ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ: ಪ್ರಧಾನಿ ಮೋದಿ

|

Updated on: Oct 07, 2023 | 5:41 PM

ಈ ಕಷ್ಟದ ಸಮಯದಲ್ಲಿ ಭಾರತವು ಇಸ್ರೇಲ್‌ ಪರವಾಗಿ ನಿಂತಿದೆ ಎಂದು ಹೇಳಿದ್ದಾರೆ. ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅಲ್ಲಿನ ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ಇವೆ. ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ: ಪ್ರಧಾನಿ ಮೋದಿ
ಬೆಂಜಮಿನ್ ನೆತನ್ಯಾಹು - ಮೋದಿ
Follow us on

ದೆಹಲಿ ಅಕ್ಟೋಬರ್ 07: ಇಸ್ರೇಲ್ (Israel)ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ ಕನಿಷ್ಠ 22 ಮಂದಿ ಸಾವಿಗೀಡಾಗಿರುವ  ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಘಾತ ವ್ಯಕ್ತಪಡಿಸಿದ್ದಾರೆ. ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಈ ಕಷ್ಟದ ಸಮಯದಲ್ಲಿ ಭಾರತವು ಇಸ್ರೇಲ್‌ ಪರವಾಗಿ ನಿಂತಿದೆ ಎಂದು ಹೇಳಿದ್ದಾರೆ. ಇಸ್ರೇಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅಲ್ಲಿನ ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ಇವೆ. ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್‌ನೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ವಿಡಿಯೊ ಸಂದೇಶದಲ್ಲಿ ಸಾಮೂಹಿಕ ಸೈನ್ಯದ ಸಜ್ಜುಗೊಳಿಸುವಿಕೆ ಮತ್ತು ಯುದ್ಧದ ಆರಂಭವನ್ನು ಘೋಷಿಸಿದರು, ‘ಕಾರ್ಯಾಚರಣೆಯಲ್ಲ, ಇದು ಯುದ್ಧ.. “ಶತ್ರುಗಳು ಬೆಲೆ ತೆರುತ್ತಾರೆ, ಅವರು ಊಹಿಸಿಕೊಳ್ಳಲೂ ಆಗದಂತ ರೀತಿಯಲ್ಲಿ ತಿರುಗೇಟು ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.

‘ಜಾಗರೂಕರಾಗಿರಿ’ ಇಸ್ರೇಲ್​​ನಲ್ಲಿರುವ ತನ್ನ ನಾಗರಿಕರಿಗೆ ಭಾರತ ಸಂದೇಶ

ಹಮಾಸ್ ಉಗ್ರಗಾಮಿಗಳ ದಾಳಿಗೆ ಒಳಗಾದ ದೇಶದಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳಿಗೆ ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು “ಜಾಗ್ರತೆಯಿಂದಿರಲು” ಮತ್ತು “ಸ್ಥಳೀಯ ಅಧಿಕಾರಿಗಳು ಸೂಚಿಸಿದಂತೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಪಾಲಿಸುವಂತೆ” ಕೇಳಿಕೊಂಡಿದೆ. ಪ್ಯಾಲೆಸ್ತೀನ್ ಎನ್‌ಕ್ಲೇವ್‌ನಿಂದ ಇಸ್ರೇಲ್‌ನ ಮೇಲೆ ರಾಕೆಟ್‌ಗಳ ಸುರಿಮಳೆಗೈದ ನಂತರ ಇಂದು ಪ್ಯಾರಾಗ್ಲೈಡರ್‌ಗಳನ್ನು ಬಳಸಿ ನೆಲ, ಸಮುದ್ರ ಮತ್ತು ವಾಯುಮಾರ್ಗದಲ್ಲಿ ಇಸ್ರೇಲ್‌ಗೆ ಪ್ರವೇಶಿಸಿದ ಗಾಜಾ ಉಗ್ರಗಾಮಿಗಳ ವಿರುದ್ಧ ಹೋರಾಡುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.


ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, “ಇಸ್ರೇಲ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳು ಸೂಚಿಸಿದಂತೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ವೀಕ್ಷಿಸಲು ವಿನಂತಿಸಲಾಗಿದೆ.

ಇದನ್ನೂ ಓದಿ: ಇಸ್ರೇಲ್ ಮೇಲೆ ಹಮಾಸ್ ಉಗ್ರರಿಂದ ದಾಳಿ: ಸದ್ಯಕ್ಕೆ ಕರಾವಳಿಯ ಜನರು ಸೇಫ್

ದಯವಿಟ್ಟು ಜಾಗರೂಕರಾಗಿರಿ, ಅನಗತ್ಯ ಓಡಾಟಗಳು  ಬೇಡ,  ಸುರಕ್ಷತಾ ಆಶ್ರಯಗಳ ಹತ್ತಿರ ಇರಿಎಂದು ಅದು ಹೇಳಿದೆ.

ಇದು ಪ್ಯಾರಾಗ್ಲೈಡರ್‌ಗಳ ಮೂಲಕ, ಸಮುದ್ರದ ಮೂಲಕ ಮತ್ತು ನೆಲದ ಮೂಲಕ ನಡೆದ ಸಂಯೋಜಿತ ನೆಲದ ದಾಳಿಯಾಗಿದೆ ಎಂದು ಇಸ್ರೇಲ್ ಸೇನಾ ವಕ್ತಾರ ರಿಚರ್ಡ್ ಹೆಕ್ಟ್ ಸುದ್ದಿಗಾರರಿಗೆ ತಿಳಿಸಿದರು. “ಇದೀಗ ನಾವು ಹೋರಾಡುತ್ತಿದ್ದೇವೆ. ನಾವು ಗಾಜಾ ಪಟ್ಟಿಯ ಸುತ್ತಲಿನ ಕೆಲವು ಸ್ಥಳಗಳಲ್ಲಿ ಹೋರಾಡುತ್ತಿದ್ದೇವೆ ನಮ್ಮ ಪಡೆಗಳು ಈಗ ನೆಲದ ಮೇಲೆ ಹೋರಾಡುತ್ತಿವೆ” ಎಂದು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 5:27 pm, Sat, 7 October 23