ಕೊರೊನಾ ವಾರಿಯರ್ಸ್ಗೆ ವಿಶೇಷ ಅಭಿನಂದನೆ, ಮೇ 3ರಂದು ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ
ದೆಹಲಿ: ಕ್ರೂರಿ ಕೊರೊನಾ ವೈರಸ್ ವಿರುದ್ಧದ ಸಮರದಲ್ಲಿ ಕೊರೊನಾ ವಾರಿಯರ್ಸ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ದೇಶಾದ್ಯಂತ ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾಗಿಯಾದ ಆಸ್ಪತ್ರೆಗಳ ಮೇಲೆ ಮೇ 3ರಂದು ಹೂವಿನ ಮಳೆಗೈಯಲು ನಿರ್ಧರಿಸಲಾಗಿದೆ. ನಾಳೆ ಉತ್ತರದ ಶ್ರೀನಗರದಿಂದ ದಕ್ಷಿಣದ ತಿರುವನಂತಪುರಂವರೆಗೆ ಹಾಗೂ ಅಸ್ಸಾಂನ ದಿಬ್ರುಗಢದಿಂದ ಗುಜರಾತ್ನ ಕಛ್ವರೆಗೆ ದೇಶಾದ್ಯಂತ ವಾಯುಪಡೆಯ ಹೆಲಿಕಾಪ್ಟರ್ಗಳು ಹಾರಾಟ ನಡೆಸಲಿದ್ದು, ಹೆಲಿಕಾಪ್ಟರ್ಗಳ ಮೂಲಕ ಪುಷ್ಪವೃಷ್ಟಿ ಸುರಿಸಲಾಗುತ್ತೆ. ಇದೇ ವೇಳೆ ಎಲ್ಲ ಜಿಲ್ಲೆಗಳಲ್ಲಿ ಸೇನೆಯ ಬ್ಯಾಂಡ್ ಸದ್ದು ಮೊಳಗಲಿದ್ದು, ವೈದ್ಯರು ಹಾಗೂ ಪೊಲೀಸರ […]
ದೆಹಲಿ: ಕ್ರೂರಿ ಕೊರೊನಾ ವೈರಸ್ ವಿರುದ್ಧದ ಸಮರದಲ್ಲಿ ಕೊರೊನಾ ವಾರಿಯರ್ಸ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ದೇಶಾದ್ಯಂತ ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾಗಿಯಾದ ಆಸ್ಪತ್ರೆಗಳ ಮೇಲೆ ಮೇ 3ರಂದು ಹೂವಿನ ಮಳೆಗೈಯಲು ನಿರ್ಧರಿಸಲಾಗಿದೆ.
ನಾಳೆ ಉತ್ತರದ ಶ್ರೀನಗರದಿಂದ ದಕ್ಷಿಣದ ತಿರುವನಂತಪುರಂವರೆಗೆ ಹಾಗೂ ಅಸ್ಸಾಂನ ದಿಬ್ರುಗಢದಿಂದ ಗುಜರಾತ್ನ ಕಛ್ವರೆಗೆ ದೇಶಾದ್ಯಂತ ವಾಯುಪಡೆಯ ಹೆಲಿಕಾಪ್ಟರ್ಗಳು ಹಾರಾಟ ನಡೆಸಲಿದ್ದು, ಹೆಲಿಕಾಪ್ಟರ್ಗಳ ಮೂಲಕ ಪುಷ್ಪವೃಷ್ಟಿ ಸುರಿಸಲಾಗುತ್ತೆ.
ಇದೇ ವೇಳೆ ಎಲ್ಲ ಜಿಲ್ಲೆಗಳಲ್ಲಿ ಸೇನೆಯ ಬ್ಯಾಂಡ್ ಸದ್ದು ಮೊಳಗಲಿದ್ದು, ವೈದ್ಯರು ಹಾಗೂ ಪೊಲೀಸರ ಜತೆಗೆ ಐಕ್ಯತೆ ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ. ಸೇನೆಯಿಂದ ಪೊಲೀಸ್ ಸ್ಮಾರಕಗಳಿಗೂ ಗೌರವ ನಮನ ಸಲ್ಲಿಸಲಾಗುತ್ತೆ.
Published On - 10:20 am, Sat, 2 May 20