ಹೆಲ್ಮೆಟ್‌ನೊಳಗೆ ಸುರುಳಿ ಸುತ್ತಿಕೊಂಡ ಕುಳಿತ ನಾಗಪ್ಪ! ಹೆಲ್ಮೆಟ್ ಹಾಕುವ ಮುನ್ನ ಎಚ್ಚರ
ಕೇರಳದ ತ್ರಿಶೂರ್ನಲ್ಲಿ ಸೋಜನ್ ಎಂಬ ವ್ಯಕ್ತಿಯ ಸ್ಕೂಟರ್ನಲ್ಲಿ ಹೆಲ್ಮೆಟ್ ಇಟ್ಟು ಕಚೇರಿ ಒಳಗೆ ಹೋಗಿದ್ದಾರೆ. ಸಂಜೆ ಕಚೇರಿ ಕೆಲಸ ಮುಗಿಸಿ ಹೊರಗೆ ಬರಬೇಕಾದರೆ ಅವರ ಹೆಲ್ಮೆಟ್ನ ಒಳಗೆ ಏನೋ ಹೋಗಿದೆ ಎಂದು ಭಾವಿಸಿದ ಸೋಜನ್, ಹಲ್ಮೆಟ್ನ್ನು ನೋಡುತ್ತಾರೆ. ಆಗಾ ಅದರ ಒಳಗೆ ಹಾವು ಹೋಗಿದೆ ಎಂದು ಗೊತ್ತಾ ತಕ್ಷಣ ಉರಗ ತಜ್ಞರಿಗೆ ತಿಳಿಸುತ್ತಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ಲಿಜೋ ಹೆಲ್ಮೆಟ್ನ್ನು ಪರಿಶೀಲಿಸಿದ್ದಾರೆ.
ತ್ರಿಶೂರ್, ಅ.7: ಹೆಲ್ಮೆಟ್ ಹಾಕುವ ಮುನ್ನ ಒಂದು ಬಾರಿ ಅದನ್ನು ಪರಿಶೀಲನೆ ಮಾಡಿ. ಯಾಕೆಂದರೆ ಹೆಲ್ಮೆಟ್ ಒಳಗೆ ಹಾವುಗಳು ಅಡಗಿ ಕುಳಿತಿರುತ್ತದೆ. ಇಂತಹ ಅನೇಕ ಘಟನೆಗಳು ಕೆಲವು ಕಡೆ ನಡೆದಿರುವುದನ್ನು ಕಾಣಬಹುದು. ಯಾವುದೋ ಆಲೋಚನೆಯಲ್ಲಿ ಹೆಲ್ಮೆಟ್ನ್ನು ಗಾಡಿಯಲ್ಲಿ ಇಟ್ಟು ನಮ್ಮ ಕೆಲಸಕ್ಕೆ ಹೋಗುತ್ತವೆ. ಮತ್ತೆ ವಾಪಸ್ ಬರುವಾಗ ಒಂದು ಬಾರಿ ಹೆಲ್ಮೆಟ್ನ್ನು ಪರಿಶೀಲನೆ ಮಾಡಿ. ಇಲ್ಲದಿದ್ದರೆ ಅಪಾಯ ಖಂಡಿತ. ಹೌದು ಇಂತಹದೇ ಒಂದು ಘಟನೆ ಕೇರಳದ ತ್ರಿಶೂರ್ನಲ್ಲಿ ನಡೆದಿದೆ. ಸೋಜನ್ ಎಂಬ ವ್ಯಕ್ತಿ ತನ್ನ ಹೆಲ್ಮೆಟ್ ಒಳಗೆ ಹಾವು ಹೋಗಿರುವುದನ್ನು ಪತ್ತೆ ಮಾಡಿದ್ದಾರೆ.
ಸ್ಕೂಟರ್ನಲ್ಲಿ ಹೆಲ್ಮೆಟ್ ಇಟ್ಟು ಕಚೇರಿ ಒಳಗೆ ಹೋಗಿದ್ದಾರೆ. ಸಂಜೆ ಕಚೇರಿ ಕೆಲಸ ಮುಗಿಸಿ ಹೊರಗೆ ಬರಬೇಕಾದರೆ ಅವರ ಹೆಲ್ಮೆಟ್ನ ಒಳಗೆ ಏನೋ ಹೋಗಿದೆ ಎಂದು ಭಾವಿಸಿದ ಸೋಜನ್, ಹಲ್ಮೆಟ್ನ್ನು ನೋಡುತ್ತಾರೆ. ಆಗಾ ಅದರ ಒಳಗೆ ಹಾವು ಹೋಗಿದೆ ಎಂದು ಗೊತ್ತಾ ತಕ್ಷಣ ಉರಗ ತಜ್ಞರಿಗೆ ತಿಳಿಸುತ್ತಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ಲಿಜೋ ಹೆಲ್ಮೆಟ್ನ್ನು ಪರಿಶೀಲಿಸಿದ್ದಾರೆ. ಆಗಾ ಅದರ ಒಳಗೆ ನಾಗರ ಹಾವಿನ ಮರಿಯನ್ನು ಹೋಗಿರುವುದನ್ನು ಪತ್ತೆ ಮಾಡಿ, ಹೊರಗೆ ತೆಗೆದಿದ್ದಾರೆ.
ಇದನ್ನೂ ಓದಿ: ಹಾವೇರಿ: ಸರ್ಕಾರಿ ಶಾಲೆಯ ಸ್ಮಾರ್ಟ್ ಕ್ಲಾಸ್ನಲ್ಲಿ ನಾಗರ ಹಾವು ಪ್ರತ್ಯಕ್ಷ
ನಾಗರ ಹಾವಿನ ಸಣ್ಣ ಮರಿಯಾಗಿತ್ತು. ಆದರೆ ಇದರ ಕಡಿತ ದೊಡ್ಡ ಹಾವಿಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳಿದ್ದಾರೆ. ಇದು ದೊಡ್ಡ ಗಾತ್ರದ ನಾಗರಹಾವುಗಳಿಂತ ಹೆಚ್ಚು ವಿಷವನ್ನು ಉತ್ಪಾದಿಸಿಕೊಂಡಿರುತ್ತದೆ ಎಂದು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Sat, 7 October 23