AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ದುರ್ಗಮ ಕೋಟೆ ನಮ್ಮ ದೇಶದಲ್ಲಿದೆ! ಎಲ್ಲಿದೆ ಗೊತ್ತಾ, ಇಲ್ಲಿಗೆ ಹೋಗುವುದಾದರೂ ಹೇಗೆ, ಇದನ್ನು ನಿರ್ಮಿಸಿದ್ದಾದರೂ ಯಾಕೆ?

Kalavantin Durg: ಬಹಳಷ್ಟು ಜನರು ಕೋಟೆ ಹತ್ತಿ-ಇಳಿಯುವಾಗ ಆಳವಾದ ಕಂದಕದಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಸಾಹಸಿಗಳು ಮಾತ್ರ ಈ ಕೋಟೆ ಇರುವ ಜಾಗಕ್ಕೆ ಹೋಗಬಹುದು. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಬಹಳ ಅಪಾಯಕಾರಿ ತಿಳಿದಿರಿ. ಪ್ರವಾಸಿಗರು ಸೂರ್ಯಾಸ್ತಕ್ಕೂ ಮುಂಚೆಯೇ ಈ ಕೋಟೆಯಿಂದ ಕೆಳಗಿಳಿಯುವುದು ಕ್ಷೇಮಕರ. ಇಲ್ಲಿಗೆ ಹೋಗಲು ಒಮ್ಮೆ ಯೋಚಿಸಿ/ ಯೋಜಿಸಿ.

ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ದುರ್ಗಮ ಕೋಟೆ ನಮ್ಮ ದೇಶದಲ್ಲಿದೆ! ಎಲ್ಲಿದೆ ಗೊತ್ತಾ, ಇಲ್ಲಿಗೆ ಹೋಗುವುದಾದರೂ ಹೇಗೆ, ಇದನ್ನು ನಿರ್ಮಿಸಿದ್ದಾದರೂ ಯಾಕೆ?
ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ದುರ್ಗಮ ಕೋಟೆ ನಮ್ಮ ದೇಶದಲ್ಲಿದೆ!
Follow us
ಸಾಧು ಶ್ರೀನಾಥ್​
|

Updated on: Oct 07, 2023 | 7:18 PM

ಕಳಾವಂತಿನ್ ದುರ್ಗ – Kalavantin Fort: ಮುಂಬೈ ಬಳಿಯ ಪಶ್ಚಿಮ ಘಟ್ಟಗಳಲ್ಲಿ (ಸಹ್ಯಾದ್ರಿ ತಪ್ಪಲು) Western Ghats near Mumbai ಸಮುದ್ರ ಮಟ್ಟದಿಂದ 701 ಮೀಟರ್ (2,300 ಅಡಿ) ಎತ್ತರದಲ್ಲಿದ್ದು ಇದು ವಿಶ್ವದ ಅತ್ಯಂತ ಅಪಾಯಕಾರಿ ಕೋಟೆ ಎನಿಸಿದೆ. ದಂತಕಥೆಯ ಪ್ರಕಾರ ಇದನ್ನು ರಾಣಿ ಕಳಾವಂತಿನ್ (Queen Kalavantin) ಗೌರವಾರ್ಥವಾಗಿ ನಿರ್ಮಿಸಲಾಗಿದೆ. ಚಿತ್ತಾಕರ್ಷಕ ಸೌಂದರ್ಯದ ಕೋಟೆ ಇದಾಗಿದೆ. ಕಿರಿದಾದ ಕಲ್ಲು ಮೆಟ್ಟಿಲುಗಳು, ಕಡಿದಾದ ಇಳಿಜಾರುಗಳು ಮತ್ತು ಯಾವುದೇ ಆಧಾರವಿಲ್ಲದೆ, ಒರಟಾದ ಕಡಿದಾದ ಕೋಟೆ ಇದಾಗಿದೆ. ಈ ಕೋಟೆ ಚಾರಣವು ಅಪಾಯಕಾರಿ ಆದರೆ ರೋಮಾಂಚನಕಾರಿಯಾಗಿದೆ. ಕಳಾವಂತಿನ್ ಕೋಟೆಯು ‘ಸ್ವರ್ಗಕ್ಕೆ ಏರಿ’ದಂತೆ ‘Climb to Heaven’ ಸರಿ ಎನಿಸುವಷ್ಟು ಪ್ರಸಿದ್ಧವಾಗಿದೆ. ಆದರೆ ಜಾಗ್ರತೆ… ಸ್ವಲ್ಪವೇ ಯಾಮಾರಿದರೂ ನರಕಸದೃಶ ಗ್ಯಾರಂಟಿ. ಆದರೂ ನೀವು ಗಮ್ಯ ತಲುಪಿದ ನಂತರ ಸುತ್ತುಮುತ್ತ ಕಣ್ಣು ಹಾಯಿಸಿದರೆ ನಿಮಗೆ ಸ್ವರ್ಗಕ್ಕೆ ತಲುಪಿದಂತಾಗುತ್ತದೆ. ರಾಯಗಢ ಜಿಲ್ಲೆಯಲ್ಲಿರುವ ಈ ಕೋಟೆಯ ಸುತ್ತಲೂ ಅನೇಕ ಅದ್ಭುತ ನೋಟಗಳನ್ನು ಕಾಣಬಹುದು.

ಕಳಾವಂತಿನ್ ದುರ್ಗ/ ಕೋಟೆ ಎಲ್ಲಿದೆ?

ಈ ಕೋಟೆ ಮುಂಬೈಯಿಂದ ಕೇವಲ 47 ಕಿಮೀ ದೂರದಲ್ಲಿದೆ. ಟ್ರೆಕ್ ಠಾಕೂರ್‌ವಾಡಿ ಗ್ರಾಮ ಸಮೀಪವಿದೆ. ಇಲ್ಲಿಗೆ ತಲುಪಲು ರೈಲಿನಲ್ಲಿ ಮುಂಬೈಯಿಂದ ಪನ್ವೆಲ್ ಗೆ ಹೋಗಬೇಕು. ಅಲ್ಲಿಂದ ಮುಂದೆ ಬಸ್‌ನಲ್ಲಿ ಹೋಗಬೇಕು. ಠಾಕೂರ್‌ವಾಡಿ ಗ್ರಾಮ ಸೇರಲು ನಿಮಗೆ ಒಂದು ಗಂಟೆ ತೆಗೆದುಕೊಳ್ಳುತ್ತದೆ.

ಬಹುಮನಿ ಸುಲ್ತಾನರ ಕಾಲದಲ್ಲಿ ಈ ಕೋಟೆಯನ್ನು ಪನ್ವೇಲ್‌ ಹಾಗು ಕಲ್ಯಾಣ್‌ ಕೋಟೆಗಳ ಮೇಲೆ ಕಣ್ಣಿಡಲು ನಿರ್ಮಿಸಲಾಯಿತು. ಅಹಮದ್‌ ನಗರ ಸುಲ್ತಾನರ ಸೋಲಿನ ಕಾರಣ ಕ್ರಿಸ್ತ ಶಕ 1458 ರಲ್ಲಿ ಕೋಟೆಯನ್ನು ನಿರ್ಮಿಸಲಾಯಿತು. ಒಂದು ಕಾಲದಲ್ಲಿ ಮುರಂಜನ್‌ ಕೋಟೆ ಎಂದು ಕರೆಯಲಾಗುತ್ತಿತ್ತು. ಕಾಲಾನಂತರ ತನ್ನ ಹೆಸರನ್ನು ಬದಲಾಯಿಸಿಕೊಂಡಿತು. ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಆಳ್ವಿಕೆಯ ಸಮಯದಲ್ಲಿ ಕೋಟೆಯ ಹೆಸರು ಮರುನಾಮಕರಣ ಮಾಡಿದರು. ಕೋಟೆಗೆ ರಾಣಿ ಕಳಾವಂತಿಯ ಹೆಸರನ್ನು ನೀಡಿದರು.

ಕಳಾವಂತಿನ್ ದುರ್ಗದಿಂದ ಇಳಿಯುವಾಗ ಒಮ್ಮೆ ಕೆಳಕ್ಕೆ ದೃಷ್ಟಿ ಹಾಯಿಸಿದರೆ ಎದೆ ಝಲ್‌ ಝಲ್!

ಬಹಳಷ್ಟು ಜನರು ಕೋಟೆ ಹತ್ತಿ-ಇಳಿಯುವಾಗ ಆಳವಾದ ಕಂದಕದಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಸಾಹಸಿಗಳು ಮಾತ್ರ ಈ ಕೋಟೆ ಇರುವ ಜಾಗಕ್ಕೆ ಹೋಗಬಹುದು. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಬಹಳ ಅಪಾಯಕಾರಿ ತಿಳಿದಿರಿ. ಏಕೆಂದರೆ ಇಲ್ಲಿನ ಮೆಟ್ಟಿಲುಗಳು ಜಾರುವ ಅನುಭವ ನೀಡುತ್ತದೆ. ಪ್ರವಾಸಿಗರು ಸೂರ್ಯಾಸ್ತಕ್ಕೂ ಮುಂಚೆಯೇ ಈ ಕೋಟೆಯಿಂದ ಕೆಳಗಿಳಿಯುವುದು ಕ್ಷೇಮಕರ. ಏಕೆಂದರೆ ಸಂಜೆಯ ಹೊತ್ತಿಗೆ ಇಲ್ಲಿಂದ ಹಿಂತಿರುಗುವುದು ಬಹುತೇಕ ಅಸಾಧ್ಯ. ಹಾಗಾಗಿ ಹಗಲು ಹೊತ್ತಿನಲ್ಲಿ ಮಾತ್ರ ಈ ಚಾರಣವನ್ನು ಮಾಡಬಹುದು.

ಈ ಕೋಟೆ ಬಹಳ ಅಪಾಯಕಾರಿಯಾಗಿದ್ದು, ಕೋಟೆಯೇರಲು ಮೆಟ್ಟಿಲುಗಳು ಮಾತ್ರವೇ ಇದೆ. ಆಧಾರಕ್ಕೆ ಯಾವುದೇ ರೇಲಿಂಗ್ ಅಥವಾ ಹಗ್ಗ ಇರುವುದಿಲ್ಲ. ಇಳಿಯುವಾಗ… ಕೆಳಕ್ಕೆ ಒಮ್ಮೆ ದೃಷ್ಟಿ ಹಾಯಿಸಿದರೆ ಎದೆ ಝಲ್‌ ಝಲ್! ಎನ್ನುವ ಅನುಭವ. ಇಲ್ಲಿಗೆ ಹೋಗಲು ಒಮ್ಮೆ ಯೋಚಿಸಿ/ ಯೋಜಿಸಿ.

ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ