ದೆಹಲಿ ಹಿಂಸಾಚಾರದ ಹಿಂದಿರೋ ಅಸಲಿ ಕಾರಣವೇನು?

ದೆಹಲಿ ಹಿಂಸಾಚಾರದ ಹಿಂದಿರೋ ಅಸಲಿ ಕಾರಣವೇನು?

ದೆಹಲಿ: ರಾಷ್ಟ್ರ ರಾಜಧಾನಿಯ ಸರಣಿ ಹಿಂಸಾಚಾರದ ಹಿಂದಿರೋ ಅಸಲಿ ಕಾರಣವೇನು? ಬೆಂಕಿ ಹಚ್ಚುತ್ತಿರೋರ ಉದ್ದೇಶವಾದ್ರೂ ಏನು? ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿರೋ ಸಂಗತಿಗಳೇನು? ಸಿಎಎ ಹೆಸರಲ್ಲಿ ನಡೀತಿರೋ ಷಡ್ಯಂತ್ರನಾ ಇದು? ಇಂಥಾ ಹತ್ತಾರು ಪ್ರಶ್ನೆಗಳು ದೇಶದ ಜನರನ್ನ ಕಾಡ್ತಿದೆ. ಅದಕ್ಕೆ ಉತ್ತರ ಇಲ್ಲಿದೆ. ದೆಹಲಿ.. ಕೇವಲ ಭಾರತದ ರಾಜಧಾನಿಯಷ್ಟೇ ಅಲ್ಲ, ರಾಷ್ಟ್ರದ ಐಡೆಂಟಿಟಿ. ರಾಷ್ಟ್ರ ರಾಜಕೀಯದ ಹೆಡ್​ಕ್ವಾರ್ಟರ್ಸ್. ರಾಷ್ಟ್ರಪತಿ, ಪ್ರಧಾನಿಯಿಂದ ಹಿಡಿದು ಘಟಾನುಘಟಿ ನಾಯಕರು ಬೀಡುಬಿಟ್ಟಿರೋ ನಗರ. ಕೇಂದ್ರ ಸರ್ಕಾರ ರನ್ ಆಗೋದು ಇದೇ ಇಲ್ಲಿಂದ. ವಿದೇಶದ ಯಾವುದೇ […]

sadhu srinath

|

Feb 25, 2020 | 8:44 PM

ದೆಹಲಿ: ರಾಷ್ಟ್ರ ರಾಜಧಾನಿಯ ಸರಣಿ ಹಿಂಸಾಚಾರದ ಹಿಂದಿರೋ ಅಸಲಿ ಕಾರಣವೇನು? ಬೆಂಕಿ ಹಚ್ಚುತ್ತಿರೋರ ಉದ್ದೇಶವಾದ್ರೂ ಏನು? ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿರೋ ಸಂಗತಿಗಳೇನು? ಸಿಎಎ ಹೆಸರಲ್ಲಿ ನಡೀತಿರೋ ಷಡ್ಯಂತ್ರನಾ ಇದು? ಇಂಥಾ ಹತ್ತಾರು ಪ್ರಶ್ನೆಗಳು ದೇಶದ ಜನರನ್ನ ಕಾಡ್ತಿದೆ. ಅದಕ್ಕೆ ಉತ್ತರ ಇಲ್ಲಿದೆ.

ದೆಹಲಿ.. ಕೇವಲ ಭಾರತದ ರಾಜಧಾನಿಯಷ್ಟೇ ಅಲ್ಲ, ರಾಷ್ಟ್ರದ ಐಡೆಂಟಿಟಿ. ರಾಷ್ಟ್ರ ರಾಜಕೀಯದ ಹೆಡ್​ಕ್ವಾರ್ಟರ್ಸ್. ರಾಷ್ಟ್ರಪತಿ, ಪ್ರಧಾನಿಯಿಂದ ಹಿಡಿದು ಘಟಾನುಘಟಿ ನಾಯಕರು ಬೀಡುಬಿಟ್ಟಿರೋ ನಗರ. ಕೇಂದ್ರ ಸರ್ಕಾರ ರನ್ ಆಗೋದು ಇದೇ ಇಲ್ಲಿಂದ. ವಿದೇಶದ ಯಾವುದೇ ನಾಯಕನೇ ಆಗಿರಲಿ ದೆಹಲಿಗೆ ಭೇಟಿ ನೀಡದೆ ಮರಳೋದಿಲ್ಲ. ದೆಹಲಿಯಲ್ಲಿ ಏನೇ ಆದ್ರೂ, ಯಾರೇ ಬಂದ್ರು ಅದು ಅಂತಾರಾಷ್ಟ್ರೀಯ ಸುದ್ದಿ. ಅಂಥಾ ದೆಹಲಿಯಲ್ಲಿ ಈಗ ಅದೇನು ನಡೆಯಬಾರದೋ ಅದೇ ನಡೀತಿದೆ.

ಹಿಂಸಾಚಾರದ ರಾಜಧಾನಿ ಆಯ್ತಾ ದೆಹಲಿ? ಯೆಸ್.. ಇಂಥದ್ದೊಂದು ಪ್ರಶ್ನೆ ಈಗ ಸಹಜವಾಗಿಯೇ ಜನರನ್ನ ಕಾಡುತ್ತಿದೆ. ಯಾಕಂದ್ರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ಹೆಸರಲ್ಲಿ ದೆಹಲಿಗೆ ದೆಹಲಿಯೇ ಹೊತ್ತಿ ಉರಿಯುತ್ತಿದೆ. ಹಿಂಸಾಚಾರ ತಾರಕಕ್ಕೇರಿದೆ. ಯುವಕರ ಕೈಯಲ್ಲಿ ಗನ್‌ಗಳು ಕಾಣಿಸಿಕೊಳ್ತಿವೆ. ಉದ್ರಿಕ್ತರಿಂದ ಕಲ್ಲು ತೂರಾಟ, ಪೊಲೀಸರಿಂದ ಲಾಠಿಚಾರ್ಜ್, ಅಶ್ರುವಾಯು ಸಿಡಿಯುತ್ತಿದೆ. ಬೀದಿಯಲ್ಲಿ ಹೆಣಗಳು ಬೀಳ್ತಿವೆ. ಅಕ್ಷರಶ: ಇದು ದೆಹಲಿನಾ ಇಲ್ಲಾ ಕಾಶ್ಮೀರನಾ ಅನ್ನೋ ಅನುಮಾನ ಭಾರತೀಯರಲ್ಲಿ ಮಾಡಿದೆ.

ಹಾಗಿದ್ರೆ ದೆಹಲಿ ದಂಗಲ್​ಗೆ ಕಾರಣವೇನು? ಸಿಎಎ ವಿರೋಧಿ ಪ್ರೊಟೆಸ್ಟ್ ಹಿಂಸಾಚಾರದ ರೂಪ ಪಡೀತಿರೋದ್ಯಾಕೆ? ಹಾದಿ ಬೀದಿಯಲ್ಲಿ ಗನ್​ಗಳು ಮಾರ್ದನಿಸ್ತಿರೋದ್ಯಾಕೆ? ಈ ಪಿಸ್ತೂಲ್​ಗಳು ಬರ್ತಿರೋದಾದ್ರು ಎಲ್ಲಿಂದ? ಹಿಂಸಾಚಾರದ ಹಿಂದಿರೋ ತಲೆ ಹಿಡುಕಱರು? ಷಡ್ಯಂತ್ರವೇನು? ಹಿಂಸಾಚಾರ ತಡೆಗಟ್ಟುವಲ್ಲಿ ಪೊಲೀಸರು ವಿಫಲವಾಗಿರೊದ್ಯಾಕೆ? ಈ ಬೀದಿ ಕಾಳಗದ ಹಿಂದಿರೋ ಅಸಲಿ ಕಹಾನಿಯೇನು ಅನ್ನೋದರ ಡಿಟೇಲ್ಸ್ ಇಲ್ಲಿದೆ ಓದಿ.

ದೆಹಲಿಯಲ್ಲಿ ಸಿಎಎ ಪರ-ವಿರೋಧಿ ಪ್ರತಿಭಟನೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ? ಇಷ್ಟು ದಿನ ದೆಹಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳು ಮಾತ್ರ ನಡೀತಿದ್ವು. ಆದ್ರೀಗ ದೆಹಲಿಯಲ್ಲಿ ಸಿಎಎ ಪರ ಹೋರಾಟಗಳೂ ಆರಂಭವಾಗಿವೆ. ಕಳೆದ ಶನಿವಾರ ದೆಹಲಿ ಜಫರಾಬಾದ್​ನಲ್ಲಿ ಸಿಎಎ ವಿರೋಧಿಸಿ 500ಕ್ಕೂ ಹೆಚ್ಚು ಮಹಿಳೆಯರು ಏಕಾಏಕಿ ಪ್ರತಿಭಟನೆಗಿಳಿದ್ರು. ಇದನ್ನ ವಿರೋಧಿಸಿ ಭಾನುವಾರ ಮೌಜ್​ಪುರದಲ್ಲಿ ಸಿಎಎ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ರು.

ಪರ-ವಿರೋಧಿ ಹೋರಾಟಗಾರರ ಮಧ್ಯೆ ಸಂಘರ್ಷ! ಯಾವಾಗ ಸಿಎಎ ಬೆಂಬಲಿಗರು ಬೀದಿಗಿಳಿದ್ರೋ, ಪರ-ವಿರೋಧಿ ಗುಂಪುಗಳ ನಡುವೆ ಸಂಘರ್ಷವಾಗಿ ಭಾನುವಾರ ಕಲ್ಲು ತೂರಾಟ ನಡೆದಿತ್ತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರಾದ್ರೂ, ಸೋಮವಾರ ಮತ್ತು ಇಂದು ಮತ್ತೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

ಪರ-ವಿರೋಧದ ಕಲಹ: ದೆಹಲಿಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಇರೋ ಪ್ರದೇಶವನ್ನೇ ಗುರಿಯಾಗಿಸಿ, ಸಿಎಎ ಬೆಂಬಲಿಗರು ಪ್ರತಿಭಟನೆ ನಡೆಸಿದ್ರು. ಇದೇ ವೇಳೆ ಸಿಎಎ ಪರ ಹೋರಾಟಗಾರರು ಮಹಿಳೆಯರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಇದು ಪ್ರಚೋದನೆಗೆ ಕಾರಣವಾಗಿದ್ದು, ಸಿಎಎ ವಿರೊಧಿ ಮತ್ತು ಪರ ಹೋರಾಟಗಾರರು ಮಧ್ಯೆ ಕಲಹ ಉಂಟಾಗಿದೆ.

ಕೆರಳಿಸಿದ ಬಿಜೆಪಿ ನಾಯಕ ಕಪಿಲ್ ಮಿಶ್ರಾ! ಇಷ್ಟೇ ಅಲ್ಲ, ಭಾನುವಾರದಂದು ದೆಹಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಪ್ರಚೋದನಾಕಾರಿ ಹೇಳಿಕೆಯೊಂದನ್ನ ಕೊಟ್ಟಿದ್ರು. ಪ್ರತಿಭಟನಾಕಾರರು ಜಾಗ ಖಾಲಿ ಮಾಡದೇ ಇದ್ದಲ್ಲಿ ನಾವೇ ಜಾಗ ಖಾಲಿ ಮಾಡಿಸ್ತೇವೆ. ಪ್ರತಿಭಟನೆ ಹಿಂಪಡೆಯದಿದ್ದಲ್ಲಿ ನೀವೂ ಕೂಡ ಬೀದಿಗಿಳಿಯಿರಿ ಅಂತಾ ಸಿಎಎ ಬೆಂಬಲಿರನ್ನ ಪ್ರಚೋದಿಸಿದ್ರು, ಮಿಶ್ರಾರ ಈ ಹೇಳಿಕೆ ಹಿಂಸಾಚಾರದ ಕಿಚ್ಚಿಗೆ ತುಪ್ಪ ಸುರಿದಂತಾಗಿದೆ.

ಟ್ರಂಪ್ ಭದ್ರತೆಯಲ್ಲೇ ‘ಖಾಕಿ’ ಬ್ಯುಸಿ! ಈ ನಡುವೆ ಹಿಂಸಾಚಾರ ಹತ್ತಿಕ್ಕಬೇಕಾದ ಪೊಲೀಸ್ರು, ಅಮೆರಿಕ ಅಧ್ಯಕ್ಷ ಟ್ರಂಪ್ ಭದ್ರತೆಯಲ್ಲೇ ಬ್ಯುಸಿಯಾಗಿದ್ರು. ದೆಹಲಿ ಪೊಲೀಸರು ಹೆಚ್ಚಿನ ಸಂಖ್ಯೆ ಟ್ರಂಪ್ ಸೆಕ್ಯೂರಿಟಿಗೆ ನಿಯೋಜನೆಯಾಗಿದ್ರಿಂದ ಇತ್ತ ಹಿಂಸಾಚಾರವನ್ನ ತಡೆಗಟ್ಟಲು ಖಾಕಿಗಳ ಕೊರತೆ ಉಂಟಾಗಿದೆ. ಮತ್ತೊಂದೆಡೆ ಗೃಹ ಸಚಿವ ಅಮಿತ್ ಶಾ ಕೂಡ ಟ್ರಂಪ್​ ಕಾರ್ಯಕ್ರಮದಲ್ಲೇ ಮುಳುಗಿದ್ರು. ಇವೆಲ್ಲವೂ ಸಂಘರ್ಷ ತಾರಕಕ್ಕೇರಲು ಕಾರಣವಾಗಿದೆ.

ಒಟ್ನಲ್ಲಿ, ಅಮೆರಿಕ ಅಧ್ಯಕ್ಷರ ಭೇಟಿ ವೇಳೆಯೇ ದೆಹಲಿ ಧಗ ಧಗ ಉರಿದಿದ್ದು, ಹಿಂಸಾಚಾರ ತಾರಕಕ್ಕೇರಿದೆ. ಉದ್ರಿಕ್ತರ ಉದ್ದಟತನ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತದ ಮಾನ ಹರಾಜಾಗುವಂತೆ ಮಾಡಿದೆ.

Follow us on

Related Stories

Most Read Stories

Click on your DTH Provider to Add TV9 Kannada