ಪಂಜಾಬ್: ಮಹಾರಾಷ್ಟ್ರದ ನಾಂದೇಡ್ನ ಹಜೂರ್ ಸಾಹೀಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದ ಸಾವಿರಾರು ಯಾತ್ರಾರ್ಥಿಗಳು ಪಂಜಾಬ್ಗೆ ವಾಪಸ್ ಬಂದಿದ್ದಾರೆ. ಆದ್ರೆ ಇವರ ಪೈಕಿ ನೂರಾರು ಮಂದಿಗೆ ಕೊರೊನಾ ಸೋಂಕು ತಗುಲಿರುವ ಆತಂಕಕಾರಿ ಅಂಶ ಬಯಲಾಗಿದೆ.
ನಾಂದೇಡ್ನಿಂದ ಪಂಜಾಬ್ಗೆ ಬರೋಬ್ಬರಿ 3,500 ಮಂದಿ ಯಾತ್ರಾರ್ಥಿಗಳು ಮರಳಿಬಂದಿದ್ದಾರೆ. ಇವರ ಪೈಕಿ 215 ಯಾತ್ರಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಇದೆ. ದೀಢೀರ್ ಲಾಕ್ ಡೌನ್ ಘೋಷಣೆಯಿಂದ ನಾಂದೇಡ್ನ ಹಜೂರ್ ಸಾಹೀಬ್ ಗುರುದ್ವಾರದಲ್ಲಿಯೇ ಸಿಲುಕಿದ್ದರು. ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ವಿಶೇಷ ಬಸ್ ಕಳಿಸಿ ಅಷ್ಟೂ ಮಂದಿಯನ್ನು ವಾಪಸ್ ಕರೆಸಿಕೊಂಡಿದ್ದರು. ಹೀಗೆ ಪಂಜಾಬ್ಗೆ ವಾಪಸ್ ಬಂದವರ ಪೈಕಿ ಇದುವರೆಗೂ 215 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ. ರಾಜ್ಯ ಸರ್ಕಾರ ವಾಪಸ್ ಬಂದ ಎಲ್ಲರಿಗೂ 21 ದಿನ ಕ್ವಾರೇಂಟೈನ್ ಗೆ ಒಳಪಡಿಸಿದೆ.
ಇದೀಗ, ನಾಂದೇಡ್ ಗುರುದ್ವಾರ ಯಾತ್ರಾರ್ಥಿಗಳಿಂದ ನಾಲ್ಕು ರಾಜ್ಯಗಳಿಗೆ ಚಿಂತೆ ಶುರುವಾಗಿದೆ. ಹರಿಯಾಣ, ಉತ್ತರಪ್ರದೇಶ, ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದೆ. ಈ ಮಧ್ಯೆ ಮಹಾರಾಷ್ಟ್ರ ಸರ್ಕಾರ ನಾಂದೇಡ್ ಗುರುದ್ವಾರವನ್ನು ಸೀಲ್ ಮಾಡಿದೆ.
Published On - 2:28 pm, Sat, 2 May 20