ಮಹಾಮಾರಿ ತಡೆಗೆ ನಾಳೆಯಿಂದ ‘ಸಂಜೀವಿನಿ ಲಸಿಕೆ’ ಪರ್ವ! ಪ್ರತಿ ಲಸಿಕಾ ಕೇಂದ್ರದಲ್ಲಿ ದಿನಕ್ಕೆ100 ಮಂದಿಗೆ ಲಸಿಕೆ

|

Updated on: Jan 15, 2021 | 11:51 AM

ನಾಳೆಯಿಂದ(ಜ.16) ದೇಶಾದ್ಯಂತ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ನಡೆಯಲಿದ್ದು ನಾಳೆ ಬೆಳಿಗ್ಗೆ 10.30 ಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಮಹಾಮಾರಿ ತಡೆಗೆ ನಾಳೆಯಿಂದ ‘ಸಂಜೀವಿನಿ ಲಸಿಕೆ’ ಪರ್ವ! ಪ್ರತಿ ಲಸಿಕಾ ಕೇಂದ್ರದಲ್ಲಿ ದಿನಕ್ಕೆ100 ಮಂದಿಗೆ ಲಸಿಕೆ
ಪ್ರಧಾನಿ ನರೇಂದ್ರ ಮೋದಿ (FILE PHOTO)
Follow us on

ಬೆಂಗಳೂರು: ಕೊರೊನಾಗೆ ಬ್ರೇಕ್ ಹಾಕಲು ವ್ಯಾಕ್ಸಿನ್​ ಪರ್ವಕ್ಕೆ ಮೋದಿ ಚಾಲನೆ ನೀಡಲಿದ್ದಾರೆ. ನಾಳೆಯಿಂದ (ಜ. 16) ದೇಶಾದ್ಯಂತ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ನಡೆಯಲಿದ್ದು ನಾಳೆ ಬೆಳಗ್ಗೆ 10.30 ಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಚಾಲನೆಗೆ ದೆಹಲಿಯ ಎರಡು ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಬಳಿಕ ಕೆಲ ಫಲಾನುಭವಿಗಳೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ. ಶನಿವಾರದಿಂದ ದೇಶದಲ್ಲಿ 3 ಸಾವಿರ‌ ಸ್ಥಳಗಳಲ್ಲಿ ಲಸಿಕೆ ನೀಡಿಕೆ ಶುರುವಾಗುತ್ತೆ. ಜನವರಿ ಅಂತ್ಯದ ವೇಳೆಗೆ 5 ಸಾವಿರ ಸ್ಥಳದಲ್ಲಿ ಲಸಿಕೆ ನೀಡಲಾಗುತ್ತೆ. ಹಾಗೂ ಮಾರ್ಚ್ ಅಂತ್ಯಕ್ಕೆ ದೇಶದ 12 ಸಾವಿರ ಸ್ಥಳದಲ್ಲಿ ಲಸಿಕೆ ನೀಡಲಾಗುತ್ತೆ.

ಪ್ರತಿ ಲಸಿಕಾ ಕೇಂದ್ರದಲ್ಲಿ ದಿನಕ್ಕೆ ನೂರು ಮಂದಿಗೆ ಲಸಿಕೆ
ಮೊದಲ ದಿನ ಪ್ರತಿಯೊಂದು ಸ್ಥಳದಲ್ಲಿ ನೂರು ಮಂದಿಗೆ ಲಸಿಕೆ ನೀಡಲಾಗುತ್ತೆ. ಪ್ರತಿಯೊಂದು ಲಸಿಕಾ ಕೇಂದ್ರದಲ್ಲಿ ಐದು ಮಂದಿ ಸಿಬ್ಬಂದಿ ನಿಯೋಜನೆ ಮಾಡಲಾಗಿರುತ್ತೆ. ಪ್ರತಿಯೊಂದು ಲಸಿಕಾ ಕೇಂದ್ರದಲ್ಲಿ ಯಾವುದಾದರೊಂದು ಬ್ರಾಂಡ್ ಲಸಿಕೆ ಮಾತ್ರ ಲಭ್ಯವಿರುತ್ತೆ. ಮೊದಲ ಡೋಸ್ ಬ್ರಾಂಡ್ ಲಸಿಕೆಯನ್ನ ಎರಡನೇ ಡೋಸ್ ಆಗಿ ನೀಡೋದ್ರಿಂದ ಲಸಿಕೆಯ ಬ್ರಾಂಡ್ ಗೊಂದಲಕ್ಕೆ ಅವಕಾಶ ಇರುವುದಿಲ್ಲ. ಲಸಿಕೆ ಬಗೆಗಿನ ಮಾಹಿತಿಯನ್ನು ಕೋ ವಿನ್ ಆ್ಯಪ್​ನಲ್ಲಿ ದಾಖಲು ಮಾಡಲಾಗುತ್ತೆ.

ವಾರದಲ್ಲಿ ನಾಲ್ಕು ದಿನ ಅಂದ್ರೆ ಸೋಮವಾರ, ಬುಧವಾರ, ಗುರುವಾರ, ಶನಿವಾರ ಕೊರೊನಾ ಲಸಿಕೆ ನೀಡಿಕೆಗೆ ಮೀಸಲು. ಮತ್ತು ಮಂಗಳವಾರ, ಶುಕ್ರವಾರ ಇತರೆ ಆರೋಗ್ಯ ಕಾರ್ಯಕ್ರಮ, ಲಸಿಕೆ ನೀಡಿಕೆಗೆ ಮೀಸಲು. ಕೊರೊನಾ ಲಸಿಕೆ ನೀಡಿಕೆಯಿಂದ ಬೇರೆ ಹೆಲ್ತ್‌ಕೇರ್ ಚಟುವಟಿಕೆಗೆ ತೊಂದರೆ ಆಗಬಾರದು ಎಂದು ಈ ರೀತಿ ದಿನಗಳನ್ನು ಗುರುತು ಮಾಡಲಾಗಿದೆ. ಶನಿವಾರವೇ ದೇಶದ 3 ಸಾವಿರ ಸ್ಥಳಗಳಲ್ಲಿ 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ‌ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Published On - 11:50 am, Fri, 15 January 21