ಸ್ವಾತಂತ್ರ್ಯ ದಿನದಂದು ಘೋಷಿಸಲಾದ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಿದ್ಧತೆಗಳನ್ನು ಪರಿಶೀಲಿಸಿದ ಮೋದಿ
ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯ ಆವರಣದಿಂದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮೋದಿ ಅವರು, "ಐದು ವರ್ಷಗಳಲ್ಲಿ 13.5 ಕೋಟಿ ಬಡವರು ಬಡತನದಿಂದ ಹೊರಬಂದು ನವ ಮಧ್ಯಮ, ಮಧ್ಯಮ ವರ್ಗಗಳ ಭಾಗವಾಗಿದ್ದಾರೆ. ಸರ್ಕಾರದ ಪ್ರತಿ ಕ್ಷಣ, ಪ್ರತಿ ಕ್ಷಣ ರೂಪಾಯಿಯು ನಾಗರಿಕರ ಕಲ್ಯಾಣದತ್ತ ಸಾಗುತ್ತಿದೆ. ಸರ್ಕಾರ ಮತ್ತು ನಾಗರಿಕರು 'ರಾಷ್ಟ್ರದ ಮೊದಲು' ಎಂಬ ಮನೋಭಾವದೊಂದಿಗೆ ಒಂದಾಗಿದ್ದಾರೆ ಎಂದು ಹೇಳಿದ್ದರು.
ದೆಹಲಿ ಅಕ್ಟೋಬರ್ 7: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಶನಿವಾರ) ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದು (Independence Day) ಮಾಡಿದ ಘೋಷಣೆಗಳನ್ನು ಕಾರ್ಯಗತಗೊಳಿಸಲು ಸಿದ್ಧತೆಗಳನ್ನು ಪರಿಶೀಲಿಸಲು ಸಭೆ ನಡೆಸಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ವಸತಿಗಾಗಿ ಕೈಗೆಟುಕುವ ಸಾಲದ ಯೋಜನೆಯ ಅನುಷ್ಠಾನ, ಮನೆಗಳಿಗೆ ಸೌರಶಕ್ತಿಯನ್ನು ಖಾತ್ರಿಪಡಿಸುವ ಯೋಜನೆಯ ಅನುಷ್ಠಾನವನ್ನು ಪರಿಶೀಲಿಸಲಾಗಿದೆ.
ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯ ಆವರಣದಿಂದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮೋದಿ ಅವರು, “ಐದು ವರ್ಷಗಳಲ್ಲಿ 13.5 ಕೋಟಿ ಬಡವರು ಬಡತನದಿಂದ ಹೊರಬಂದು ನವ ಮಧ್ಯಮ, ಮಧ್ಯಮ ವರ್ಗಗಳ ಭಾಗವಾಗಿದ್ದಾರೆ. ಸರ್ಕಾರದ ಪ್ರತಿ ಕ್ಷಣ, ಪ್ರತಿ ಕ್ಷಣ ರೂಪಾಯಿಯು ನಾಗರಿಕರ ಕಲ್ಯಾಣದತ್ತ ಸಾಗುತ್ತಿದೆ. ಸರ್ಕಾರ ಮತ್ತು ನಾಗರಿಕರು ‘ರಾಷ್ಟ್ರದ ಮೊದಲು’ ಎಂಬ ಮನೋಭಾವದೊಂದಿಗೆ ಒಂದಾಗಿದ್ದಾರೆ ಎಂದು ಹೇಳಿದ್ದರು.
PM Narendra Modi holds an important meeting to review announcements made in his Red Fort speech. In his Independence Day speech, PM had mentioned about ensuring affordable credit for poor and middle-class housing. In line with this announcement, PM Modi reviewed the preparations… pic.twitter.com/I30ZSlJAkx
— ANI (@ANI) October 7, 2023
ಪ್ರಧಾನಿ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಪಿ ಕೆ ಮಿಶ್ರಾ ಮತ್ತು ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಆಗಸ್ಟ್ 15ರಂದು ಮೋದಿ ಭಾಷಣದಲ್ಲಿ ಹೇಳಿದ್ದೇನು?
ತಮ್ಮ ಸರ್ಕಾರದ ದೃಷ್ಟಿಕೋನ ಮತ್ತು ಆರ್ಥಿಕತೆಯ ಮೇಲೆ ಪ್ರಭಾವದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಪ್ರಸ್ತುತ ಸುಧಾರಣೆಗಳು ಮತ್ತು ನೀತಿಗಳ ಫಲಿತಾಂಶಗಳು ಮುಂದಿನ 1,000 ವರ್ಷಗಳಲ್ಲಿ ಗೋಚರಿಸುತ್ತವೆ. ಈ ಅವಧಿಯಲ್ಲಿ ನಮ್ಮ ನಿರ್ಧಾರಗಳು ಮತ್ತು ತ್ಯಾಗಗಳು ಮುಂದಿನ 1,000 ವರ್ಷಗಳ ಮೇಲೆ ಪರಿಣಾಮ ಬೀರುತ್ತವೆ. ಭಾರತವು ಹೊಸ ಆತ್ಮವಿಶ್ವಾಸ ಮತ್ತು ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ಜನಸಂಖ್ಯಾಶಾಸ್ತ್ರ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯು ದೇಶದ ಎಲ್ಲಾ ಕನಸುಗಳನ್ನು ನನಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ.
2047 ರಲ್ಲಿ ಭಾರತವು ತನ್ನ ಸ್ವಾತಂತ್ರ್ಯದ 100 ವರ್ಷಗಳನ್ನು ಗುರುತಿಸಿದಾಗ ಅದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ನನಗೆ ವಿಶ್ವಾಸವಿದೆ. ನನ್ನ ದೇಶದ ಸಾಮರ್ಥ್ಯ ಮತ್ತು ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ನಾನು ಇದನ್ನು ಹೇಳುತ್ತೇನೆ. ಭಾರತೀಯ ಸ್ಟಾರ್ಟ್‌ಅಪ್‌ಗಳು ಮತ್ತು ಯುವಕರ ಶಕ್ತಿಯ ಬಗ್ಗೆ ಮಾತನಾಡಿದ್ದ ಮೋದಿ”ಟೈರ್ 2 ಮತ್ತು ಟೈರ್ 3 ನಗರಗಳು ಸ್ಟಾರ್ಟ್‌ಅಪ್‌ಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಭಾವ ಬೀರುತ್ತಿವೆ. ಜಗತ್ತು ತಂತ್ರಜ್ಞಾನ-ಚಾಲಿತವಾಗಿದೆ. ತಂತ್ರಜ್ಞಾನದಲ್ಲಿನ ತನ್ನ ಪ್ರತಿಭೆಯೊಂದಿಗೆ, ಭಾರತವು ಜಾಗತಿಕ ವೇದಿಕೆಯಲ್ಲಿ ಹೊಸ ಪಾತ್ರ ಮತ್ತು ಪ್ರಭಾವವನ್ನು ಹೊಂದಿರುತ್ತದೆ. ಭಾರತದ ಅತಿದೊಡ್ಡ ಸಾಮರ್ಥ್ಯವು ನಂಬಿಕೆಯಾಗಿದೆ. ಸರ್ಕಾರದ ಮೇಲಿನ ಜನರ ನಂಬಿಕೆ, ದೇಶದ ಉಜ್ವಲ ಭವಿಷ್ಯದಲ್ಲಿ ಮತ್ತು ಭಾರತದ ಮೇಲೆ ವಿಶ್ವದ ನಂಬಿಕೆ ಆಗಿದೆ.
ಸರ್ಕಾರದ ಉಪಕ್ರಮಗಳು ಮತ್ತು ನೀತಿಗಳ ಬಗ್ಗೆ ಮಾತನಾಡಿದ ಪ್ರಧಾನಿ, ಭ್ರಷ್ಟಾಚಾರವನ್ನು ದೂರ ಇಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಸರ್ಕಾರದ ಪ್ರತಿ ಕ್ಷಣ, ಪ್ರತಿ ರೂಪಾಯಿಯು ನಾಗರಿಕರ ಕಲ್ಯಾಣಕ್ಕೆ ಹೋಗುತ್ತಿದೆ. ಸರ್ಕಾರ ಮತ್ತು ನಾಗರಿಕರು ಒಗ್ಗಟ್ಟಿನಿಂದ ಇದ್ದಾರೆ. ನಾವು ಬಲವಾದ ಆರ್ಥಿಕತೆಯನ್ನು ನಿರ್ಮಿಸಿದ್ದೇವೆ ಮತ್ತು ಸೋರಿಕೆಯನ್ನು ನಿಲ್ಲಿಸಿದ್ದೇವೆ. ನನ್ನ ಸರ್ಕಾರವು ಕಲ್ಯಾಣ ಯೋಜನೆಗಳ 10 ಕೋಟಿ ನಕಲಿ ಫಲಾನುಭವಿಗಳನ್ನು ಹೊರಹಾಕಿತು. ಅಕ್ರಮ ಆಸ್ತಿ ವಶಪಡಿಸಿಕೊಳ್ಳುವಿಕೆಯು 20 ಪಟ್ಟು ಹೆಚ್ಚಾಗಿದೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಶತಕ ಸಾಧನೆ; ಅ.10 ರಂದು ಸ್ಪರ್ಧಿಗಳೊಂದಿಗೆ ಮೋದಿ ಸಂವಾದ
ಭಾರತವನ್ನು ಬೆಳವಣಿಗೆ, ನಾವೀನ್ಯತೆ ಮತ್ತು ಅಂತರ್ಗತ ಪ್ರಗತಿಯ ಹಾದಿಯಲ್ಲಿ ಮುನ್ನಡೆಸಲು ತಮ್ಮ ಸರ್ಕಾರ ಸಮರ್ಪಿತವಾಗಿದೆ.2014 ರಲ್ಲಿ, ನಾವು ಅಧಿಕಾರವನ್ನು ಸ್ವೀಕರಿಸಿದಾಗ, ಜಾಗತಿಕ ಆರ್ಥಿಕ ಶ್ರೇಣಿಯಲ್ಲಿ ಭಾರತವು 10 ನೇ ಸ್ಥಾನದಲ್ಲಿತ್ತು. ಇಂದು, 140 ಕೋಟಿ ಭಾರತೀಯರ ಸಾಮೂಹಿಕ ಪ್ರಯತ್ನಗಳ ಮೂಲಕ ನಾವು ಐದನೇ ಸ್ಥಾನಕ್ಕೆ ಏರಿದ್ದೇವೆ. ಈ ಸಾಧನೆಯು ಆಕಸ್ಮಿಕವಾಗಿ ಸಂಭವಿಸಲಿಲ್ಲ. ಜಾಗತಿಕ ಮಟ್ಟದಲ್ಲಿ ಭಾರತದ ಸಾಧನೆಯ ಕುರಿತು ಮಾತನಾಡಿದ ಮೋದಿ, ವಿಶ್ವವು ಭಾರತದ ಸಾಮರ್ಥ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಜನರು ಪರಿಸ್ಥಿತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ