ದೇಶದ ಭವಿಷ್ಯದ ದೃಷ್ಟಿಯಿಂದ ಸಿಎಎ ಜಾರಿಗೊಳಿಸಲಾಗಿದೆ-ಪ್ರಧಾನಿ ಮೋದಿ

|

Updated on: Dec 22, 2019 | 3:40 PM

ದೆಹಲಿ: ರಾಮ್‌ಲೀಲಾ ಮೈದಾನದಲ್ಲಿ ಬಿಜೆಪಿಯ ‘ಧನ್ಯವಾದ ಱಲಿ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಈ ವೇಳೆ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮಾತನಾಡಿದ್ದಾರೆ. ಹಾಗೂ ಸಿಎಎ ಬಗ್ಗೆ ಗೊಂದಲ ಬೇಡ ಅದು ದೇಶದ ಒಳಿತಿಗಾಗಿ ಎಂದು ವಿವರಿಸಿದ್ದಾರೆ. ದೇಶದ ಭವಿಷ್ಯದ ದೃಷ್ಟಿಯಿಂದ ಸಿಎಎ ಜಾರಿಗೊಳಿಸಲಾಗಿದೆ: ದೇಶದ ಸಂಸತ್‌ಗೆ ಗೌರವ ಕೊಡುವುದನ್ನು ಕಲಿಯಬೇಕು. ಸಿಎಬಿಯನ್ನು ಎರಡೂ ಸದನಗಳಲ್ಲಿ ಪಾಸ್ ಮಾಡಲಾಗಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಸಿಎಎ ಜಾರಿಗೊಳಿಸಲಾಗಿದೆ. ಆದ್ರೆ ವಿಪಕ್ಷಗಳಿಂದ ಜನರನ್ನು […]

ದೇಶದ ಭವಿಷ್ಯದ ದೃಷ್ಟಿಯಿಂದ ಸಿಎಎ ಜಾರಿಗೊಳಿಸಲಾಗಿದೆ-ಪ್ರಧಾನಿ ಮೋದಿ
Follow us on

ದೆಹಲಿ: ರಾಮ್‌ಲೀಲಾ ಮೈದಾನದಲ್ಲಿ ಬಿಜೆಪಿಯ ‘ಧನ್ಯವಾದ ಱಲಿ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಈ ವೇಳೆ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮಾತನಾಡಿದ್ದಾರೆ. ಹಾಗೂ ಸಿಎಎ ಬಗ್ಗೆ ಗೊಂದಲ ಬೇಡ ಅದು ದೇಶದ ಒಳಿತಿಗಾಗಿ ಎಂದು ವಿವರಿಸಿದ್ದಾರೆ.

ದೇಶದ ಭವಿಷ್ಯದ ದೃಷ್ಟಿಯಿಂದ ಸಿಎಎ ಜಾರಿಗೊಳಿಸಲಾಗಿದೆ:
ದೇಶದ ಸಂಸತ್‌ಗೆ ಗೌರವ ಕೊಡುವುದನ್ನು ಕಲಿಯಬೇಕು. ಸಿಎಬಿಯನ್ನು ಎರಡೂ ಸದನಗಳಲ್ಲಿ ಪಾಸ್ ಮಾಡಲಾಗಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಸಿಎಎ ಜಾರಿಗೊಳಿಸಲಾಗಿದೆ. ಆದ್ರೆ ವಿಪಕ್ಷಗಳಿಂದ ಜನರನ್ನು ಪ್ರಚೋದಿಸುವಂಥ ಹೇಳಿಕೆಗಳು ದೇಶದ ಜನರ ದಾರಿ ತಪ್ಪಿಸುತ್ತಿವೆ. ನಾವು ದೇಶದ ಜನರಿಗೆ ಅಧಿಕಾರವನ್ನು ನೀಡುತ್ತಿದ್ದೇವೆ. ಆದ್ರೆ ನಾವು ಹಕ್ಕು ಕಿತ್ತುಕೊಳ್ಳುತ್ತಿದ್ದೇವೆಂದು ಸುಳ್ಳು ವದಂತಿ ಮಾಡಲಾಗುತ್ತಿದೆ.

ವಿಪಕ್ಷಗಳ ನಾಯಕರು ಸುಳ್ಳನ್ನು ಹರಡುತ್ತಿದ್ದಾರೆ ಈ ಸುಳ್ಳನ್ನು ದೇಶದ ಜನರು ಸ್ವೀಕರಿಸುವುದಿಲ್ಲ ಎಂದು ವಿಪಕ್ಷ ನಾಯಕರ ವಿರುದ್ಧ ಪ್ರಧಾನಿ ಮೋದಿ ಹರಿಹಾಯ್ದಿದ್ದಾರೆ. ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡಿದೆವು ಈ ವೇಳೆ ನಾವು ನಿಮ್ಮ ಜಾತಿಯನ್ನು ಪ್ರಶ್ನಿಸಿದ್ದೇವಾ? ಎಲ್ಲ ಬಡವರ ಮನೆಗೂ ಗ್ಯಾಸ್‌ ಸಂಪರ್ಕ ಕಲ್ಪಿಸಿದ್ದೇವೆ, ಆದ್ರೆ ವಿಪಕ್ಷಗಳು ಮುಸ್ಲಿಮರನ್ನು ಬೆದರಿಸಲು ಯತ್ನಿಸ್ತಿದ್ದಾರೆ ಎಂದು ಹೇಳಿದರು.

ಭಾರತದ ಮರ್ಯಾದೆಯನ್ನು ಕಳೆಯುವ ಪ್ರಯತ್ನವೇಕೆ?
ಧರ್ಮದ ಹೆಸರಿನಲ್ಲಿ ನಮ್ಮ ವಿರುದ್ಧ ಸುಳ್ಳು ಆರೋಪವೇಕೆ? ಭಾರತದ ಮರ್ಯಾದೆಯನ್ನು ಕಳೆಯುವ ಪ್ರಯತ್ನವೇಕೆ? ನೀವು ನನ್ನನ್ನು ವಿರೋಧಿಸಿ, ನನ್ನ ಪ್ರತಿಕೃತಿಗೆ ಬೆಂಕಿಯಿಡಿ ಆದ್ರೆ ಸರ್ಕಾರ ಮತ್ತು ಜನರ ಆಸ್ತಿಪಾಸ್ತಿಯನ್ನು ಹಾಳುಮಾಡಬೇಡಿ. ಬೈಕ್ ಹಾಗೂ ಬಸ್‌ಗೆ ಬೆಂಕಿ ಹಚ್ಚುವುದು ಇದೆಂತಹ ಪ್ರತಿಭಟನೆ. ನನ್ನ ಮೇಲೆ ಚಪ್ಪಲಿ ಎಸೆಯಿರಿ ಆದರೆ ದೇಶವನ್ನು ವಿರೋಧಿಸಬೇಡಿ ಎಂದು ಧನ್ಯವಾದ ಱಲಿ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣದ ವೇಳೆ ಜನತೆಗೆ ಸಂದೇಶ ನೀಡಿದ್ದಾರೆ.

ಪೊಲೀಸರ ಮೇಲೆ ದಾಳಿ ಮಾಡುವುದರಿಂದ ಏನು ಸಿಗುತ್ತೆ? ಅವರು ಯಾರ ಶತ್ರುಗಳೂ ಅಲ್ಲ. ಅವರು ಹಗಲು ರಾತ್ರಿಯೆನ್ನದೆ ಎಲ್ಲರಿಗಾಗಿ ದುಡಿಯುತ್ತಾರೆ. ನಾವು ಎಂದೂ ಯಾರ ಬಳಿಯೂ ಅವರ ಧರ್ಮ ಕೇಳಿಲ್ಲ. ಸಿಎಎ ದೇಶದ ಜನರಿಗೆ ಅಲ್ಲವೇ ಅಲ್ಲ. ಎನ್‌ಆರ್‌ಸಿ ಬಗ್ಗೆಯೂ ಸುಳ್ಳನ್ನು ಹಬ್ಬಿಸುತ್ತಿದ್ದಾರೆ ಎಂದು ಹೇಳಿದರು.

ನಿಮಗೆ ನಿಮ್ಮ ಜಾಗದ ಸಂಪೂರ್ಣ ಹಕ್ಕು ಸಿಕ್ಕಿದೆ:
ವಿವಿಧತೆಯಲ್ಲಿ ಏಕತೆಯೇ ಭಾರತದ ವಿಶೇಷತೆ. ಈ ಮೈದಾನ ಹಲವು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ದೆಹಲಿಯ 40 ಲಕ್ಷ ಜನರು ಹೊಸಜೀವನ ಆರಂಭಿಸಿದ್ದಾರೆ. ಚುನಾವಣೆಗಳು ಬಂದಾಗ ಭರವಸೆಗಳನ್ನು ನೀಡುತ್ತಾರೆ. ಆದ್ರೆ ಸಮಸ್ಯೆಗಳು ಮಾತ್ರ ಹಾಗೆಯೇ ಉಳಿದುಕೊಳ್ಳುತ್ತವೆ. ಸಮಸ್ಯೆ ನಿವಾರಿಸುವತ್ತ ಯಾರೂ ಧೈರ್ಯ ತೋರಿಸಿರಲಿಲ್ಲ. ಕಾಲೋನಿ ಅಧಿಕೃತಗೊಳಿಸುವ ಜವಾಬ್ದಾರಿ ವಹಿಸಿಕೊಂಡೆ.

1200ಕ್ಕೂ ಹೆಚ್ಚು ಕಾಲೋನಿಗಳ ನಕ್ಷೆ ಆನ್‌ಲೈನ್‌ ಆಗಿದೆ. ನಿಮಗೆ ನಿಮ್ಮ ಜಾಗದ ಸಂಪೂರ್ಣ ಹಕ್ಕು ಸಿಕ್ಕಿದೆ. ಬೇರೆ ಪಕ್ಷದವರ ವಿಐಪಿಗಳು ಅವರಿಗೇ ಇರಲಿ. ನನ್ನ ವಿಐಪಿಗಳು ಮಾತ್ರ ನೀವು, ವಿಐಪಿಗಳ 2000ಕ್ಕೂ ಹೆಚ್ಚು ಬಂಗಲೆ ಖಾಲಿ ಮಾಡಿಸಲಾಗಿದೆ, ದೆಹಲಿಯಲ್ಲಿ ಮೆಟ್ರೋ ಸೇವೆಯನ್ನು ವಿಸ್ತರಿಸಲಾಗಿದೆ ಎಂದು ಭಾಷಣದ ವೇಳೆ ಅನಧಿಕೃತ ಕಾಲೋನಿ ಅಧಿಕೃತಗೊಳಿಸಿರುವ ಬಗ್ಗೆ ಮಾತನಾಡಿದರು.

Published On - 3:37 pm, Sun, 22 December 19