ಡೊನಾಲ್ಡ್ ಟ್ರಂಪ್ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ: ಪ್ರಧಾನಿ ಮೋದಿ ಸಂತಸ

ಡೊನಾಲ್ಡ್ ಟ್ರಂಪ್ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ: ಪ್ರಧಾನಿ ಮೋದಿ ಸಂತಸ

ಅಹಮದಾಬಾದ್: ಐತಿಹಾಸಿಕ ಕ್ಷಣಕ್ಕೆ ಇಂದು ಗುಜರಾತ್‌ನ ಮೊಟೆರಾ ಸ್ಟೇಡಿಯಂ ಸಾಕ್ಷಿಯಾಯಿತು. ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ದಂಪತಿ ಭಾಗಿಯಾಗಿ ಭಾರತ ಮತ್ತು ಅಮೇರಿಕಾದ ಸ್ನೇಹಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ. ಏರ್​ಫೋರ್ಸ್-1 ವಿಮಾನದ ಮೂಲಕ ಬಂದಿಳಿದ ಟ್ರಂಪ್‌ ದಂಪತಿಗೆ ಪ್ರಧಾನಿ ನರೇಂದ್ರ ಮೋದಿ ಅದ್ದೂರಿಯ ಸ್ವಾಗತದಿಂದ ಬರಮಾಡಿಕೊಂಡ್ರು.

‘ಈ ಭೂಮಿ ಗುಜರಾತ್​ನದ್ದು, ಆದರೆ ಜೋಶ್ ಹಿಂದೂಸ್ತಾನದ್ದು’
ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಉದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ಭಾರತ-ಅಮೆರಿಕ ನಡುವಿನ ಬಾಂಧವ್ಯ ಸುದೀರ್ಘವಾದುದು. ಇಂದು ಮೊಟೆರಾ ಸ್ಟೇಡಿಯಂನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಹೌಡಿ ಮೋದಿ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೆ. ಅದೇ ರೀತಿ ನನ್ನ ಗೆಳೆಯ ಅಮೆರಿಕ ಅಧ್ಯಕ್ಷ ಟ್ರಂಪ್ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಭೂಮಿ ಗುಜರಾತ್​ನದ್ದು ಆದರೆ ಜೋಶ್ ಹಿಂದೂಸ್ತಾನದ್ದು ಆಗಿದೆ ಎಂದರು.

ಅಧ್ಯಕ್ಷರೇ ನೀವು ಇಂದು ಸಬರಮತಿ ದಂಡೆಯಲ್ಲಿದ್ದೀರಿ. ಈ ಸ್ಥಳ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅಹಿಂಸೆ ಮೂಲಕ ಪ್ರಮುಖ ಪಾತ್ರ ವಹಿಸಿದ್ದ ಐತಿಹಾಸಿಕ ಸ್ಥಳವಿದು. ಸರ್ದಾರ್​ ಪಟೇಲರ ಏಕತಾ ಪ್ರತಿಮೆ ಇರುವ ಪ್ರಸಿದ್ಧ ಸ್ಥಳ, ಭಾರತ-ಅಮೆರಿಕ ಜನತೆಯ ಅಭಿವೃದ್ಧಿಗೆ ಹೊಸ ಹೆಜ್ಜೆ ಇಡಲು ಸಾಕ್ಷಿಯಾಗುತ್ತಿರುವ ಸ್ಥಳ.

ಅಮೆರಿಕನ್ನರ ಕನಸು ಸಾಕಾರಕ್ಕೆ ಟ್ರಂಪ್​ ಶ್ರಮಿಸುತ್ತಿದ್ದಾರೆ. ಅಮೆರಿಕದ ಪ್ರಥಮ ಮಹಿಳೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಹಾಗೂ ಮಕ್ಕಳಿಗಾಗಿ ಇವಾಂಕಾ ಮಾಡುತ್ತಿರುವ ಕೆಲಸ ಶ್ಲಾಘನೀಯವಾಗಿದೆ. ಈ ಹಿಂದೆ ಭೇಟಿ ನೀಡಿದ್ದಾಗ ಮತ್ತೆ ಆಗಮಿಸುವೆ ಎಂದಿದ್ದಿರಿ. ಇಂದು ಮತ್ತೆ ಇವಾಂಕಾ ನಮ್ಮ ನಡುವೆ ಇರುವುದು ಸಂತಸ ತಂದಿದೆ. ನನ್ನ ಗೆಳೆಯ ಟ್ರಂಪ್, ಭಾರತದ ಗೆಳೆಯ ಎಂದು ಟ್ರಂಪ್​ನ ಹೊಗಳಿದರು.

ಡೊನಾಲ್ಡ್ ಟ್ರಂಪ್ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮೋದಿ ಧನ್ಯವಾದ ಅರ್ಪಿಸಿ ಮಾತನಾಡುತ್ತಾ ಡೊನಾಲ್ಡ್ ಟ್ರಂಪ್ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಮುಕ್ತ ಕಂಠದಿಂದ ಟ್ರಂಪ್​ರನ್ನು ಹೊಗಳಿದರು. ಸಂಬಂಧ ವೃದ್ಧಿಗೆ ಅತಿದೊಡ್ಡ ಕಾರಣ ವಿಶ್ವಾಸ. ಭಾರತ, ಅಮೆರಿಕ ನಡುವಿನ ವಿಶ್ವಾಸ ಮತ್ತಷ್ಟು ಹೆಚ್ಚಿದೆ.  ಭಾರತ-ಅಮೆರಿಕ ಸ್ವಾಭಾವಿಕ ಸ್ನೇಹಿತರು.  ನಮ್ಮ ದ್ವಿಪಕ್ಷೀಯ, ಆರ್ಥಿಕ ಬಾಂಧವ್ಯ ಮತ್ತಷ್ಟು ವಿಸ್ತರಣೆಗೊಂಡಿದೆ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.

 

Read Full Article

Click on your DTH Provider to Add TV9 Kannada