Ganga Dolphin: ಗಂಗಾನದಿಯ ಡಾಲ್ಫಿನ್ಗೆ ಇನ್ನು ‘ಉತ್ತರ ಪ್ರದೇಶದ ಜಲಚರ’ ಸ್ಥಾನಮಾನದ ಯೋಗ -ಸಿಎಂ ಆದಿತ್ಯನಾಥ್ ಘೋಷಣೆ
Gangetic Dolphins - ಗಂಗಾ, ಯಮುನಾ, ಚಂಬಲ್, ಘಾಘ್ರಾ, ರಾಪ್ತಿ ಮತ್ತು ಗೆರುವಾ ಮುಂತಾದ ನದಿಗಳಲ್ಲಿ ಗಂಗಾ ಡಾಲ್ಫಿನ್‌ಗಳು ಕಂಡುಬರುತ್ತವೆ. ಉತ್ತರ ಪ್ರದೇಶದಲ್ಲಿ ಅವುಗಳ ಸಂಖ್ಯೆ ಅಂದಾಜು 2,000 ಇವೆ. ಇವು ನದಿ ತಟದ ಕೊಳಗಳು ಮತ್ತು ಸ್ವತಃ ನದಿಗಳ ಶುದ್ಧತೆಯನ್ನು ಕಾಪಾಡುತ್ತದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Chief minister Yogi Adityanath) ಗಂಗಾನದಿ ಡಾಲ್ಫಿನ್ (Ganga Dolphin) ಅನ್ನು ಉತ್ತರ ಪ್ರದೇಶದ ರಾಜ್ಯ ಜಲಚರ (aquatic animal) ಎಂದು ಘೋಷಿಸಿದ್ದಾರೆ. ಇವು ಗಂಗಾ, ಯಮುನಾ, ಚಂಬಲ್, ಘಾಘ್ರಾ, ರಾಪ್ತಿ ಮತ್ತು ಗೆರುವಾ ಮುಂತಾದ ನದಿಗಳಲ್ಲಿ ಗಂಗಾ ಡಾಲ್ಫಿನ್‌ಗಳು ಕಂಡುಬರುತ್ತವೆ. ಇವು ನದಿ ತಟದ ಕೊಳಗಳು ಮತ್ತು ಸ್ವತಃ ನದಿಗಳ ಶುದ್ಧತೆಯನ್ನು ಮತ್ತು ಪರಿಸರವನ್ನು ಸ್ವಚ್ಛವಾಗಿಡಲು ಕಾಪಾಡುತ್ತದೆ. ಇದಕ್ಕಾಗಿ ನಾವು ಅವುಗಳಿಗೆ ಕೃತಜ್ಞರಾಗಿರಬೇಕು ಎಂದು ಅವರು ಪಿಲಿಭಿತ್‌ನಲ್ಲಿ ನಡೆದ ಅರಣ್ಯ ಇಲಾಖೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.
ವನ್ಯಜೀವಿಗಳೊಂದಿಗೆ ಹೇಗೆ ಸಂವಹನ ನಡೆಸಬೇಕು ಎಂಬುದರ ಕುರಿತು ಸ್ಥಳೀಯ ನಿವಾಸಿಗಳಿಗೆ ತರಬೇತಿ ನೀಡುವ ಪ್ರಾಮುಖ್ಯತೆಯನ್ನು ಆದಿತ್ಯನಾಥ್ ಇದೇ ಸಂದರ್ಭದಲ್ಲಿ ಎತ್ತಿ ತೋರಿಸಿದರು. ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಪರ್ಕ ಹೊಂದಿದ ಗ್ರಾಮಗಳ ವ್ಯಕ್ತಿಗಳಿಗೆ ಮಾರ್ಗದರ್ಶಕರಾಗಿ ತರಬೇತಿ ನೀಡುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಸಮುದಾಯದೊಳಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದಾರೆ.
ಪಿಲಿಭಿತ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೊದಲ ಜಾಗತಿಕ ಪ್ರಶಸ್ತಿ ಲಭಿಸಿರುವುದಕ್ಕೆ ಅರಣ್ಯಾಧಿಕಾರಿಗಳನ್ನು ಸಿಎಂ ಅಭಿನಂದಿಸಿದರು. 2014 ರಲ್ಲಿ, ಇಲ್ಲಿ 25 ಹುಲಿಗಳಿದ್ದವು ಮತ್ತು 2022 ರಲ್ಲಿ ಸಂಖ್ಯೆ 65 ಕ್ಕೆ ಏರಿತು. “ಪ್ರವಾಸಿಗರು ಮತ್ತು ಸ್ಥಳೀಯ ನಿವಾಸಿಗಳು ಪ್ಲಾಸ್ಟಿಕ್ ಬಳಕೆಯಿಂದ ದೂರವಿರುವುದು ಮುಖ್ಯವಾಗಿದೆ, ಏಕೆಂದರೆ ಇದು ನಮ್ಮ ನೀರು ಮತ್ತು ಪ್ರಕೃತಿಗೆ ಹಾನಿ ಮಾಡುತ್ತದೆ” ಎಂದು ಅವರು ಒತ್ತಿ ಹೇಳಿದರು.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




