Cabinet Reshuffle: ಚುನಾವಣಾ ಹೊಸ್ತಿಲಲ್ಲೇ ಕೇಂದ್ರ ಸಚಿವ ಸಂಪುಟ ಪುನಾರಚನೆ ಸಾಧ್ಯತೆ, ಜುಲೈ 3 ನಿರ್ಣಾಯಕ ದಿನ

|

Updated on: Jun 30, 2023 | 7:50 AM

ಲೋಕಸಭಾ ಚುನಾವಣೆ(Lok Sabha Election) ಗೆ ಒಂದು ವರ್ಷಕ್ಕೂ ಕಡಿಮೆ ಅವಧಿ ಇರುವಾಗ ಹಾಗೂ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ಬರುತ್ತಿರುವ ಹೊಸ್ತಿಲಲ್ಲೇ ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Cabinet Reshuffle: ಚುನಾವಣಾ ಹೊಸ್ತಿಲಲ್ಲೇ ಕೇಂದ್ರ ಸಚಿವ ಸಂಪುಟ ಪುನಾರಚನೆ ಸಾಧ್ಯತೆ, ಜುಲೈ 3 ನಿರ್ಣಾಯಕ ದಿನ
ನರೇದ್ರ ಮೋದಿ-ಅಮಿತ್ ಶಾ
Image Credit source: The Print
Follow us on

ಲೋಕಸಭಾ ಚುನಾವಣೆ(Lok Sabha Election) ಗೆ ಒಂದು ವರ್ಷಕ್ಕೂ ಕಡಿಮೆ ಅವಧಿ ಇರುವಾಗ ಹಾಗೂ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ಬರುತ್ತಿರುವ ಹೊಸ್ತಿಲಲ್ಲೇ ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಜುಲೈ 3 ರಂದು ಹಾಲಿ ಸಚಿವರುಗಳ ಸಂಪುಟ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದಾರೆ ಈ ಸಭೆಯಲ್ಲಿ ಸಚಿವರ ಕಾರ್ಯವೈಖರಿಗಳನ್ನು ಆಧರಿಸಿ ಕೆಲವರನ್ನು ಕೈಬಿಡುವ ಸಾಧ್ಯತೆ ಇದೆ.

ಈ ಸಭೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಸಂಪುಟದಿಂದ ಹೊರಹೋಗಲಿರುವ ಸಚಿವರುಗಳಿಗೆ ಮೊದಲೇ ಮಾಹಿತಿ ನೀಡುತ್ತಾರೆ ಎನ್ನುವ ಮಾಹಿತಿಗಳು ಬರುತ್ತಿವೆ. ಈ ವರ್ಷ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್​ಗಢದಲ್ಲಿ ಚುನಾವಣೆಗಳು ನಡೆಯಲಿವೆ, ಮುಂದಿನ ಏಪ್ರಿಲ್ -ಮೇನಲ್ಲಿ ಲೋಕಸಭೆಗೂ ಚುನಾವಣೆ ನಡೆಯಲಿದೆ.

ಮತ್ತಷ್ಟು ಓದಿ: Cabinet Expansion: 2023ರ ಸಂಕ್ರಾಂತಿಯೊಳಗೆ ಮೋದಿ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ; ಏನಿದು ಲೆಕ್ಕಾಚಾರ?

ಇವೆರಡನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸಚಿವ ಸಂಪುಟದಲ್ಲಿ ಕೆಲ ಹೊಸಬರಿಗೂ ಮಣೆ ಹಾಕುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ ಹಾಗೂ ಹಾಲಿ ಇರುವ ಕೆಲ ಸಚಿವರನ್ನು ಕೈಬಿಟ್ಟು, ಚುನಾವಣೆ ನಡೆಯುತ್ತಿರುವ ರಾಜ್ಯಗಳ ಕಡೆಗೆ ಆದ್ಯತೆ ನೀಡುವ ಸಾಧ್ಯತೆ ಇದೆ.

ಇನ್ನೊಂದೆಡೆ ಕೇರಳದ ಖ್ಯಾತ ನಟ ಗೋಪಿ ಕೃಷ್ಣ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಗೋಪಿ ಕೃಷ್ಣ ಅವರು ಕೇರಳ ಬಿಜೆಪಿಯನ್ನು ಆಕ್ಟೀವ್​ ಆಗಿದ್ದಾರೆ. ಈ ಮೂಲಕ ಕೇರಳದಲ್ಲಿ ಬಿಜೆಪಿಗೆ ನೆಲೆ ಕಲ್ಪಿಸಲು ಬಿಜೆಪಿ ಪ್ಲ್ಯಾನ್ ಮಾಡುತ್ತಿದೆ.

ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಕೆಲ ಸಚಿವರುಗಳಿಗೆ ಕೊಕ್ ನೀಡಿ ಕೆಲವು ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಜಾತಿ ಸಮೀಕರಣ ಹಾಗೂ ಇತರೆ ಎಲ್ಲಾ ಸಮುದಾಯಗಳ ಮತಗಳನ್ನು ಸೆಳೆಯುವ ನಾಯಕರಿಗೆ ಮಣೆ ಹಾಕಿದರೂ ಆಶ್ಚರ್ಯವಿಲ್ಲ ಆದರೆ ಎಂದಿನಂತೆ ಮೋದಿ ಹಾಗೂ ಷಾ ಸೂತ್ರಗಳಲ್ಲಿ ಯಾರ್ಯಾರಿಗೆ ಅವಕಾಶ ಸಿಗಲಿದೆ, ಯಾರ್ಯಾರು ಸಂಪುಟದಿಂದ ಹೊರಹೋಗಲಿದ್ದಾರೆ ಎನ್ನುವುದನ್ನು ಈಗಲೇ ಅಂದಾಜು ಮಾಡಲಾಗದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ