ಪಂಜಾಬ್​ಗೆ ವಾಪಸಾದ ಸಾವಿರಾರು ಸಿಖ್ ಯಾತ್ರಾರ್ಥಿಗಳು, 215 ಮಂದಿಗೆ ಕೊರೊನಾ

ಪಂಜಾಬ್: ಮಹಾರಾಷ್ಟ್ರದ ನಾಂದೇಡ್​ನ ಹಜೂರ್ ಸಾಹೀಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದ ಸಾವಿರಾರು ಯಾತ್ರಾರ್ಥಿಗಳು ಪಂಜಾಬ್​ಗೆ ವಾಪಸ್ ಬಂದಿದ್ದಾರೆ. ಆದ್ರೆ ಇವರ ಪೈಕಿ ನೂರಾರು ಮಂದಿಗೆ ಕೊರೊನಾ ಸೋಂಕು ತಗುಲಿರುವ ಆತಂಕಕಾರಿ ಅಂಶ ಬಯಲಾಗಿದೆ. ನಾಂದೇಡ್​ನಿಂದ ಪಂಜಾಬ್​ಗೆ ಬರೋಬ್ಬರಿ 3,500 ಮಂದಿ ಯಾತ್ರಾರ್ಥಿಗಳು ಮರಳಿಬಂದಿದ್ದಾರೆ. ಇವರ ಪೈಕಿ 215 ಯಾತ್ರಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಇದೆ. ದೀಢೀರ್ ಲಾಕ್ ಡೌನ್ ಘೋಷಣೆಯಿಂದ ನಾಂದೇಡ್​ನ ಹಜೂರ್ ಸಾಹೀಬ್ ಗುರುದ್ವಾರದಲ್ಲಿ‌ಯೇ ಸಿಲುಕಿದ್ದರು. ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ವಿಶೇಷ ಬಸ್ ಕಳಿಸಿ ಅಷ್ಟೂ […]

ಪಂಜಾಬ್​ಗೆ ವಾಪಸಾದ ಸಾವಿರಾರು ಸಿಖ್ ಯಾತ್ರಾರ್ಥಿಗಳು,  215 ಮಂದಿಗೆ ಕೊರೊನಾ
Follow us
ಸಾಧು ಶ್ರೀನಾಥ್​
|

Updated on:May 02, 2020 | 2:30 PM

ಪಂಜಾಬ್: ಮಹಾರಾಷ್ಟ್ರದ ನಾಂದೇಡ್​ನ ಹಜೂರ್ ಸಾಹೀಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದ ಸಾವಿರಾರು ಯಾತ್ರಾರ್ಥಿಗಳು ಪಂಜಾಬ್​ಗೆ ವಾಪಸ್ ಬಂದಿದ್ದಾರೆ. ಆದ್ರೆ ಇವರ ಪೈಕಿ ನೂರಾರು ಮಂದಿಗೆ ಕೊರೊನಾ ಸೋಂಕು ತಗುಲಿರುವ ಆತಂಕಕಾರಿ ಅಂಶ ಬಯಲಾಗಿದೆ.

ನಾಂದೇಡ್​ನಿಂದ ಪಂಜಾಬ್​ಗೆ ಬರೋಬ್ಬರಿ 3,500 ಮಂದಿ ಯಾತ್ರಾರ್ಥಿಗಳು ಮರಳಿಬಂದಿದ್ದಾರೆ. ಇವರ ಪೈಕಿ 215 ಯಾತ್ರಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಇದೆ. ದೀಢೀರ್ ಲಾಕ್ ಡೌನ್ ಘೋಷಣೆಯಿಂದ ನಾಂದೇಡ್​ನ ಹಜೂರ್ ಸಾಹೀಬ್ ಗುರುದ್ವಾರದಲ್ಲಿ‌ಯೇ ಸಿಲುಕಿದ್ದರು. ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ವಿಶೇಷ ಬಸ್ ಕಳಿಸಿ ಅಷ್ಟೂ ಮಂದಿಯನ್ನು ವಾಪಸ್ ಕರೆಸಿಕೊಂಡಿದ್ದರು. ಹೀಗೆ ಪಂಜಾಬ್​ಗೆ ವಾಪಸ್ ಬಂದವರ ಪೈಕಿ ಇದುವರೆಗೂ 215 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ. ರಾಜ್ಯ ಸರ್ಕಾರ ವಾಪಸ್ ಬಂದ ಎಲ್ಲರಿಗೂ 21 ದಿನ‌ ಕ್ವಾರೇಂಟೈನ್ ಗೆ ಒಳಪಡಿಸಿದೆ.

ಇದೀಗ, ನಾಂದೇಡ್ ಗುರುದ್ವಾರ ಯಾತ್ರಾರ್ಥಿಗಳಿಂದ ನಾಲ್ಕು ರಾಜ್ಯಗಳಿಗೆ ಚಿಂತೆ ಶುರುವಾಗಿದೆ. ಹರಿಯಾಣ, ಉತ್ತರಪ್ರದೇಶ, ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದೆ. ಈ ಮಧ್ಯೆ ಮಹಾರಾಷ್ಟ್ರ ಸರ್ಕಾರ ನಾಂದೇಡ್ ಗುರುದ್ವಾರವನ್ನು ಸೀಲ್ ಮಾಡಿದೆ.

Published On - 2:28 pm, Sat, 2 May 20

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ