ದಿನವಿಡೀ ಸ್ನೇಹಿತ ಮೋದಿ ಜೊತೆ ಟ್ರಂಪ್ ಬ್ಯುಸಿ: ಇಂದು ಏನೇನ್ ಮಾಡ್ತಾರೆ?

ದಿನವಿಡೀ ಸ್ನೇಹಿತ ಮೋದಿ ಜೊತೆ ಟ್ರಂಪ್ ಬ್ಯುಸಿ: ಇಂದು ಏನೇನ್ ಮಾಡ್ತಾರೆ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ

ದೆಹಲಿ: ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತಕ್ಕೆ ಭೇಟಿ ನೀಡಿರುವುದು ಭಾರಿ ಕುತೂಹಲ ಕೆರಳಿಸಿದೆ. ನಿನ್ನೆ ಪ್ರಧಾನಿ ಮೋದಿ ಜೊತೆ ರೋಡ್ ಶೋ ನಡೆಸಿದ್ದ ಟ್ರಂಪ್​ಗಿಂದು ಸಾಂಪ್ರದಾಯಿಕವಾಗಿ ಸ್ವಾಗತ ಕೋರಲು ಸಿದ್ಧತೆ ನಡೆದಿದೆ. ಈ ದಿನ ಟ್ರಂಪ್​ ಏನೇನ್ ಮಾಡ್ತಾರೆ ಅಂತಾ ನೋಡೋಣ ಬನ್ನಿ. ನಿನ್ನೆ 130 ಕೋಟಿ ಭಾರತೀಯರಿಗೆ ಮರೆಯಲಾಗದ ಸಂಭ್ರಮ. ಯಾಕಂದ್ರೆ ಭಾರತಕ್ಕೆ ಆಗಮಿಸಿರುವ ಅಮೆರಿಕ ಅಧ್ಯಕ್ಷರು ಭಾರತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ರು. ಅಭಿವೃದ್ಧಿ ಪಥದಲ್ಲಿ ಭಾರತದ ಸಾಧನೆಯನ್ನ ಕೊಂಡಾಡಿದ್ರು. ಹೀಗೆ […]

sadhu srinath

|

Feb 25, 2020 | 7:06 AM

ದೆಹಲಿ: ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತಕ್ಕೆ ಭೇಟಿ ನೀಡಿರುವುದು ಭಾರಿ ಕುತೂಹಲ ಕೆರಳಿಸಿದೆ. ನಿನ್ನೆ ಪ್ರಧಾನಿ ಮೋದಿ ಜೊತೆ ರೋಡ್ ಶೋ ನಡೆಸಿದ್ದ ಟ್ರಂಪ್​ಗಿಂದು ಸಾಂಪ್ರದಾಯಿಕವಾಗಿ ಸ್ವಾಗತ ಕೋರಲು ಸಿದ್ಧತೆ ನಡೆದಿದೆ. ಈ ದಿನ ಟ್ರಂಪ್​ ಏನೇನ್ ಮಾಡ್ತಾರೆ ಅಂತಾ ನೋಡೋಣ ಬನ್ನಿ.

ನಿನ್ನೆ 130 ಕೋಟಿ ಭಾರತೀಯರಿಗೆ ಮರೆಯಲಾಗದ ಸಂಭ್ರಮ. ಯಾಕಂದ್ರೆ ಭಾರತಕ್ಕೆ ಆಗಮಿಸಿರುವ ಅಮೆರಿಕ ಅಧ್ಯಕ್ಷರು ಭಾರತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ರು. ಅಭಿವೃದ್ಧಿ ಪಥದಲ್ಲಿ ಭಾರತದ ಸಾಧನೆಯನ್ನ ಕೊಂಡಾಡಿದ್ರು. ಹೀಗೆ ಭಾರತದ ಹೆಮ್ಮೆಯ ಅತಿಥಿಯಾಗಿರೋ ಅಮೆರಿಕ ಅಧ್ಯಕ್ಷ ಟ್ರಂಪ್​ಗೆ ಸಾಂಪ್ರದಾಯಿಕ ಸ್ವಾಗತ ಸಿಗಲಿದೆ. ಇದಕ್ಕಾಗಿ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ.

ರಾಷ್ಟ್ರಪತಿ ಭವನದಲ್ಲಿ ಆರಂಭವಾಗೋ ಟ್ರಂಪ್ ದಿನಚರಿ, ಅಮೆರಿಕ ರಾಯಭಾರಿ ಕಚೇರಿಯಲ್ಲಿನ ಮೀಟಿಂಗ್​ವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರಲಿದ್ದಾರೆ. ಹಾಗಾದ್ರೆ ಟ್ರಂಪ್ ಅವರ ಇವತ್ತಿನ ಕಾರ್ಯಕ್ರಮಗಳ ಪಟ್ಟಿಯನ್ನ ಡೀಟೇಲ್ ಆಗಿ ನೋಡೋದಾದ್ರೆ.

ಇಂದು ಟ್ರಂಪ್ ಏನೇನ್ ಮಾಡ್ತಾರೆ? ಫೆಬ್ರವರಿ 25 ಅಂದ್ರೆ ಇಂದು ಬೆಳಗ್ಗೆ ಅಮೆರಿಕ ಅಧ್ಯಕ್ಷರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ಕೋರಲಾಗುತ್ತದೆ. ಬಳಿಕ ರಾಜ್​ಘಾಟ್​ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ಟ್ರಂಪ್ ನಮನ ಸಲ್ಲಿಸಲಿದ್ದಾರೆ. ನಂತರ ಹೈದರಾಬಾದ್ ಹೌಸ್​ಗೆ ಆಗಮಿಸಲಿರೋ ಟ್ರಂಪ್ ಪ್ರಧಾನಿ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇಬ್ಬರೂ ನಾಯಕರ ಉಪಸ್ಥಿತಿಯಲ್ಲಿ ಭಾರತ-ಅಮೆರಿಕ ನಿಯೋಗ ಮಟ್ಟದ ಮಾತುಕತೆ ನಡೆಯಲಿದೆ. ಇದೇ ಸಂದರ್ಭದಲ್ಲಿ 24 MH -60R ಸೀಹಾಕ್​ ಹೆಲಿಕಾಪ್ಟರ್ ಖರೀದಿ ಒಪ್ಪಂದಕ್ಕೆ ಸಹಿ ಹಾಕೋ ಸಾಧ್ಯತೆ ಇದೆ. ವ್ಯಾಪಾರ ವಹಿವಾಟು, ರಕ್ಷಣೆ ಕುರಿತು ಇಬ್ಬರು ನಾಯಕರು ಚರ್ಚೆ ನಡೆಸಲಿದ್ದಾರೆ. ನಂತರ ದೆಹಲಿಯ ಅಮೆರಿಕ ರಾಯಭಾರಿ ಕಚೇರಿಯಲ್ಲಿ ಅಮೆರಿಕ ಮತ್ತು ಭಾರತೀಯ ಉದ್ಯಮಿಗಳ ಜತೆ ಟ್ರಂಪ್ ರೌಂಡ್​ಟೇಬಲ್ ಮೀಟಿಂಗ್ ನಡೆಸಲಿದ್ದಾರೆ.

ದೆಹಲಿ ಶಾಲೆಗೆ ಮೆಲಾನಿಯಾ ಟ್ರಂಪ್ ವಿಸಿಟ್..! ಒಂದ್ಕಡೆ ಟ್ರಂಪ್ ಸಭೆಗಳ ಮೇಲೆ ಸಭೆ ನಡೆಸ್ತಿದ್ರೆ, ಇತ್ತ ಅಮೆರಿಕ ಅಧ್ಯಕ್ಷರ ಪತ್ನಿ ಮೆಲಾನಿಯಾ ಟ್ರಂಪ್, ಇಂದು ದೆಹಲಿಯ ಶಾಲೆಯೊಂದಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಮೆಲಾನಿಯಾ ಭಾರತೀಯ ಶಿಕ್ಷಣದ ಮಾಹಿತಿ ಪಡೆಯಲಿದ್ದಾರೆ. ಇಷ್ಟೆಲ್ಲಾ ಕಾರ್ಯಕ್ರಮಗಳ ನಂತ್ರ ಇಂದು ರಾತ್ರಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಔತಣಕೂಟ ಮುಗಿಸಿ ಟ್ರಂಪ್ ದಂಪತಿ ರಾತ್ರಿ 10 ಗಂಟೆ ಸುಮಾರಿಗೆ ಮರಳಿ ಅಮೆರಿಕದತ್ತ ಪ್ರಯಾಣ ಬೆಳೆಸಲಿದ್ದಾರೆ.

ಒಟ್ನಲ್ಲಿ ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೊಚ್ಚಲ ಭೇಟಿ ನೀಡಿದ್ರೂ ಹಲವು ದಾಖಲೆಗಳನ್ನ ನಿರ್ಮಿಸಿದ್ದಾರೆ. ನಿನ್ನೆ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಂಪ್​ಗೆ ಭಾರಿ ಪ್ರಮಾಣದಲ್ಲಿ ನೆರೆದಿದ್ದ ಜನಸ್ತೋಮ ಭರ್ಜರಿ ಸ್ವಾಗತ ಕೋರಿತ್ತು. ಇಂದು ಸಾಂಪ್ರದಾಯಿಕವಾಗಿ ರಾಷ್ಟ್ರಪತಿ ಭವನದಲ್ಲಿ ಸ್ವಾಗತ ಕೋರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈಗ ಇಡೀ ವಿಶ್ವದ ಚಿತ್ತ ರಾಷ್ಟ್ರಪತಿ ಭವನದತ್ತ ನೆಟ್ಟಿದೆ.

Follow us on

Related Stories

Most Read Stories

Click on your DTH Provider to Add TV9 Kannada