AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಕ್ಸ್ ಕುತೂಹಲ ಮೂಡಿಸಿರುವ ಮೋದಿ-ತೋಕಾಯೇವ್ ಭೇಟಿ; ಮಧ್ಯ ಏಷ್ಯಾಗೆ ಭಾರತದ ದಾರಿ ಸುಲಭಗೊಳ್ಳುವ ನಿರೀಕ್ಷೆ

ಬ್ರಿಕ್ಸ್ ಶೃಂಗಸಭೆಯ ಆಚೆ ವಿವಿಧ ದೇಶಗಳೊಂದಿಗೆ ಭಾರತ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿದೆ. ಅದರಲ್ಲಿ ಕಝಾಕಿಸ್ತಾನವೂ ಒಂದು. ಕಝಾಕಿಸ್ತಾನ್ ಅಧ್ಯಕ್ಷ ಕಾಸಿಮ್ ಜೊಮಾರ್ಟ್ ತೋಕಾಯೇವ್ ಅವರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ. ಮಧ್ಯ ಏಷ್ಯಾದ ಭಾಗದಲ್ಲಿ ಅತಿದೊಡ್ಡ ದೇಶವಾಗಿರುವ ಕಝಾಕಿಸ್ತಾನ ಭಾರತದ ಪಾಲಿಗೆ ಮಹತ್ವವೆನಿಸುತ್ತದೆ. ಅದರೊಂದಿಗಿನ ಉತ್ತಮ ಬಾಂಧವ್ಯವು ಭಾರತಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.

ಬ್ರಿಕ್ಸ್ ಕುತೂಹಲ ಮೂಡಿಸಿರುವ ಮೋದಿ-ತೋಕಾಯೇವ್ ಭೇಟಿ; ಮಧ್ಯ ಏಷ್ಯಾಗೆ ಭಾರತದ ದಾರಿ ಸುಲಭಗೊಳ್ಳುವ ನಿರೀಕ್ಷೆ
ಬ್ರಿಕ್ಸ್ ಶೃಂಗಸಭೆಗೆ ಕಝಾಕ್ ಪ್ರಧಾನಿ ಟೋಕಾಯೇವ್ ಅವರನ್ನು ಬರಮಾಡಿಕೊಂಡ ಪ್ರಧಾನಿ ಮೋದಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 13, 2026 | 12:51 PM

Share

ನವದೆಹಲಿ, ಸೆಪ್ಟೆಂಬರ್ 13: ರಾಷ್ಟ್ರ ರಾಜಧಾನಿ ನಗರಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ, ರಷ್ಯಾ, ಇರಾನ್ ನೇತಾರರ ಜೊತೆ ಭಾರತದ ಪ್ರಧಾನಿ ಭೇಟಿ ಎಲ್ಲರ ಗಮನ ಸೆಳೆಯುತ್ತಿದೆ. ಇದರ ಜೊತೆಗೆ, ಕಝಾಕಿಸ್ತಾನದ ಅಧ್ಯಕ್ಷರೊಂದಿಗೆ ನರೇಂದ್ರ ಮೋದಿ ಅವರ ಭೇಟಿ ಬಹಳ ಮಹತ್ವ ಎನಿಸಲಿದೆ. ನರೇಂದ್ರ ಮೋದಿ ಮತ್ತು ಕಝಾಕಿಸ್ತಾನದ ಅಧ್ಯಕ್ಷ ಕಾಸಿಮ್-ಜೋಮಾರ್ಟ್ ತೋಕಾಯೇವ್ (Kassym-Jomart Tokayev) ನಡುವೆ ನಡೆಯಲಿರುವ ದ್ವಿಪಕ್ಷೀಯ ಸಭೆಯು ಭಾರತ ಮತ್ತು ಮಧ್ಯ ಏಷ್ಯಾ (Central Asia) ನಡುವಿನ ರಾಜತಾಂತ್ರಿಕ ಹಾಗೂ ಆರ್ಥಿಕ ಬಾಂಧವ್ಯದಲ್ಲಿ ಹೊಸ ಸಂಚಲನ ಮೂಡಿಸಲಿದೆ.

ಕಝಾಕಿಸ್ತಾನವು ಭಾರತದ ಪಾಲಿಗೆ ನಿಜಕ್ಕೂ ಮಹತ್ವದ ದೇಶವಾಗಿದೆ. ಅದು ಇರುವ ಪ್ರದೇಶವು ಆಯಕಟ್ಟಿನದ್ದಾಗಿದೆ. ಮೋದಿ ಮತ್ತು ತೋಕಾಯೇವ್ ದ್ವಿಪಕ್ಷೀಯ ಸಭೆ ಪೂರ್ಣ ಫಲಪ್ರದವಾದರೆ ಭಾರತಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಕಝಾಕಿಸ್ತಾನಕ್ಕೂ ಅನುಕೂಲಗಳಿವೆ.

ಇದನ್ನೂ ಓದಿ: ಬ್ರಿಕ್ಸ್ ಯಾರ ವಿರುದ್ಧವೂ ಇಲ್ಲ: ಪಾಶ್ಚಿಮಾತ್ಯರಿಗೆ ಪ್ರಧಾನಿ ಮೋದಿ ಖಡಕ್ ಸಂದೇಶ, ಜಾಗತಿಕ ಆಡಳಿತಕ್ಕೆ 10 ಅಂಶಗಳ ಸೂತ್ರ

  • ಮಧ್ಯ ಏಷ್ಯಾಕ್ಕೆ ಸಾರಿಗೆ ಸೇತುವೆ: ಕಝಾಕಿಸ್ತಾನ್ ಮಧ್ಯ ಏಷ್ಯಾದ ಅತ್ಯಂತ ದೊಡ್ಡ ಆರ್ಥಿಕತೆಯಾಗಿದ್ದು, ಭಾರತವು ಈ ಪ್ರದೇಶಕ್ಕೆ ನೇರ ಪ್ರವೇಶ ಪಡೆಯಲು ‘ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್’ (INSTC) ಮತ್ತು ಕಝಾಕಿಸ್ತಾನದ ಡ್ರೈ ಪೋರ್ಟ್‌ಗಳ (Dry Ports) ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
  • ರಫ್ತು ಅಡೆತಡೆಗಳ ನಿವಾರಣೆ: ಉಭಯ ದೇಶಗಳ ನಡುವಿನ ವ್ಯಾಪಾರಕ್ಕೆ ಇರುವ ಸುಂಕ ಮತ್ತು ಲಾಜಿಸ್ಟಿಕ್ಸ್ ಅಡೆತಡೆಗಳನ್ನು ತೆರವುಗೊಳಿಸಿ, ಭಾರತೀಯ ಸರಕುಗಳನ್ನು ಕಝಾಕಿಸ್ತಾನ್ ಮೂಲಕ ರಷ್ಯಾ ಮತ್ತು ಯುರೋಪ್‌ಗೆ ತಲುಪಿಸುವ ಯೋಜನೆ ಸಭೆಯ ಮುಖ್ಯ ಭಾಗವಾಗಿದೆ.
  • ಕ್ಲಿಷ್ಟಕರ ಖನಿಜಗಳು ಮತ್ತು ಯುರೇನಿಯಂ: ಭಾರತದ ಇಂಧನ ಮತ್ತು ತಂತ್ರಜ್ಞಾನ ವಲಯಕ್ಕೆ ಅಗತ್ಯವಿರುವ ಕ್ಲಿಷ್ಟಕರ ಖನಿಜಗಳು (Rare Earth Elements) ಹಾಗೂ ಪರಮಾಣು ಶಕ್ತಿಗೆ ಬೇಕಾಗುವ ನೈಸರ್ಗಿಕ ಯುರೇನಿಯಂ ಪೂರೈಕೆಯಲ್ಲಿ ಕಝಾಕಿಸ್ತಾನ್ ಪ್ರಮುಖ ಪಾತ್ರ ವಹಿಸಲಿದೆ.
  • ತಂತ್ರಜ್ಞಾನ, ಡಿಜಿಟಲೀಕರಣ ಮತ್ತು ಬಾಹ್ಯಾಕಾಶ: ಎಐ (AI), ಡಿಜಿಟಲ್ ಮೂಲಸೌಕರ್ಯ, ಔಷಧೀಯ ವಲಯ (Pharmaceuticals), ರಕ್ಷಣೆ ಹಾಗೂ ಬಾಹ್ಯಾಕಾಶ ರಂಗದಲ್ಲಿ ಜಂಟಿ ಹೂಡಿಕೆಗಳನ್ನು ವಿಸ್ತರಿಸಲು ಎರಡೂ ದೇಶಗಳು ಸಮ್ಮತಿಸಿವೆ.
  • ಭೌಗೋಳಿಕ-ರಾಜಕೀಯ ಮಹತ್ವ: ಚೀನಾ ಮತ್ತು ರಷ್ಯಾಗಳ ಪ್ರಭಾವ ಹೆಚ್ಚಿರುವ ಮಧ್ಯ ಏಷ್ಯಾ ಪ್ರದೇಶದಲ್ಲಿ, ಗ್ಲೋಬಲ್ ಸೌತ್‌ನ (Global South) ಪ್ರಮುಖ ಧ್ವನಿಯಾಗಿರುವ ಭಾರತದೊಂದಿಗೆ ಸಹಭಾಗಿತ್ವ ಬೆಳೆಸುವುದು ಕಝಾಕಿಸ್ತಾನಕ್ಕೂ ಅಗತ್ಯವಾಗಿದೆ. ಬ್ರೆಜಿಲ್, ಯುಎಇ, ಸೌತ್ ಆಫ್ರಿಕ, ಇಂಡೋನೇಷ್ಯಾ, ಈಜಿಪ್ಟ್ ಮೊದಲಾದ ದೇಶಗಳೊಂದಿಗೆ ಸಂಬಂಧ ಗಟ್ಟಿಗೊಳಿಸಲು ಅದಕ್ಕೊಂದು ವೇದಿಕೆ ಸಿಕ್ಕಂತಾಗುತ್ತದೆ.

ಇದನ್ನೂ ಓದಿ: 9/11 ದಾಳಿಗೂ ಮುನ್ನವೇ ಭಾರತದ ಮೇಲೂ ಕಣ್ಣಿಟ್ಟಿದ್ದ ಲಾಡೆನ್: ಸಿಐಎ ರಹಸ್ಯ ಕಡತಗಳಿಂದ ಆಘಾತಕಾರಿ ಸತ್ಯ ಬಹಿರಂಗ

ಈ ಸಭೆಯು ಕೇವಲ ದ್ವಿಪಕ್ಷೀಯ ಮಾತುಕತೆಯಾಗಿರದೆ, ಇಡೀ ಮಧ್ಯ ಏಷ್ಯಾ ವಲಯದೊಂದಿಗೆ ಭಾರತದ ಬಾಂಧವ್ಯವನ್ನು ಗಟ್ಟಿಗೊಳಿಸುವ ಆಯಕಟ್ಟಿನ ‘ಹೆಬ್ಬಾಗಿಲು’ ಎಂದು ವಿಶ್ಲೇಷಿಸಲಾಗಿದೆ. ಮಧ್ಯ ಏಷ್ಯಾ ಭಾಗದಲ್ಲಿ ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ತುರ್ಕ್​ಮೆನಿಸ್ತಾನ್ ಮತ್ತು ಉಜ್ಬೆಕಿಸ್ತಾನ್ ದೇಶಗಳಿವೆ. ಇದರಲ್ಲಿ ಅತಿದೊಡ್ಡದು ಕಝಾಕಿಸ್ತಾನ. ಇಷ್ಟೂ ದೇಶಗಳು ಒಂದು ಸಮಯದಲ್ಲಿ ಸೋವಿಯತ್ ರಷ್ಯಾದ ಭಾಗಗಳಾಗಿದ್ದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us