AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೂರಿ ಕೊರೊನಾ ವಿರುದ್ಧ SIXER ಎತ್ತಿದ ನೀತಿ ಆಯೋಗ, ಏನದು?

ದೆಹಲಿ: ಜಸ್ಟ್ ಇನ್ನು ಎರಡೇ ದಿನದಲ್ಲಿ ಲಾಕ್​ಡೌನ್ ಮುಗಿಯುತ್ತೆ ಅಂತಾ ಆಶಾಭಾವ ಇಟ್ಟುಕೊಂಡವರಿಗೆ ಢವಢವ ಶುರುವಾಗಿದೆ. ಯಾಕಂದ್ರೆ ಅತ್ತ ಕೊರೊನಾ ನಿಯಂತ್ರಣಕ್ಕೆ ಬರ್ತಿಲ್ಲ, ಇತ್ತ ಸೋಂಕು ವ್ಯಾಪಕವಾಗಿ ಹಬ್ಬುತ್ತಾ ಸಾಗುತ್ತಿದೆ. ಹಾಗಾಗಿ ಕೊರೊನಾ ನಿಯಂತ್ರಣಕ್ಕೆ ನೀತಿ ಆಯೋಗ ಆರು ಸೂತ್ರಗಳನ್ನು ಹೆಣೆದಿದೆ. ಕೊರೊನಾ ಸಂಓಕನ್ನು ಬೌಂಡರಿಯಾಚೆ ತಳ್ಳುವುದಕ್ಕೆ ಸಿಕ್ಸರ್​ ಎತ್ತುವ ಉತ್ಸಾಹದಲ್ಲಿದೆ. ಈ ನಿಟ್ಟಿನಲ್ಲಿ, ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರು ಕೊವಿಡ್ 19 ತಡೆಗೆ 6 ಸೂತ್ರಗಳ ಬಲೆ ಹೆಣೆದಿದ್ದಾರೆ. ಈ ಸೂತ್ರಗಳನ್ನು ಅನುಸರಿಸಿದರೆ […]

ಕ್ರೂರಿ ಕೊರೊನಾ ವಿರುದ್ಧ SIXER ಎತ್ತಿದ ನೀತಿ ಆಯೋಗ, ಏನದು?
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 01, 2020 | 3:59 PM

Share

ದೆಹಲಿ: ಜಸ್ಟ್ ಇನ್ನು ಎರಡೇ ದಿನದಲ್ಲಿ ಲಾಕ್​ಡೌನ್ ಮುಗಿಯುತ್ತೆ ಅಂತಾ ಆಶಾಭಾವ ಇಟ್ಟುಕೊಂಡವರಿಗೆ ಢವಢವ ಶುರುವಾಗಿದೆ. ಯಾಕಂದ್ರೆ ಅತ್ತ ಕೊರೊನಾ ನಿಯಂತ್ರಣಕ್ಕೆ ಬರ್ತಿಲ್ಲ, ಇತ್ತ ಸೋಂಕು ವ್ಯಾಪಕವಾಗಿ ಹಬ್ಬುತ್ತಾ ಸಾಗುತ್ತಿದೆ. ಹಾಗಾಗಿ ಕೊರೊನಾ ನಿಯಂತ್ರಣಕ್ಕೆ ನೀತಿ ಆಯೋಗ ಆರು ಸೂತ್ರಗಳನ್ನು ಹೆಣೆದಿದೆ. ಕೊರೊನಾ ಸಂಓಕನ್ನು ಬೌಂಡರಿಯಾಚೆ ತಳ್ಳುವುದಕ್ಕೆ ಸಿಕ್ಸರ್​ ಎತ್ತುವ ಉತ್ಸಾಹದಲ್ಲಿದೆ.

ಈ ನಿಟ್ಟಿನಲ್ಲಿ, ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರು ಕೊವಿಡ್ 19 ತಡೆಗೆ 6 ಸೂತ್ರಗಳ ಬಲೆ ಹೆಣೆದಿದ್ದಾರೆ. ಈ ಸೂತ್ರಗಳನ್ನು ಅನುಸರಿಸಿದರೆ ಖಚಿತವಾಗಿ ಕೊರೊನಾ ನಿಯಂತ್ರಿಸಬಹುದಾಗಿದೆ.

1. ರೆಡ್ ಜೋನ್‌ ಪ್ರದೇಶಗಳಲ್ಲಿ ಅತಿ ಕಠಿಣ ಸೀಲ್​ಡೌನ್ ಕ್ರಮ 2. ಮಾಸ್ಕ್ ಧರಿಸುವುದು ಹೊಸ ಫ್ಯಾಷನ್ ಆಗಬೇಕು.  ಜೊತೆಗೆ, ಸಾಮಾಜಿಕ ಅಂತರವನ್ನೂ ಪಾಲಿಸಬೇಕು 3. ವೈರಸ್ ಮತ್ತೆ ಪುಟಿದೇಳುವ ಸಾಧ್ಯತೆ ಹೆಚ್ಚಿದ್ದು, ವೈದ್ಯಕೀಯ ಸೌಲಭ್ಯ ಹೆಚ್ಚಿಸುವುದು 4. 60 ವರ್ಷ ದಾಟಿದ ಹಿರಿಯರನ್ನು ಜೋಪಾನವಾಗಿ ನೋಡಿಕೊಳ್ಳುವುದು 5. ಕೊರೊನಾಗೆ ಮದ್ದು ಕಂಡುಹಿಡಿಯೋವರೆಗೆ ನಿಯಮ ಪಾಲನೆ 6. ಕೊರೊನಾ ಹೊಡೆತದಿಂದ ಜನರ ಬದುಕು ಹಾಳಾಗಬಾರದು. ಆರ್ಥಿಕತೆ ಉತ್ತೇಜಿಸುವ ಯೋಜನೆ ಜಾರಿಗೆ ತರಬೇಕು

Published On - 11:38 am, Fri, 1 May 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು