AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CAA ಕಿಚ್ಚು: ಶಾ-ಕೇಜ್ರಿವಾಲ್ ಭೇಟಿ, ಪೊಲೀಸರಿಗೆ ರಿವಾಲ್ವರ್ ತೋರಿಸಿದ್ದ ಶಾರೂಖ್ ಅಂದರ್

ದೆಹಲಿ: ನಿನ್ನೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯ ಈಶಾನ್ಯ ಭಾಗದ ಜಫ್ರಾಬಾದ್​ನಲ್ಲಿ ಸಿಎಎ ಪರ-ವಿರೋಧದ ಕಿಚ್ಚು ಹೊತ್ತಿ ಉರಿದಿದೆ. ಗುಂಪುಗಳ ನಡುವೆ ಭಾರಿ ಘರ್ಷನೆ ಉಂಟಾಗಿ ಕಲ್ಲೆಸೆತ, ಅಂಗಡಿಗಳು-ಮನೆಗಳಿಗೆ ಬೆಂಕಿ ಹಚ್ಚೋ ಮೂಲಕ ದೆಹಲಿಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವಂತೆ ಮಾಡಿದ್ದಾರೆ. ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿದೆ. ನಿನ್ನೆ ಓರ್ವ ಮುಖ್ಯ ಪೇದೆ ಸೇರಿ ಐವರು ಮೃತಪಟ್ಟಿದ್ದರು. ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ನಿನ್ನೆ ಪೊಲೀಸರಿಗೆ […]

CAA ಕಿಚ್ಚು: ಶಾ-ಕೇಜ್ರಿವಾಲ್ ಭೇಟಿ, ಪೊಲೀಸರಿಗೆ ರಿವಾಲ್ವರ್ ತೋರಿಸಿದ್ದ ಶಾರೂಖ್ ಅಂದರ್
Follow us
ಸಾಧು ಶ್ರೀನಾಥ್​
|

Updated on:Feb 25, 2020 | 1:21 PM

ದೆಹಲಿ: ನಿನ್ನೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯ ಈಶಾನ್ಯ ಭಾಗದ ಜಫ್ರಾಬಾದ್​ನಲ್ಲಿ ಸಿಎಎ ಪರ-ವಿರೋಧದ ಕಿಚ್ಚು ಹೊತ್ತಿ ಉರಿದಿದೆ. ಗುಂಪುಗಳ ನಡುವೆ ಭಾರಿ ಘರ್ಷನೆ ಉಂಟಾಗಿ ಕಲ್ಲೆಸೆತ, ಅಂಗಡಿಗಳು-ಮನೆಗಳಿಗೆ ಬೆಂಕಿ ಹಚ್ಚೋ ಮೂಲಕ ದೆಹಲಿಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವಂತೆ ಮಾಡಿದ್ದಾರೆ.

ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿದೆ. ನಿನ್ನೆ ಓರ್ವ ಮುಖ್ಯ ಪೇದೆ ಸೇರಿ ಐವರು ಮೃತಪಟ್ಟಿದ್ದರು. ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ನಿನ್ನೆ ಪೊಲೀಸರಿಗೆ ರಿವಾಲ್ವರ್ ತೋರಿಸಿದ ಶಾರೂಖ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಅಮಿತ್ ಶಾ ಭೇಟಿ ಮಾಡಲಿರುವ ಕೇಜ್ರಿವಾಲ್: ಮೌಜ್​ಪುರ, ಬ್ರಹ್ಮಪುರಿಯಲ್ಲಿ ಮತ್ತೆ ಕಲ್ಲು ತೂರಾಟವಾಗಿದ್ದು, ಈಶಾನ್ಯ ದೆಹಲಿಯಲ್ಲಿ 1 ತಿಂಗಳವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ದೆಹಲಿ ಸಿಎಂ ಕೇಜ್ರಿವಾಲ್ ನಿವಾಸದಲ್ಲಿ ತುರ್ತು ಸಭೆ ಕೈಗೊಳ್ಳಲಾಗಿದೆ. ಪೊಲೀಸರ ಸಂಖ್ಯೆ ಹೆಚ್ಚಿಸುವಂತೆ ದೆಹಲಿ ಸಿಎಂ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದು. ಇಂದು ಮಧ್ಯಾಹ್ನ ಅಮಿತ್ ಶಾ ಭೇಟಿ ಮಾಡಿದ್ದಾರೆ.

ಜನರು ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು. ಹಿಂಸಾಚಾರದಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅರವಿಂದ ಕೇಜ್ರಿವಾಲ್ ಮನವಿ ಮಾಡಿದ್ದು, ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗುವುದ. ಮಂದಿರ, ಮಸೀದಿಗಳಿಂದ ಶಾಂತಿ ಸಂದೇಶ ಬಿತ್ತಲು ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳ ಜೊತೆ ಅಮಿತ್ ಶಾ ಮಾತುಕತೆ: ಅರವಿಂದ್ ಕೇಜ್ರಿವಾಲ್ ಜೊತೆ ಅಮಿತ್ ಶಾ ಸಭೆ ನಡೆಸಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ದೆಹಲಿ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.

Published On - 12:51 pm, Tue, 25 February 20