ಹಾವೇರಿ: ಸರ್ಕಾರಿ ಶಾಲೆಯ ಸ್ಮಾರ್ಟ್ ಕ್ಲಾಸ್ನಲ್ಲಿ ನಾಗರ ಹಾವು ಪ್ರತ್ಯಕ್ಷ
ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಹಿರಿಯ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಗೆ ನಾಗರಹಾವು ಬಂದಿದ್ದು, ಶಾಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಹಾವೇರಿ: ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಹಿರಿಯ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಗೆ ನಾಗರಹಾವು ಬಂದಿದ್ದು, ಶಾಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಶಾಲೆಯ ಸ್ಮಾರ್ಟ್ ಕ್ಲಾಸ್ನ ಕೋಣೆಯಲ್ಲಿ ನಾಗರಹಾವು ಅವಿತು ಕೂತಿದ್ದು, ನಾಗರಹಾವು ಕಂಡು ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ಗಾಬರಿಯಿಂದ ಹೊರಗೋಡಿ ಬಂದಿದ್ದಾರೆ. ಕೂಡಲೆ ನೆಗಳೂರು ಗ್ರಾಮದ ಉರಗ ತಜ್ಞ ಸಿಕಂದರ ಮುಲ್ಲಾರನ್ನು ಕರೆಸಿದ್ದಾರೆ. ಶಾಲೆಗೆ ಬಂದ ಉರಗತಜ್ಞ ಸಿಕಂದರ ಹಾವನ್ನು ರಕ್ಷಣೆ ಮಾಡಿದ್ದಾರೆ. ನಾಗರಹಾವು ಸುಮಾರು ಸುಮಾರು ಏಳ ರಿಂದ ಎಂಟು ಅಡಿ ಉದ್ದವಿದ್ದು, ಹಾವು ರಕ್ಷಿಸಿ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.
ಶಾಲೆಯ ಅಡುಗೆ ಕೋಣೆಯಲ್ಲಿ ಕಾಣಿಸಿಕೊಂಡ ನಾಗರಹಾವು
ಉತ್ತರಕನ್ನಡ: ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಯಲ್ಲಿ ನಾಗರಹಾವೊಂದು ಕಾಣಿಸಿಕೊಂಡಿದೆ. ನಾಗರಹಾವು ಕಂಡು ಮಕ್ಕಳು ಭಯಭೀತರಾಗಿದ್ದರು. ಹಾವು ಕಂಡು ಗ್ರಾಮ ಪಂಚಾಯತಿ ಸದಸ್ಯ ಸುಭಾಷ್ ನಾಯ್ಕ ಕೂಡಲೆ ಉರಗಪ್ರೇಮಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಉರಗಪ್ರೇಮಿ ಮಹೇಶ್ ನಾಯ್ಕರಿಂದ ಹಾವಿನ ರಕ್ಷಣೆ ಮಾಡಲಾಗಿದೆ.