ದೆಹಲಿ: ಬಹು ನಿರೀಕ್ಷಿತ ಉತ್ತರಪ್ರದೇಶದ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಇದೇ ಆಗಸ್ಟ್ 5ರಂದು ಪ್ರಧಾನಿ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ವಿಷ್ಣು ದೇಗುಲದ ಮಾದರಿಯಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಈ ಮೊದಲು ದೇವಾಲಯಕ್ಕೆ 3 ಗೋಪುರ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿತ್ತು ಆದರೆ ಈಗ ಐದು ಗೋಪುರ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿದೆ. ದೇವಾಲಯದ ಉದ್ದ, ಅಗಲ, ಎತ್ತರ ಹೆಚ್ಚಿಸಲು ನಿರ್ಧರಿಸಲಾಗಿದೆ. ದೇವಾಲಯಕ್ಕೆ ಮೊದಲು ಬೆಳ್ಳಿ ಇಟ್ಟಿಗೆ ಇಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಬೆಳ್ಳಿ ಇಟ್ಟಿಗೆ ಇಟ್ಟು ಶಂಕುಸ್ಥಾಪನೆ ನೆರವೇರಿಸುತ್ತಾರೆ. 60 ಅಡಿ ಆಳ ಪಾಯ ತೆಗೆದು ಅಡಿಪಾಯ ಹಾಕಲಾಗುತ್ತೆ.
ಆಗಸ್ಟ್ 5 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.15 ರವರೆಗೆ ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಗೆ ಭೇಟಿ ನೀಡಿ ಅಂದೇ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸುವ ಸಾಧ್ಯತೆ ಇದೆ. ಮಧ್ಯಾಹ್ನ 12.15 ಕ್ಕೆ ಮಂದಿರ ನಿರ್ಮಾಣಕ್ಕೆ ಬೆಳ್ಳಿ ಇಟ್ಟಿಗೆ ಇಟ್ಟು ಶಂಕುಸ್ಥಾಪನೆ ಮಾಡಲಾಗುತ್ತೆ. ಆಗಸ್ಟ್ 3ರಿಂದ 3 ದಿನಗಳ ಕಾಲ ಅಯೋಧ್ಯೆಯಲ್ಲಿ ವೈದಿಕ ಪೂಜೆ, ಪುನಸ್ಕಾರ ನಡೆಯುತ್ತೆ. ಆಗಸ್ಟ್ 4 ರಂದು ಅಯೋಧ್ಯೆಯಲ್ಲಿ ರಾಮಾಚಾರ್ಯ ಪೂಜೆ ನಡೆಯಲಿದೆ. ಇನ್ನು ಅಯೋಧ್ಯೆಗೆ ಪ್ರಧಾನಿ ಭೇಟಿ ಬಗ್ಗೆ ಪ್ರಧಾನಿ ಕಚೇರಿಯಿಂದ ಅಧಿಕೃತ ಹೇಳಿಕೆ ಮಾತ್ರ ಬಾಕಿ ಇದೆ. ಯುಪಿ ಸರ್ಕಾರ, ಅಯೋಧ್ಯೆಯ ರಾಮಮಂದಿರ ಟ್ರಸ್ಟ್ ಎಲ್ಲ ಸಿದ್ದತೆ ಮಾಡಿಕೊಳ್ಳುತ್ತಿದೆ.
Published On - 11:23 am, Mon, 20 July 20