಮ್ಮೆಟ್ಟಿಸುವಲ್ಲಿ ಬೊಮ್ಮಾಯಿ ಯಶಸ್ವಿಯಾದರು. ಕೊರೊನಾ ವೇಳೆ ಜನರನ್ನು ಕಾಪಾಡುವ ಕೆಲಸ ಮಾಡಿದರು. ಸಿಎಂ ಬಗ್ಗೆ ಎಷ್ಟು ಮಾತಾಡಿದ್ರೂ ಸಾಲಲ್ಲ. ಬೊಮ್ಮಾಯಿಗೆ ಚಾಮುಂಡೇಶ್ವರಿ ಆಶೀರ್ವಾದ ಸದಾ ಇರಲಿ ಎಂದು ಸಹಕಾರ ಇಲಾಖೆ ಕಾರ್ಯಕ್ರಮದಲ್ಲಿ ಜಿ.ಟಿ.ದೇವೇಗೌಡ ಸಿಎಂ ಬೊಮ್ಮಾಯಿ ಅವರನ್ನು ಹೊಗಳಿದ್ದಾರೆ. ಪುನೀತ್ ರಾಜ್‌ಕುಮಾರ್​ಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ನೀಡಲಾಗುತ್ತದೆ. ಪುನೀತ್ ರಾಜ್‌ಕುಮಾರ್ ಮನೆಗೆ ತೆರಳಿ ಪ್ರಶಸ್ತಿ ನೀಡಿ ಗೌರವಿಸುತ್ತೇವೆ ಎಂದು ಸಹಕಾರ ಮಹಾಮಂಡಳಿ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಸಹಕಾರ ಕ್ಷೇತ್ರದಿಂದಾಗಿ ಆರ್ಥಿಕವಾಗಿ ನಾವು ಮುಂದಿದ್ದೇವೆ: ಸದಾನಂದ ಗೌಡ

ಸಹಕಾರ ಕ್ಷೇತ್ರಕ್ಕೆ ಸಿಎಂ ಹೆಚ್ಚು ಅನುದಾನವನ್ನು ನೀಡಿದ್ದಾರೆ. ಸಹಕಾರ ವಲಯಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಯಶಸ್ವಿನಿ ಯೋಜನೆಗೆ ಸಿಎಂ ಮತ್ತಷ್ಟು ಪುಷ್ಟಿ ನೀಡಿದ್ದಾರೆ. ಯಶಸ್ವಿನಿ ಯೋಜನೆಗಾಗಿ 300 ಕೋಟಿ ಅನುದಾನ ನೀಡಿದ್ದಾರೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ವಿಶ್ವದಲ್ಲಿ ಆರ್ಥಿಕವಾಗಿ ಹಿನ್ನಡೆಯಾಗಿದ್ದರೂ ಭಾರತದಲ್ಲಿ ಆಗಿಲ್ಲ. ಸಹಕಾರ ಕ್ಷೇತ್ರದಿಂದಾಗಿ ಆರ್ಥಿಕವಾಗಿ ನಾವು ಮುಂದಿದ್ದೇವೆ ಎಂದು ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಸದಾನಂದಗೌಡ ಹೇಳಿದ್ದಾರೆ.

ಇದನ್ನೂ ಓದಿ: ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗೆ ಬೆದರಿಕೆ ಹಾಕಿ ಮೂರು ದಿನ ಕಳೆದರೂ ಜಾತ್ಯತೀತವಾದಿಗಳು ಮೌನವಾಗಿದ್ದಾರೆ; ಸಿಎಂ ಬೊಮ್ಮಾಯಿ

ಇದನ್ನೂ ಓದಿ: ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದು ನಮ್ಮ ಧ್ಯೇಯವಾಗಿದೆ; ಯಾದಗಿರಿಯಲ್ಲಿ ಸಿಎಂ ಬೊಮ್ಮಾಯಿ ಮಾತು

Published On - 3:25 pm, Sun, 20 March 22