ಪ್ರಧಾನಿ ಮೋದಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಂದು ಅಧಿಕಾರಕ್ಕೇರುವಾಗ ಅವರ ತಾಯಿ ಹೇಳಿದ್ದ ಕಿವಿಮಾತೇನು?

ಈ ಅಕ್ಟೋಬರ್ 7 ಪ್ರಧಾನಿ ನರೇಂದ್ರ ಮೋದಿ(Narendra Modi) ಯವರ ಜೀವನದಲ್ಲಿ ಒಂದು ಮಹತ್ವದ ದಿನ. 2001 ರ ಈ ದಿನದಂದು ಅವರು ಗುಜರಾತ್ ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡರು. ಅಂದಿನಿಂದ ಅವರು ಮುಖ್ಯಮಂತ್ರಿಯಾಗಿ ಮತ್ತು ನಂತರ ದೇಶದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.  ಇಂದಿಗೆ ಉನ್ನತ ಹುದ್ದೆಯಲ್ಲಿ 25 ವರ್ಷಗಳು. ಯಶಸ್ಸಿನ ಶಿಖರವನ್ನು ತಲುಪುವುದು ಅತ್ಯಂತ ಕಷ್ಟ.ಅಲ್ಲಿಯೇ ಉಳಿಯುವುದು ಇನ್ನೂ ಹೆಚ್ಚು ಸವಾಲಿನ ಕೆಲಸ

ಪ್ರಧಾನಿ ಮೋದಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಂದು ಅಧಿಕಾರಕ್ಕೇರುವಾಗ ಅವರ ತಾಯಿ ಹೇಳಿದ್ದ ಕಿವಿಮಾತೇನು?
ನರೇಂದ್ರ ಮೋದಿ

Updated on: Oct 07, 2025 | 11:04 AM

ನವದೆಹಲಿ ಅಕ್ಟೋಬರ್ 07: ಈ ಅಕ್ಟೋಬರ್ 7 ಪ್ರಧಾನಿ ನರೇಂದ್ರ ಮೋದಿ(Narendra Modi) ಯವರ ಜೀವನದಲ್ಲಿ ಒಂದು ಮಹತ್ವದ ದಿನ. 2001 ರ ಈ ದಿನದಂದು ಅವರು ಗುಜರಾತ್ ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡರು. ಅಂದಿನಿಂದ ಅವರು ಮುಖ್ಯಮಂತ್ರಿಯಾಗಿ ಮತ್ತು ನಂತರ ದೇಶದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.  ಇಂದಿಗೆ ಉನ್ನತ ಹುದ್ದೆಯಲ್ಲಿ 25 ವರ್ಷಗಳು. ಯಶಸ್ಸಿನ ಶಿಖರವನ್ನು ತಲುಪುವುದು ಅತ್ಯಂತ ಕಷ್ಟ.ಅಲ್ಲಿಯೇ ಉಳಿಯುವುದು ಇನ್ನೂ ಹೆಚ್ಚು ಸವಾಲಿನ ಕೆಲಸ.

ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ಯಶಸ್ಸಿನ ಬಗ್ಗೆ ಹೇಳುವುದಾದರೆ, ಅಕ್ಟೋಬರ್ 7, 2025 ರಂದು ಅವರು ಅಧಿಕಾರದ ಶಿಖರದಲ್ಲಿ 25 ವರ್ಷಗಳನ್ನು ಪೂರೈಸುತ್ತಾರೆ ಎಂಬುದು ಆಶ್ಚರ್ಯಕರವಾಗಿದೆ.

ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದಾಗ ಅವರ ತಾಯಿ ಎರಡು ವಿಚಾರಗಳನ್ನು ಅವರಿಗೆ ಹೇಳಿದ್ದರಂತೆ. ನನಗೆ ನಿನ್ನ ಕೆಲಸದ ಬಗ್ಗೆ ಹೆಚ್ಚಿನದೇನೂ ತಿಳಿದಿಲ್ಲ, ಆದರೆ ಈ ಎರಡು ಮಾತು ನೆನಪಿಟ್ಟುಕೋ, ಮೊದಲನೆಯದು ನೀನು ಸದಾ ಬಡವರಿಗಾಗಿ ಕೆಲಸ ಮಾಡು, ಎರಡನೆಯದಾಗಿ ಲಂಚ ತೆಗೆದುಕೊಳ್ಳಬೇಡವೆಂದು. ಅದೆರಡನ್ನೂ ಸಮರ್ಥವಾಗಿ ನಿರ್ವಹಿಸಿರುವ ತೃಪತಿ ನನಗಿದೆ ಎಂದರು.

ಅವರು ಅಕ್ಟೋಬರ್ 7, 2001 ರಂದು ಗುಜರಾತ್ ಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಂಡರು. ಅಂದಿನಿಂದ, ಅವರು ಎಂದಿಗೂ ಹಿಂತಿರುಗಿ ನೋಡಲಿಲ್ಲ. 2029 ರವರೆಗೆ ಅವರು ಭಾರತದ ಪ್ರಧಾನಿಯಾಗಿ ಉಳಿಯುವುದು ಖಚಿತ. ಹೀಗಾಗಿ, ಕನಿಷ್ಠ 28 ವರ್ಷಗಳ ಕಾಲ ಅಧಿಕಾರದ ಶಿಖರದಲ್ಲಿ ಉಳಿದಿರುವ ಅವರ ದಾಖಲೆಯನ್ನು ಬೇರೆ ಯಾವುದೇ ರಾಜಕಾರಣಿ ಮುರಿಯುವ ಸಾಧ್ಯತೆಯಿಲ್ಲ.

ಪ್ರಧಾನಿ ಮೋದಿ ಪೋಸ್ಟ್​

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಒಬ್ಬ ರಾಜಕಾರಣಿಗೆ ಈ ಗೌರವವನ್ನು ಗಳಿಸುವುದು ಖಂಡಿತವಾಗಿಯೂ ಪಕ್ಷದ ಯಶಸ್ಸೇ ಆಗಿದೆ. ರಾಜಕೀಯಕ್ಕೆ ಪ್ರವೇಶಿಸುವ ಯಾರಾದರೂ ಮುಖ್ಯಮಂತ್ರಿ ಅಥವಾ ಪ್ರಧಾನಿಯಾಗುವ ಕನಸು ಕಾಣುತ್ತಾರೆ. ಆದರೆ ಎಲ್ಲರೂ ಸಫಲರಾಗಲು ಸಾಧ್ಯವಿಲ್ಲ.ವಿರೋಧ ಪಕ್ಷಗಳು ಎಷ್ಟೇ ದುಃಖಿಸಿದರೂ, ನರೇಂದ್ರ ಮೋದಿಯವರ ಆಳ್ವಿಕೆಯಲ್ಲಿ ಭಾರತದ ಪ್ರಾಬಲ್ಯದ ಬಗ್ಗೆ ಇಡೀ ಜಗತ್ತಿಗೆ ಮನವರಿಕೆಯಾಗಿದೆ ಎಂಬುದು ಸತ್ಯ.

ಮತ್ತಷ್ಟು ಓದಿ: ಬಿಹಾರದ ಯುವಕರಿಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್: 62000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ

ಭಾರತವು ವಿಶ್ವದ ಪ್ರಬಲ ಸಶಸ್ತ್ರ ಮಹಾಶಕ್ತಿಯಲ್ಲ, ಬದಲಾಗಿ ವಸುಧೈವ ಕುಟುಂಬಕಂ ಎಂಬ ಸರ್ವವ್ಯಾಪಿ ತತ್ವವನ್ನು ಹೊಂದಿರುವ ಅತಿದೊಡ್ಡ ಪ್ರಜಾಪ್ರಭುತ್ವ. ವೈವಿಧ್ಯತೆಯಲ್ಲಿ ಸಾಮರಸ್ಯವನ್ನು ಹೊಂದಿರುವ ದೇಶಕ್ಕೆ ನಾವು ಅತ್ಯುತ್ತಮ ಉದಾಹರಣೆ. ಪ್ರಧಾನಿ ಮೋದಿ ಎಕ್ಸ್​​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಮತ್ತೊಂದು ಪೋಸ್ಟ್​

2001 ರಲ್ಲಿ ಅಧಿಕಾರ ವಹಿಸಿಕೊಂಡ ದಿನದ ಚಿತ್ರವನ್ನು ಹಂಚಿಕೊಂಡ ಪ್ರಧಾನಿ, ಸಾರ್ವಜನಿಕ ಸೇವೆಯಲ್ಲಿನ ತಮ್ಮ ಪ್ರಯಾಣವನ್ನು ನೆನಪಿಸಿಕೊಳ್ಳುತ್ತಾ ಭಾರತದ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 2001 ರ ಈ ದಿನದಂದು, ನಾನು ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆ” ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.

ಇಷ್ಟು ವರ್ಷಗಳಿಂದ, ನಮ್ಮ ಜನರ ಜೀವನವನ್ನು ಸುಧಾರಿಸುವುದು ಮತ್ತು ನಮ್ಮೆಲ್ಲರನ್ನೂ ಪೋಷಿಸಿದ ಈ ಮಹಾನ್ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದು ನನ್ನ ನಿರಂತರ ಪ್ರಯತ್ನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತದ ಪ್ರಧಾನಿಯಾಗಿ ಆಯ್ಕೆಯಾಗುವ ಮೊದಲು, ಮೋದಿ 2001 ರಿಂದ 2014 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:58 am, Tue, 7 October 25