ಗುಜರಾತ್ನಲ್ಲಿ ಸಿಕ್ಕಿಹಾಕಿಕೊಂಡಿದ್ದ 4385 ಮೀನುಗಾರರು 56 ಬಸ್ಗಳಲ್ಲಿ ವಾಪಸ್!
ಹೈದರಾಬಾದ್: ಗುಜರಾತ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮೀನುಗಾರರು ಇಂದು ಆಂಧ್ರಪ್ರದೇಶ ಜಗ್ಗಯ್ಯಪೇಟೆಗೆ ಹಿಂತಿರುಗಿದ್ದಾರೆ. ಮೀನು ಹಿಡಿಯುತ್ತಾ ಗುಜರಾತ್ನತ್ತ ತೆರಳಿದ್ದ ಮೀನುಗಾರರು ಲಾಕ್ ಡೌನ್ ಕಾರಣ ಗುಜರಾತ್ನಲ್ಲಿಯೇ ಸಿಕ್ಕಿ ಹಾಕಿಕೊಳ್ಳುವಂತೆ ಆಗಿತ್ತು. ಇಂದು ಒಟ್ಟು 4385 ಮೀನುಗಾರರು 56 ಬಸ್ಗಳಲ್ಲಿ ಆಂಧ್ರಕ್ಕೆ ವಾಪಸ್ಸಾಗಿದ್ದಾರೆ. ಗುಜರಾತ್ ನಿಂದ ಹಿಂತಿರುಗಿದ ಮೀನುಗಾರರನ್ನು ಸ್ವಾಗತಿಸಿದ ಆಂಧ್ರಪ್ರದೇಶದ ಅಧಿಕಾರಿಗಳು ಅವರಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಆಂಧ್ರಪ್ರದೇಶ ಸಿ.ಎಂ. ಜಗನ್ ಮನವಿ ಮೇರೆಗೆ ಮೀನುಗಾರರನ್ನು 12 ಬಸ್ಗಳಲ್ಲಿ ಕಳುಹಿಸಿಕೊಟ್ಟ ಗುಜರಾತ್ ಸಿ.ಎಂ. ಗೆ ಆಂಧ್ರ […]
ಹೈದರಾಬಾದ್: ಗುಜರಾತ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮೀನುಗಾರರು ಇಂದು ಆಂಧ್ರಪ್ರದೇಶ ಜಗ್ಗಯ್ಯಪೇಟೆಗೆ ಹಿಂತಿರುಗಿದ್ದಾರೆ. ಮೀನು ಹಿಡಿಯುತ್ತಾ ಗುಜರಾತ್ನತ್ತ ತೆರಳಿದ್ದ ಮೀನುಗಾರರು ಲಾಕ್ ಡೌನ್ ಕಾರಣ ಗುಜರಾತ್ನಲ್ಲಿಯೇ ಸಿಕ್ಕಿ ಹಾಕಿಕೊಳ್ಳುವಂತೆ ಆಗಿತ್ತು.
ಇಂದು ಒಟ್ಟು 4385 ಮೀನುಗಾರರು 56 ಬಸ್ಗಳಲ್ಲಿ ಆಂಧ್ರಕ್ಕೆ ವಾಪಸ್ಸಾಗಿದ್ದಾರೆ. ಗುಜರಾತ್ ನಿಂದ ಹಿಂತಿರುಗಿದ ಮೀನುಗಾರರನ್ನು ಸ್ವಾಗತಿಸಿದ ಆಂಧ್ರಪ್ರದೇಶದ ಅಧಿಕಾರಿಗಳು ಅವರಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಆಂಧ್ರಪ್ರದೇಶ ಸಿ.ಎಂ. ಜಗನ್ ಮನವಿ ಮೇರೆಗೆ ಮೀನುಗಾರರನ್ನು 12 ಬಸ್ಗಳಲ್ಲಿ ಕಳುಹಿಸಿಕೊಟ್ಟ ಗುಜರಾತ್ ಸಿ.ಎಂ. ಗೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಟ್ವೀಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.