ದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ ದಿನವೇ ರಾಜಧಾನಿಯಲ್ಲಿ ಸಿಎಎ ಪರ-ವಿರೋಧದ ಹಿಂಸಾಚಾರ ಭುಗಿಲೆದ್ದಿದೆ. ಅದೇ ದಿನ ಐವರು ಮೃತಪಟ್ಟಿದ್ದರು. ಈಗ ಸಾವಿನ ಸಂಖ್ಯೆ 9ಕ್ಕೆ ಏರಿದೆ. ಈ ಹಿಂಸಾಚಾರದ ಬಗ್ಗೆ ಟ್ರಂಪ್ ಪ್ರತಿಕ್ರಿಯಿಸಿದ್ದು, ದೆಹಲಿಯಲ್ಲಿ ನಡೆಯುತ್ತಿರುವ ಗಲಭೆ ಭಾರತದ ಆಂತರಿಕ ವಿಚಾರ ಎಂದು ಉತ್ತರಿಸಿದ್ದಾರೆ.
ಇಂದು ಟ್ರಂಪ್ನ ಕೊನೇ ದಿನದ ಪ್ರವಾಸವಾಗಿದ್ದು, ಅಮೆರಿಕ ಪ್ರಥಮ ಪ್ರಜೆ ಭಾರತವನ್ನು ಸುಡುತ್ತಿರುವ ಪೌರತ್ವ ಕಾಯ್ದೆಯನ್ನ ಪ್ರಸ್ತಾಪಿಸಿದ್ರು. ಈ ವೇಳೆ ಪೌರತ್ವ ಕಾಯ್ದೆ ಬಗ್ಗೆ ಪ್ರಧಾನಿ ಮೋದಿ ಜತೆ ಚರ್ಚೆ ನಡೆಸಿಲ್ಲ. ಪಾಕಿಸ್ತಾನದ ಭಯೋತ್ಪಾದನೆ ಬಗ್ಗೆ ಚರ್ಚೆ ಮಾಡಿದ್ದೇವೆ.
ಕಾಶ್ಮೀರ ವಿಚಾರದಲ್ಲಿ ಅಗತ್ಯವಿದ್ದರೆ ಮಧ್ಯಸ್ಥಿಕೆ ವಹಿಸುತ್ತೇವೆ. ಪ್ರಧಾನಿ ಮೋದಿಯವರು ಧಾರ್ಮಿಕ ಸ್ವಾತಂತ್ರ್ಯದ ಪರವಾಗಿದ್ದಾರೆ. ಭಾರತದಲ್ಲಿ ಸುಮಾರು 20 ಕೋಟಿ ಮುಸಲ್ಮಾನರಿದ್ದಾರೆ. ಮುಸ್ಲಿಮರ ಪರವಾಗಿ ಇದ್ದೇವೆಂದು ಮೋದಿ ಹೇಳಿದ್ದಾರೆ. ಆದರೆ ನಮ್ಮ ಎರಡು ದಿನದ ಪ್ರವಾಸದಲ್ಲಿ ಭಾರತದ ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಹೇಳಿದರು.