ಮಣಿಪುರದಲ್ಲಿ ಎರಡನೇ ಹಂತದ ಮತದಾನ; ನಾಗಾ ಜನಾಂಗದ ಪ್ರಭಾವ ಇರುವ ಕ್ಷೇತ್ರಗಳು ಬಿಜೆಪಿಗೆ ಸವಾಲು

ಮಣಿಪುರದ ಮತಗಟ್ಟೆಗಳಲ್ಲಿ ಕೊವಿಡ್​ 19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಮತದಾರರು ಕ್ಯೂನಲ್ಲಿ ಅಂತರ ಕಾಯ್ದುಕೊಂಡು ನಿಂತು ಮತ ಚಲಾಯಿಸುತ್ತಿದ್ದಾರೆ.

ಮಣಿಪುರದಲ್ಲಿ ಎರಡನೇ ಹಂತದ ಮತದಾನ; ನಾಗಾ ಜನಾಂಗದ ಪ್ರಭಾವ ಇರುವ ಕ್ಷೇತ್ರಗಳು ಬಿಜೆಪಿಗೆ ಸವಾಲು
ಮಣಿಪುರದಲ್ಲಿ ಚುನಾವಣೆ
Follow us
TV9 Web
| Updated By: Lakshmi Hegde

Updated on: Mar 05, 2022 | 8:20 AM

ದೆಹಲಿ: ಮಣಿಪುರದಲ್ಲಿ ಇಂದು ವಿಧಾನಸಭೆ ಚುನಾವಣೆ (Manipur Assembly Election) ಎರಡನೇ ಹಂತದ ಮತದಾನ ನಡೆಯುತ್ತಿದೆ. ಇಂದು ಮುಂಜಾನೆ 7ಗಂಟೆಯಿಂದ ಮತದಾನ ಶುರುವಾಗಿದೆ. ಎರಡನೇ ಹಂತದಲ್ಲಿ 10 ಜಿಲ್ಲೆಗಳ, 22 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಒಟ್ಟು 92 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಬಾರಿ ನಾಗಾ ಜನಾಂಗದವರ ಪ್ರಾಬಲ್ಯವಿರುವ ತೌಬಲ್​ ಜಿಲ್ಲೆ ಸೇರಿ, ಇನ್ನಿತರ ಗುಡ್ಡಪ್ರದೇಶಗಳಲ್ಲಿ ಮತದಾನ ನಡೆಯುತ್ತಿದ್ದು, ಬಿಜೆಪಿ ಪಾಲಿಗೆ ಸ್ವಲ್ಪ ಕಷ್ಟಕರ ಸ್ಥಳಗಳಾಗಿವೆ.

ಇಂದು ತೌಬಲ್​, ಚಾಂದೇಲ್​, ಉಕ್ರುಲ್​, ಸೇನಾಪಟಿ,  ತಮೆಂಗ್ಲಾಂಗ್ ಮತ್ತು ಜಿರಿಬಾಮ್ ಸೇರಿ ಒಟ್ಟು 10 ಜಿಲ್ಲೆಗಳಿಂದ ಸುಮಾರು 8.38 ಲಕ್ಷ ಜನರು ಮತದಾನ ಮಾಡಲಿದ್ದಾರೆ. ಈ ಹಂತದಲ್ಲಿ ಬಿಜೆಪಿಯ 22 ಅಭ್ಯರ್ಥಿಗಳು ಕಣದಲ್ಲಿದ್ದರೆ, ಕಾಂಗ್ರೆಸ್​​ನ 18, ನ್ಯಾಶನಲ್​ ಪೀಪಲ್​ ಪಾರ್ಟಿಯ 11, ಜನತಾ ದಳ್​-(ಯುನೈಟೆಡ್​) ಮತ್ತು ನಾಗಾ ಪೀಪಲ್ಸ್​ ಫ್ರಂಟ್​​ನ ತಲಾ 10 ಅಭ್ಯರ್ಥಿಗಳು ಇದ್ದಾರೆ.  ಹಾಗೇ, ಒಟ್ಟು 1,247 ಮತಗಟ್ಟೆಗಳು ಇದ್ದು, ಮಧ್ಯಾಹ್ನ 4ಗಂಟೆಯವರೆಗೆ ಮತದಾನ ನಡೆಯಲಿದೆ.

ಮಣಿಪುರದ ಮತಗಟ್ಟೆಗಳಲ್ಲಿ ಕೊವಿಡ್​ 19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಮತದಾರರು ಕ್ಯೂನಲ್ಲಿ ಅಂತರ ಕಾಯ್ದುಕೊಂಡು ನಿಂತು ಮತ ಚಲಾಯಿಸುತ್ತಿದ್ದಾರೆ. ಅಷ್ಟೇ ಅಲ್ಲ, ಮತದಾನ ನಡೆಯುತ್ತಿರುವ 100 ಮೀಟರ್​ ಅಂತರದಲ್ಲಿ ಫೋನ್​ ಬಳಕೆಗೆ ಅನುಮತಿ ಇಲ್ಲ. ಮಣಿಪುರದಲ್ಲಿ ಮೊದಲ ಹಂತದ ಮತದಾನ ಫೆ.28ರಂದು ನಡೆದಿತ್ತು. ಅಂದು ಕೆಲವು ಬೂತ್​​ಗಳಲ್ಲಿ ಸಂಘರ್ಷ ನಡೆದಿದ್ದು, ಚುರ್​ಚಾಂದ್​ ಪುರ ಜಿಲ್ಲೆಯ ಒಟ್ಟು 9 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಚುನಾವಣಾ ಆಯೋಗ ಈಗಾಗಲೇ ಆದೇಶ ನೀಡಿದೆ.

ಈ ಹಂತದಲ್ಲಿ ಜನರು ಸ್ವತಂತ್ರವಾಗಿ ಮತ್ತು ನ್ಯಾಯಯುತವಾಗಿ ಮತದಾನ ಮಾಡುತ್ತಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಕಾಂಗ್ರೆಸ್​ ಚುನಾವಣಾ ಆಯೋಗಕ್ಕೆ ಹೇಳಿದೆ. ಅಲ್ಲದೆ, ಇಲ್ಲಿನ ಕೆಲವು ಉಗ್ರಸಂಘಟನೆಗಳು ಮತದಾರರನ್ನು ಬೆದರಿಸುತ್ತಿವೆ. ಈ ಮೂಲಕ ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರುತ್ತಿವೆ ಎಂದು ಕಾಂಗ್ರೆಸ್​ ಆರೋಪಿಸಿದೆ. ಚುನಾವಣಾ ಆಯೋಗದ ಅಧಿಕಾರಿಗಳನ್ನು ಶುಕ್ರವಾರ ಭೇಟಿ ಮಾಡಿದ್ದ ಕಾಂಗ್ರೆಸ್​ ನಿಯೋಗ, ಇಲ್ಲಿನ ಬಿಜೆಪಿ ಸರ್ಕಾರ ಉಗ್ರರ ಗುಂಪಿಗೆ ಹಣ ಬಿಡುಗಡೆ ಮಾಡಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಗುಪ್ತವಾಗಿ ಹಣ ನೀಡಿದೆ ಎಂದೂ ಆರೋಪಿಸಿದೆ.

ಇದನ್ನೂ ಓದಿ: Russia Ukraine War Live: ಅಮೆರಿಕ ಕಂಪನಿಗಳನ್ನು ನಿರ್ಬಂಧಿಸಿದ ರಷ್ಯಾ, ಉಕ್ರೇನ್​ನಿಂದ ಭಾರತೀಯರನ್ನು ಕರೆತರಲು ಸತತ ಪ್ರಯತ್ನ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ