ಭ್ರಷ್ಟಾಚಾರ, ವಂಶರಾಜಕಾರಣವನ್ನು ದೇಶಬಿಟ್ಟು ತೊಲಗುವಂತೆ ಭಾರತ ಕೇಳುತ್ತಿದೆ: ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಭ್ರಷ್ಟಾಚಾರ, ವಂಶರಾಜಕಾರಣವನ್ನು ದೇಶಬಿಟ್ಟು ತೊಲಗುವಂತೆ ಭಾರತ ಕೇಳುತ್ತಿದೆ ಎಂದು ಪ್ರಧಾನಿ ಮೋದಿ(Narendra Modi)ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭ್ರಷ್ಟಾಚಾರ, ವಂಶರಾಜಕಾರಣವನ್ನು ದೇಶಬಿಟ್ಟು ತೊಲಗುವಂತೆ ಭಾರತ ಕೇಳುತ್ತಿದೆ ಎಂದು ಪ್ರಧಾನಿ ಮೋದಿ(Narendra Modi)ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕ್ವಿಟ್ ಇಂಡಿಯಾ ಚಳವಳಿ ನಡೆದು 81 ಕಳೆದಿವೆ ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೆಗಾ ಅಭಿಯಾನವನ್ನು ಪ್ರಾರಂಭಿಸಲಿದೆ. ಸಂಸತ್ತಿನಲ್ಲಿ ಸ್ಥಾಪಿಸಲಾಗಿರುವ ಗಾಂಧಿ ಪ್ರತಿಮೆಯಿಂದ 21 ದಿನಗಳ ಈ ಅಭಿಯಾನವನ್ನು ನಡೆಸಲಾಗುವುದು. ಆಗಸ್ಟ್ 9, 1942 ರಂದು, ಮಹಾತ್ಮ ಗಾಂಧಿಯವರು ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿಯನ್ನು ಪ್ರಾರಂಭಿಸಿದರು. ಇಂದು 81 ವರ್ಷ ಪೂರೈಸಿದೆ.
‘ಕ್ವಿಟ್ ಇಂಡಿಯಾ ಚಳವಳಿ’ಯನ್ನು ಸ್ಮರಿಸಿದ ಅವರು, ಭಾರತವು ಈಗ ಭ್ರಷ್ಟಾಚಾರ, ವಂಶರಾಜಕಾರಣ ವಿರುದ್ಧ ಧ್ವನಿ ಎತ್ತಿದೆ. ಆಡಳಿತಾರೂಢ ಬಿಜೆಪಿ ಬುಧವಾರ ಇದೇ ಮಾದರಿಯಲ್ಲಿ ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಪ್ರತಿಪಕ್ಷಗಳನ್ನು ಪರೋಕ್ಷವಾಗಿ ಗುರಿಯಾಗಿಸಿದ್ದಾರೆ.
ಮತ್ತಷ್ಟು ಓದಿ: ಇಂದಿನಿಂದ ‘ಮೇರಿ ಮಾಠಿ ಮೇರಾ ದೇಶ್’ ಅಭಿಯಾನ ಶುರು, ಎಲ್ಲಿಯವರೆಗೆ ನಡೆಯುತ್ತೆ, ಉದ್ದೇಶವೇನು ಇಲ್ಲಿದೆ ಮಾಹಿತಿ
ಬಿಜೆಪಿಯ ಈ ಹೊಸ ಅಭಿಯಾನ ಆಗಸ್ಟ್ 29 ಅಥವಾ 30 ರಂದು ಕರ್ತವ್ಯ ಪಥದಲ್ಲಿ ಅಂತ್ಯವಾಗಲಿದೆ. ಗಾಂಧೀಜಿಯವರ ನೇತೃತ್ವದಲ್ಲಿ ಈ ಚಳುವಳಿ ಭಾರತವನ್ನು ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.
2014ಕ್ಕೂ ಮೊದಲು ಸುಮಾರು ಖಾದಿಯು 25,000-30,000 ಕೋಟಿ ರೂಗಳಷ್ಟು ಮಾರಾಟವಾಗುತ್ತಿತ್ತು ಆದರೆ ಈಗ 1.30 ಲಕ್ಷ ಕೋಟಿ ರೂ.ಗಳವರೆಗೆ ಮಾರಾಟವಾಗುತ್ತಿದೆ.
ಭಾರತದ ಕೈಮಗ್ಗ, ಖಾದಿ, ಜವಳಿ ಕ್ಷೇತ್ರವನ್ನು ವಿಶ್ವಚಾಂಪಿಯನ್ ಆಗಿಸುವ ಪ್ರಯತ್ನ ನಮ್ಮದು ಎಂದರು. ಒಂದು ಜಿಲ್ಲೆ, ಒಂದು ಉತ್ಪನ್ನ ಉಪಕ್ರಮದ ಮೂಲಕ, ವಿವಿಧ ಜಿಲ್ಲೆಗಳಲ್ಲಿ ತಯಾರಿಸಿದ ವಿಶಿಷ್ಟ ಉತ್ಪನ್ನಗಳನ್ನು ಪ್ರಚಾರ ಮಾಡಲಾಗುತ್ತಿದೆ ಮತ್ತು ಗುಜರಾತ್‌ನ ಏಕತಾ ಪ್ರತಿಮೆಯಂತೆಯೇ ಏಕತಾ ಮಾಲ್ಗಳನ್ನು ದೇಶಾದ್ಯಂತ ಸ್ಥಾಪಿಸಲಾಗುವುದು ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:08 am, Wed, 9 August 23